ದಾಳಿ ಭೀತಿ: ಕಾಬೂಲ್ ವಿಮಾನ ನಿಲ್ದಾಣದಿಂದ ತೆರಳುವಂತೆ ಅಮೆರಿಕ ಪ್ರಜೆಗಳಿಗೆ ಸೂಚನೆ
ವಾಷಿಂಗ್ಟನ್, ಆ 29: ತಾಲಿಬಾನಿಗಳ ದಾಳಿಯ ಎಚ್ಚರಿಕೆ ಹಿನ್ನೆಲೆಯಲ್ಲಿ ಅಫ್ಗಾನಿಸ್ತಾನದ ಜನರಿಗೆ ಕಾಬೂಲ್ ವಿಮಾನ ನಿಲ್ದಾಣದಿಂದ ದೂರವಿರುವಂತೆ ಕರೆ ನೀಡಲಾಗುತ್ತಿದೆ.
ಅಮೆರಿಕದ ಪ್ರಜೆಗಳಿಗೆ ವಿಮಾನ ನಿಲ್ದಾಣವನ್ನು ತುರ್ತಾಗಿ ತೆರವುಗೊಳಿಸುವಂತೆ ಅಲ್ಲಿನ ರಾಯಭಾರಿ ಕಚೇರಿ ಸೂಚನೆ ನೀಡಿದೆ.
ವಿಮಾನನಿಲ್ದಾಣದಿಂದ ತೆರಳುವಂತೆ, ಅಲ್ಲಿನ ಎಲ್ಲಾ ಗೇಟುಗಳಿಂದ ದೂರವಿರುವಂತೆ ಹಾಗೂ ನಿಲ್ದಾಣಕ್ಕೆ ಪ್ರಯಾಣ ಮಾಡುವುದನ್ನು ತಡೆಯುವಂತೆ ರಾಯಭಾರಿ ಕಚೇರಿ ಎಚ್ಚರಿಕೆಯ ಸಂದೇಶ ರವಾನಿಸಿದೆ.