ಪಿಆರ್ ಓ,ಪಿಆರ್ ಓ ಗಳಿಗೆ ಏರ್ಪಡಿಸಿದ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಚಾಲನೆ
ಲೋಕದರ್ಶನ ವರದಿ
ಯಲಬುರ್ಗ್ 16: ವಿಧಾನಸಭಾ ಕ್ಷೇತ್ರ-63ರ ವ್ಯಾಪ್ತಿಯಲ್ಲಿ ಮೇ-10 ರಂದು ನಡೆಯುವ ವಿಧಾನಸಭಾ ಸಾರ್ವತ್ರಿಕ ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಲು ರವಿವಾರ ಯಲಬುರ್ಗಾ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 424-ಪಿಆರ್ಒ, 353-ಎಪಿಆರ್ಒ ಹಾಗೂ ಸೆಕ್ಟರ್ ಆಫಿಸರ್ ಸೇರಿದಂತೆ ಒಟ್ಟು-777 ಸಿಬ್ಬಂದಿಗಳಿಗೆ ಎರ್ಪಡಿಸಿದ್ದ ತರಬೇತಿ ಕಾರ್ಯಾಗಾರವನ್ನು ಜಿಲ್ಲಾಧಿಕಾರಿಗಳು ಚಾಲನೆ ನೀಡಿ, ಚುನಾವಣಾ ಕಾರ್ಯಕ್ಕೆ ನೇಮಕವಾದ ಎಲ್ಲಾ ಸಿಬ್ಬಂದಿಗಳು ತರಬೇತಿಯನ್ನು ವ್ಯವಸ್ಥಿತವಾಗಿ ಪಡೆದುಕೊಂಡು ಚುನಾವಣಾ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.ನಂತರ ವಿವಿದ ತರಬೇತಿ ಕೊಠಡಿಗಳು ಮತ್ತು ಮತಯಂತ್ರಗಳ ಶೇಖರಣಾ ಕೊಠಡಿ ಅದರ ಸುತ್ತಲೂ ಅಳವಸಿದ ಸಿಸಿ ಟಿವಿ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಗಳು ಯಲಬುಗರ್ಗಾ ವಿಧಾನಸಭಾ ಕ್ಷೇತ್ರ-63 ಕಾವ್ಯಾರಾಣಿ ಕೆ.ವಿ ರವರು ಎಲ್ಲಾ ತರಬೇತಿ ಕೊಠಡಿಗಳಿಗೆ ಭೇಟಿ ನೀಡಿ, ತರಬೇತಿಯನ್ನು ನೀಡಿದರು, ತರಬೇತಿ ನಿರತ ಪಿಆರ್ಒ ಮತ್ತು ಎಪಿಆರ್ಒ, ಹಾಗೂ ಸೆಕ್ಟರ್ ಆಫಿಸರ್ ಗಳು ತರಬೇತಿಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಂಡು, ತರಬೇತಿ ಮತ್ತು ಚುನಾವಣಾ ಕಾರ್ಯದ ಕುರಿತು ಪ್ರಶ್ನೆಗಳು ಇದ್ದಲ್ಲಿ ಮಾಸ್ಟರ್ ಟ್ರೇನರ್, ಮತ್ತು ಆರ್ ಓ ಕಛೇರಿಯಲಿ ಇರುವ ಸಿಬ್ಬಂದಿಗಳೋಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಸುಕ್ತ ಪರಿಹಾರ ಪಡೆದುಕೊಂಡು ಹೊಗಲು ಸೂಚಿಸಿದರು.
ಈ ಭಾರಿ ತಾಲೂಕಿಗೆ -5 ರಂತೆ ವಿಶೇಷ ಮತಗಟ್ಟೆಗಳನ್ನು ಮಾಡಿದ್ದು ಅದರಲ್ಲಿ ಮಾದರಿ ಮತಗಟ್ಟೆ, ಸಖಿ ಮತಗಟ್ಟೆ, ವಿಶೇಷ ಚೇತನರ ಸ್ನೇಹಿ ಮತಗಟ್ಟೆ ಗಳಿದ್ದು, ಆಯಾ ಮತಗಟ್ಟೆಗಳಲ್ಲಿ ನಿಯೋಜನೆಗೊಂಡ ಸಿಬ್ಬಂದಿಗಳು ವಿಶೆಷ ಮತಗಟ್ಟೆಯಲ್ಲಿ ಪ್ರತಿಶತ 100% ರಷ್ಟು ಮತದಾನವಾಗುವಂತೆ ಗಮನ ಹರಿಸಬೇಕು ಎಂದರು.
ಸಹಾಯಕ ಚುನಾವಣಾಧಿಕಾರಿಗಳಾದ ವಿಠಲ್ ಚೌಗಲೆ, ಕುಕನೂರು ತಾಲೂಕ ತಹಸಿಲ್ದಾರರಾದ ನೀಲಪ್ರಭಾ ಬಬಲದ, ಯಲಬುರ್ಗಾ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಂತೋಷ ಬಿರಾದರ್, ಕುಕನೂರ ತಾಲೂಕ ಸಹಾಯಕ ನಿರ್ದೇಶಕ ವೆಂಕಟೇಶ್ ವಂದಾಲ್, ಉಪ ತಹಶೀಲ್ದಾರ ವಿಜಯಕುಮಾರ ಗೂಡೂರ, ಸೆಕ್ಟರ್ ಆಫೀಸರ್ ಮಾಸ್ಟರ್ ಟ್ರೇನರ್, ಪಿ.ಆರ್.ಓ, ಎ.ಪಿ.ಆರ್.ಓ, ಪಿ.ಓ ತಹಶೀಲ್ ಮತ್ತು ತಾಲೂಕ ಪಂಚಾಯತ್ ಸಿಬ್ಬಂದಿಗಳು ಹಾಜರಿದ್ದು.