ಮಹಲಿಂಗಪುರ

ತೇರದಾಳ ಶಾಸಕ ಸವದಿ ಅವರಿಂದ ವಾರ್ಡ್‌ಗಳಿಗೆ ಅನುದಾನ ವಿತರಣೆ ಮಾಡುವಲ್ಲಿ ತಾರತಮ್ಯ ಆರೋಪ !

ತೇರದಾಳ ಶಾಸಕ ಸವದಿ ಅವರಿಂದ ವಾರ್ಡ್‌ಗಳಿಗೆ ಅನುದಾನ ವಿತರಣೆ ಮಾಡುವಲ್ಲಿ ತಾರತಮ್ಯ ಆರೋಪ !

ಮಹಾಲಿಂಗಪುರ: ಸ್ಥಳೀಯ ಪುರಸಭೆ ಅಧ್ಯಕ್ಷರು ಹಾಗೂ ತೇರದಾಳ ಶಾಸಕ ಸಿದ್ದು ಸವದಿ ಅವರು 23ವಾರ್ಡ್‌ ಗಳಲ್ಲಿ ನನ್ನ ವಾರ್ಡ್‌ ಗೆ ಸಮ್ಮಂದಿಸಿದ ಅಭಿವೃದ್ಧಿ ಕಾರ್ಯಗಳ ಅನುದಾನ ಬೇರೆಡೆ ಹಾಕಿ ತಾರತಮ್ಯ ಎಸಗಿ ಬಸವನಗರದ 6ನೇ ವಾರ್ಡ್‌ ಮತದಾರರಿಗೆ ಅನ್ಯಾಯ ಮಾಡಿದ್ದು, ಈ ಲೋಪಕ್ಕೆ ಪರಿಹಾರ ಕಲ್ಪಿಸಿ ಎಂದು ಸದಸ್ಯೆ ಸವಿತಾ ಹುರಕಡ್ಲಿ ಪುರಸಭೆ ಆಡಳಿತಕ್ಕೆ ಈ ಮೂಲಕ ಒತ್ತಾಯಿಸಿದ್ದಾರೆ. 

ಸೋಮವಾರ 30ರಂದು ಪುರಸಭೆಯಲ್ಲಿ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಕೆಲ ವಾರ್ಡ್‌ ಗಳಿಗೆ ಕೋಟಿ ಕೋಟಿ ಹಣ ನೀಡಿ ನಮ್ಮ ಬಸವನಗರದ 6ನೇ ವಾರ್ಡ್‌ ಗೆ ಕೇವಲ ಲಕ್ಷ ಲೆಕ್ಕದಲ್ಲಿ ಮಾತ್ರ ಅನುದಾನ ನೀಡಿ ಕೈ ತೊಳೆದುಕ್ಕೊಂಡಿದ್ದು, ಇದು ನನಗೆ ಮಾಡಿದ ಮೋಸವಲ್ಲ ಇಲ್ಲಿಯ ನಿವಾಸಿಗಳಿಗೆ ಮಾಡಿದ ಮೋಸವಾಗಿದೆ.ಇದನ್ನು ಸರಿಪಡಿಸಿ ನ್ಯಾಯ ದೊರೆಕಿಸಿ ಏಕೆಂದರೆ ಭಾಜಪ ಪಕ್ಷಕ್ಕೆ ಇಲ್ಲಿಂದಲೇ ಹೆಚ್ಚಿನ ಮತಗಳು ಬಂದಿದ್ದು ಇವರ ಋಣ ತೀರಿಸಿ ವೃತಾ ರಾಜಕಾರಣ ಮಾಡಬೇಡಿ ಎಂದರು.  

