ಟೆಕ್ಸಾಸ್: ವ್ಯಕ್ತಿಯೊಬ್ಬರಲ್ಲಿ ಅಪರೂಪದ ಮಂಕಿಪಾಕ್ಸ್ ವೈರಸ್ ಸೋಂಕು ಪತ್ತೆ

ಟೆಕ್ಸಾಸ್: ವ್ಯಕ್ತಿಯೊಬ್ಬರಲ್ಲಿ ಅಪರೂಪದ ಮಂಕಿಪಾಕ್ಸ್ ವೈರಸ್ ಸೋಂಕು ಪತ್ತೆ

  ವಾಷಿಂಗ್ಟನ್, ಜುಲೈ ಅಮೆರಿಕಾದ ಟೆಕ್ಸಾಸ್‌ನಲ್ಲಿ ವ್ಯಕ್ತಿಯೊಬ್ಬರು ಮಂಕಿಪಾಕ್ಸ್ ವೈರಸ್ ಸೋಂಕಿಗೆ ಒಳಗಾದ ಅಪರೂಪದ ಪ್ರಕರಣ ಪತ್ತೆಯಾಗಿದೆ ಎಂದು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಿಡಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
  "ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಸಿಡಿಸಿ ಮತ್ತು ಟೆಕ್ಸಾಸ್ ಡಿಪಾರ್ಟ್ಮೆಂಟ್ ಆಫ್ ಸ್ಟೇಟ್ ಹೆಲ್ತ್ ಸರ್ವೀಸಸ್ ಜುಲೈ 15 ರಂದು ನೈಜೀರಿಯಾದಿಂದ ಅಮೆರಿಕಾಗೆ ಪ್ರಯಾಣಿಸಿದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪ್ರಕರಣವನ್ನು ದೃಢಪಡಿಸಿದೆ" ಎಂದು ಪ್ರಕಟಣೆ ಶುಕ್ರವಾರ ತಿಳಿಸಿದೆ.
  ಸೋಂಕಿತ ವ್ಯಕ್ತಿಯನ್ನು ಪ್ರಸ್ತುತ ಡಲ್ಲಾಸ್ ನಗರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಮೂಲತಃ ಅಮೆರಿಕಾ ನಿವಾಸಿಯಾದ ವ್ಯಕ್ತಿಯು ನೈಜೀರಿಯಾದ ಲಾಗೋಸ್‌ನಿಂದ ಡಲ್ಲಾಸ್‌ಗೆ ಅಟ್ಲಾಂಟಾದಲ್ಲಿ ಪ್ರಯಾಣ ಬೆಳೆಸಿದ್ದು, ಈ ಸಂದರ್ಭದಲ್ಲಿ ಆರೋಗ್ಯ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರಬಹುದಾದ ಇತರ ಪ್ರಯಾಣಿಕರನ್ನು ಸಂಪರ್ಕಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
  ವಿಮಾನಗಳಲ್ಲಿ ಮತ್ತು ವಿಮಾನ ನಿಲ್ದಾಣಗಳಲ್ಲಿ ಇತರರಿಗೆ ಉಸಿರಾಟದ ಮೂಲಕ ಮಂಕಿಪಾಕ್ಸ್ ಹರಡುವುದು ಕಡಿಮೆ.ಹೆಚ್ಚಿನ ಮಂಕಿಪಾಕ್ಸ್ ಸೋಂಕುಗಳು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತವೆ ಮತ್ತು ಜ್ವರದಂತಹ ಅನಾರೋಗ್ಯವನ್ನು ಹೊಂದಿರುತ್ತವೆ, ಇದು ದುಗ್ಧರಸ ಗ್ರಂಥಿಗಳ ಊತ ಮತ್ತು ದೇಹದ ಮೇಲೆ ವ್ಯಾಪಕ ದದ್ದುಗಳಿಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.

ಸುದ್ದಿ ಓದಿ