ಬಂಧನ ಪ್ರಶ್ನಿಸಿದ್ದ ರಾಜ್ ಕುಂದ್ರಾ ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಬಂಧನ ಪ್ರಶ್ನಿಸಿದ್ದ  ರಾಜ್ ಕುಂದ್ರಾ    ಮನವಿ ವಜಾಗೊಳಿಸಿದ ಬಾಂಬೆ ಹೈಕೋರ್ಟ್

ಮುಂಬೈ, ಅ 7  ಅಶ್ಲೀಲ ಚಿತ್ರ ದಂಧೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ  ಉದ್ಯಮಿ,  ನಟಿ ಶಿಲ್ಪಶೆಟ್ಟಿ ಪತಿ  ರಾಜ್ ಕುಂದ್ರಾ   ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು  ಬಾಂಬೆ ಹೈಕೋರ್ಟ್  ತಳ್ಳಿಹಾಕಿದೆ.  

ತಮ್ಮ ಬಂಧನವನ್ನು ಪ್ರಶ್ನಿಸಿ ಮತ್ತು ಕೂಡಲೇ ಬಿಡುಗಡೆ ಮಾಡುವಂತೆ ಕೋರಿ ರಾಜ್ ಕುಂದ್ರಾ,  ಅಪ್ತ  ರಿಯಾನ್ ಥಾರ್ಪೆ  ಸಲ್ಲಿಸಿದ್ದ  ಮೇಲ್ಮನವಿಯನ್ನು ಕೋರ್ಟ್  ವಜಾಗೊಳಿಸಿದೆ.
ನ್ಯಾಯಾಲಯ ಅರ್ಜಿ ತಿರಸ್ಕರಿಸುವ ಹಿನ್ನೆಲೆಯಲ್ಲಿ ರಾಜ್ ಕುಂದ್ರಾ ಬಂಧನ ಮುಂದುವರೆಯಲಿದೆ
ಜುಲೈ 19 ರಂದು ಕುಂದ್ರಾ ಅವರನ್ನು ಪೊಲೀಸರು  ಬಂಧಿಸಿದ್ದರು.ನಂತರ 27ರಂದು ಮುಂಬೈನ ನ್ಯಾಯಾಲಯ  ರಾಜ್ ಕುಂದ್ರಾಗೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸಿತ್ತು.

ಸುದ್ದಿ ಓದಿ