ಪುರಸಭಾ ಸದಸ್ಯ ಜಾವೇದ ಭಾಗವಾನ ಮಾತನಾಡಿ ಪಟ್ಟಣಕ್ಕೆ 24-7 ಶುಧ್ಧ ಕುಡಿಯುವ ನೀರು ಯೋಜನೆಗೆ ಮಾಜಿ ಸಚಿವ ತಿಮ್ಮಾಪುರ ಅವಧಿಯಲ್ಲಿ ನೀಲನಕ್ಷೆಗೊಂಡು, ತದನಂತರ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ರಿಂದ ಶಂಕುಸ್ಥಾಪನೆಯಾಗಿ ದಶಕಗಳೇ ಉರುಳಿವೆ. ಪಟ್ಟಣದ ಜನತೆ ಶುಧ್ಧ ನೀರು ಕುಡಿಯಲು ಇನ್ನೂ ಯೋಗ ಕೂಡಿ ಬಂದಿಲ್ಲವೇ ಎಂದು ಶೀಘ್ರ ಕಾಮಗಾರಿಗೆ ಮತ್ತು ಸರಿಯಾಗಿ ಎಲ್ಲ ವಾರ್ಡ್‌ ಗಳಿಗೆ ಅನುದಾನ ವಿತರಣೆ ಮಾಡಲು ಒತ್ತಾಯಿಸಿದರು.  

ಪುರಸಭೆ ಸದಸ್ಯರಾದ ಶೇಖರ ಅಂಗಡಿ, ಪ್ರಹ್ಲಾದ್ ಸಣ್ಣಕ್ಕಿ, ರಾಜು ಚಮಕೇರಿ ಹಾಗೂ ಚನಬಸು ಯರಗಟ್ಟಿ ಅವರು ಮಂಗಳವಾರ ಸಂತೆ ಜರುಗುವ ಸ್ಥಳದಲ್ಲಿ ಪುರಸಭೆ ಮಳಿಗೆ ನಿರ್ಮಿಸುವ ಕುರಿತಾಗಿ ಚರ್ಚೆ ನಡೆಯಿತು.ಈ ಸಂದರ್ಭದಲ್ಲಿ ಇವರು ಪೇಟೆಗೆ ಆಗಮಿಸುವ ವ್ಯಾಪಾರಿಗಳ ಗಮನಕ್ಕೆ ತಂದು ನಿರ್ಣಯಿಸೋನ ಎಂದಾಗ ವಿರೋಧ ಪಕ್ಷದ ಸದಸ್ಯರು ಸಹ ಸಮ್ಮತಿಸಿದರು. 

 ಹಲವು ದಶಕಗಳಿಂದ ಸರಕಾರಿ ಶಾಲೆ ಹತ್ತಿರದ ತಿಪಶೆಟ್ಟಿ ಹೊಟೇಲ್ ಈಗ ಅರಿವೆ ಅಂಗಡಿಯಾಗಿದೆ ಇದರ ಬಾಡಿಗೆ ಎಲ್ಲಿ ಜಮಾ ಆಗುತ್ತಿದೆ ಇದು ಪುರಸಭೆ ಆಸ್ತಿಯಾಗಿದ್ದು ಇದನ್ನು ಮುಟ್ಟುಗೋಲು ಹಾಕಿಕೊಂಡು ಪ್ರದೇಶದ ಸುತ್ತ ಬೇಲಿ ಅಳವಡಿಸಿಬೇಕೆಂದು ಸದಸ್ಯ ಪ್ರಹ್ಲಾದ್ ಸಣ್ಣಕ್ಕಿ ಪುರಸಭೆಗೆ ಒತ್ತಾಯಿಸಿದಾಗ ಅಧ್ಯಕ್ಷ ಬಸವರಾಜ ಅಧಿಕಾರಿಗಳಿಗೆ ತೆರವುಗೊಳಿಸಲು ಆದೇಶ ಮಾಡಿದರು. 

