ಗುರುಪೂರ್ಣಿಮೆಯ ಸಂಭ್ರಮ
ಲೋಕದರ್ಶನ ವರದಿ
ಧಾರವಾಡ 29 : ಜೆ ಎಸ್ ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಗುರುಪೂರ್ಣಿಮೆಯನ್ನು ಸಂಭ್ರಮದೊಂದಿಗೆ ಆಚರಿಸಲಾಯಿತು. ಹತ್ತನೇ ವರ್ಗದ ಮಕ್ಕಳು ಗುರುಗಳ ಪಾದಗಳಿಗೆ ನಮಸ್ಕರಿಸಿ ಪುಷ್ಪವೃಷ್ಠಿಯೊಂದಿಗೆ ಭಕ್ತಿ ಪೂರ್ವಕವಾಗಿ ಗುರು ನಮನ ಸಲ್ಲಿಸಿದರು. ಮುಖ್ಯೋಪಾಧ್ಯಾಯರಾದ ಮೈನಾವತಿ ಎಸ್ ದಿವಟೆ ಇವರು ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದರು. ಎಲ್ಲ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.