29ನೇ ಶಿವಾನುಭವ ಗೋಷ್ಠಿಯೂ ಪತ್ರಕರ್ತರಾದ ಸುಭಾಸ್
ಮೂಡಲಗಿ 10: ಸ್ಥಳೀಯ ಗೃಹಸ್ಥಾಶ್ರಮ ಆಧ್ಯಾತ್ಮಿಕ ಕೇಂದ್ರ ಹಾಗೂ ಗಾರ್ಡನ್ ಅಭಿವೃದ್ದಿ ಸಂಸ್ಥೆಗಳ ಆಶ್ರಯದಲ್ಲಿ ಹುಣ್ಣಿಮೆ ಪ್ರಯುಕ್ತ 29ನೇ ಶಿವಾನುಭವ ಗೋಷ್ಠಿಯೂ ಡಿ.11 ರಂದು ಸಂಜೆ 6ಗಂಟೆಗೆ ನಾಗಲಿಂಗನಗರದ ಪತ್ರಕರ್ತರಾದ ಸುಭಾಸ್ ಗೊಡ್ಯಾಗೋಳ ನಿವಾಸದಲ್ಲಿ ಹಮ್ಮಿಕೊಳ್ಳಲಾಗಿದ.
ಸಂಜೆ 6ಗಂಟೆಗೆ ಸ್ಥಳೀಯ ಕಲಾವಿದರಿಂದ ಭಜನಾ ಕಾರ್ಯಕ್ರಮ ಜರುಗಲಿದೆ ಹಾಗೂ ಭಾಗೋಜಿಕೊಪ್ಪ ಮುನ್ಯಾಳ ರಂಗಪೂರದ ಮ.ಘ.ಚ. ಶ್ರೀ ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮಿಜೀ, ಕಂಕಣವಾಡಿಯ ಶ್ರೀ ಮಾರುತಿ ಶರಣರು, ನಾಗನೂರ ಜಗದ್ಗುರು ರೇಣುಕಾಚಾರ್ಯ ಶಿವಲಿಂಗ ಆಶ್ರಮದ ಮಾತೋಶ್ರೀ ಕಾವ್ಯಾಶ್ರೀ, ವೇದಮೂರ್ತಿ ಶಿವಪುತ್ರಯ್ಯ ಪೂಜ್ಯರಿಂದ ಪ್ರವಚನ ಕಾರ್ಯಕ್ರಮ ನಡೆಯುವುದು ಎಂದು ಗಾರ್ಡನ್ ಅಭಿವೃದ್ದಿ ಸಂಸ್ಥೆಯ ಅಧ್ಯಕ್ಷ ಸುಧೀರ ನಾಯರ್ ತಿಳಿಸಿದ್ದಾರೆ.