2022ರ ಸಾಮಾನ್ಯ ಸಭೆಯ ಗೊತ್ತುವಳಿ ಓದಲಾಯಿತು. ಆರೋಗ್ಯ, ಲೋಕೋಪಯೋಗಿ, ನೀರು ಸರಬರಾಜು, ಆಡಳಿತ ಇತರ ವಿಭಾಗಗಳ ಬಗ್ಗೆ, 2019 -20,21,22-23ಸಾಲಿನ 15ನೇ ಹಣಕಾಸು ಸಾಮಾನ್ಯ ಮೂಲ ಅನುದಾನದ ಕಾಮಗಾರಿಗಳ, 2021 -22 ಎಸ್ ಎಫ್‌. ಸಿ ವಿಶೇಷ ಅನುದಾನ, 2022-23 ಮುಕ್ತ ನಿಧಿ, 2021-22ರ ಎಸ್ ಎಫ್‌.ಸಿ ನೀಡಿದ ಕಾಮಗಾರಿಗಳಿಗೆ, ಸಾರ್ವಜನಿಕ ಆಸ್ತಿ ಸಮೀಕ್ಷೆ, 2023ರ ಗಣರಾಜ್ಯೋತ್ಸವದ ಖರ್ಚು ವೆಚ್ಚ ಇನ್ನೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.  

ಈ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಬಸವರಾಜ ಹಿಟ್ಟಿನಮಠ ಹಾಗೂ ಮುಖ್ಯಾಧಿಕಾರಿ ಜಗದೀಶ್ ಈಟಿ ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಚರ್ಚೆಯಲ್ಲಿ ಸ್ಥಾಯಿ ಸಮಿತಿ ಚೇರ್ಮನ್ ಬಲವಂತಗೌಡ ಪಾಟೀಲ್, ಉಪಾಧ್ಯಕ್ಷೆ ಗೋದಾವರಿ ಬಾಟ್, ಸದಸ್ಯರಾದ ಯಲ್ಲನಗೌಡ ಪಾಟೀಲ, ರವಿ ಜವಳಗಿ, ಮುಸ್ತಾಖ್ ಚಿಕ್ಕೋಡಿ, ರಾಜು ಗೌಡಪ್ಪಗೊಳ, ಬಸವರಾಜ ಬುರುಡ, ಸ್ನೆಹಲ್ ಅಂಗಡಿ, ಸವಿತಾ ಕೋಳ್ಳಿಗುಡ್ದ, ಸರಸ್ವತಿ ರಾಮೋಜಿ, ಲಕ್ಷ್ಮಿ ಮುದ್ದಪೂರ, ಚಾಂದನಿ ನಾಯಕ್, ಶೀಲಾ ಭಾವಿಕಟ್ಟಿ, ಜಯವಂತ ಕಾಗಿ, ಈರ​‍್ಪ ಚುನಮುರಿ, ತಿಪ್ಪಣ್ಣ ಬಂಡಿವಡ್ಡರ, ಪುರಸಭೆ ಅಧಿಕಾರಿಗಳಾದ ವಿ ಜಿ ಕುಲಕರ್ಣಿ, ನಾಮದೇವ ಲಮಾಣಿ, ರಾಜು ಚವ್ಹಾಣ, ಎಂ ಏಚ್ ಮುಗಳಖೋಡ, ಎನ್ ಎಸ್‌. ಪಾಟೀಲ, ಬಿ. ವಾಯ್ ಮರ್ದಿ, ರಾಜು ಹೂಗಾರ, ಸಿದ್ದು ಅಳ್ಳಿಮಟ್ಟಿ, ಸಿ ಸಿ ಮಠಪತಿ, ರಾಜೇಶ್ವರಿ ಸೊರಗಾಂವಿ, ಚನ್ನಮ್ಮ ಕಮತಗಿ, ಮುಲ್ಲಾ , ಸಿಪಾಯಿ ರಾಮು ಮತ್ತು ಮಹಾಲಿಂಗಪ್ಪ ಮಾಂಗ ಇದ್ದರು. ಸೋಮವಾರ ಮುಂಜಾನೆ ಮಹಾಲಿಂಗಪುರ ಪುರಸಭಾ ಸಭಾಂಗಣದಲ್ಲಿ ಸಾಮಾನ್ಯ ಸಭೆ ನಡೆಯಿತು. 


ಸುದ್ದಿ ಓದಿ