ಕುಷ್ಟಗಿ

ಡೇರೆ ಮುಕ್ತ ಕರ್ನಾಟಕ ನನ್ನ ಮಹಾತ್ವಾಕಾಂಕ್ಷೆ ಯೋಜನೆ: ರವೀಂದ್ರ ಶೆಟ್ಟಿ

ಡೇರೆ ಮುಕ್ತ ಕರ್ನಾಟಕ ನನ್ನ ಮಹಾತ್ವಾಕಾಂಕ್ಷೆ ಯೋಜನೆ: ರವೀಂದ್ರ ಶೆಟ್ಟಿ

ಕುಷ್ಟಗಿ 26: ಡೇರೆ ಮುಕ್ತ ಕರ್ನಾಟಕ ನನ್ನ ಮಹಾತ್ವಾಕಾಂಕ್ಷೆ ಯೋಜನೆಯಾಗಿದ್ದು ಜಿಲ್ಲಾ ಪ್ರವಾಸದ ವೇಳೆಯಲ್ಲಿ ಶೇ.95 ಅಲೆಮಾರಿ ಅರೆ ಅಲೆಮಾರಿ ಸಮುದಾಯಕ್ಕೆ ಸ್ವಂತ ಜಾಗೆ ಸೂರು ಇಲ್ಲ ಎಂದು ರಾಜ್ಯ ಅಲೆಮಾರಿ ನಿಗಮದ ರಾಜಾಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಹೇಳಿದರು.   

ಕುಷ್ಟಗಿಯ ಹಳೆ ಪ್ರವಾಸಿ ಮಂದಿರದ ಸುದ್ದಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ 31 ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು, ತಾತ್ಕಾಲಿಕ ಟೆಂಟ್, ಗುಡಿಸಲಿನಲ್ಲಿ ವಾಸವಾಗಿರುವ ಜಾಗೆ ಸರ್ಕಾರಿ ಜಾಗೆ ಆಗಿದ್ದರೆ ಅಲೆಮಾರಿ ಸಮುದಾಯದವರಿಗೆ ನೀಡಲು ಕೋರಿದ್ದೇನೆ.  

ರಾಜ್ಯ ಅಲೆಮಾರಿ ನಿಗಮದ ರಾಜಾಧ್ಯಕ್ಷನಾಗಿ ಅಧಿಕಾರವಹಿಸಿಕೊಂಡು ಒಂದೂವರೆ ವರ್ಷಗಳಲ್ಲಿ 24 ಜಿಲ್ಲಾ ಪ್ರವಾಸ ಮಾಡಿದ್ದೇನೆ. ಪ್ರವರ್ಗ-1 ರಲ್ಲಿ  ಬರುವ 46 ಜಾತಿಗಳು ಈ ನಿಗಮದ ವ್ಯಾಪ್ತಿಯಲ್ಲಿವೆ. ಜಿಲ್ಲಾ ಪ್ರವಾಸದಲ್ಲಿ ಈ ಸಮುದಾಯದ ಸ್ಥಿತಿ-ಗತಿ ಕಷ್ಟ ನಷ್ಟ ಅವರ ಅಹವಾಲು ಆಲಿಸಿ ಸರ್ಕಾರಕ್ಕೆ 250 ಕೋಟಿ ರೂ. ಪ್ರಸ್ತಾವನೆ ಸಲ್ಲಿಸಿದ್ದೇನೆ.  

ಸರ್ಕಾರ 6 ಕೋಟಿ ರೂ. ನೀಡಿದ್ದು, ಇಷ್ಟು ಅನುದಾನ ಸಾಲದಾಗಿದ್ದರೂ ನಿಗಮದ ವ್ಯಾಪ್ತಿಯ ಮೀರಿ ಕೆಲಸ ಮಾಡುತ್ತಿರುವೆ. ಮುಖ್ಯಮಂತ್ರಿಯವರು ಇನ್ನಷ್ಟು ಅನುದಾನ ಭರವಸೆ ನೀಡಿರುವುದಾಗಿ ತಿಳಿಸಿದರು.  

ಅಲೆಮಾರಿ ಹಿ ಅರೆಅಲೆಮಾರಿ ಅಭಿವೃದ್ಧಿ ನಿಗಮಕ್ಕೆ ಅನುದಾನದ ಕೊರತೆ ಇದ್ದು, ಸರ್ಕಾರದಿಂದ ಇನ್ನಷ್ಟು ಅನುದಾನದ ಅಗತ್ಯವಿದೆ.  

ನಾನು ಅಲೆಮಾರಿ ಜನಾಂಗಕ್ಕೆ ಸೇರಿದವನಾಗದೇ ಇದ್ದರೂ ಪ್ರವರ್ಗ-1 ಅಡಿಯಲ್ಲಿರುವ 46 ಸಮುದಾಯಗಳ ಸೇವೆ ಮಾಡುವ ಅವಕಾಶ ಸಿಕ್ಕಿದೆ.   

ಪೂಜಾಳಿಗೆ ಪ್ರೋತ್ಸಾಹ ಪ್ರಸಕ್ತ ಎಸ್ಸೆಸ್ಸೆಲ್ಸಿ ಯಲಬುರ್ಗಾ ತಾಲೂಕಿನ ಹೊಸಳ್ಳಿಯ ಜೋಗಿ ಸಮುದಾಯದ ಪೂಜಾ ಎಸ್ಸೆಸ್ಸೆಲ್ಸಿ ಯಲ್ಲಿ 625ಕ್ಕೆ 620 ಅಂಕ ಪಡೆದಿದ್ದಾಳೆ. ಜೋಗಿ ಸಮುದಾಯದ ಪೂಜಾಳನ್ನು ಸನ್ಮಾನಿಸಿ ಕೊಪ್ಪಳ ನವಚೇತನ ಕಾಲೇಜಿನಲ್ಲಿ ಮುಂದಿನ ವಿದ್ಯಾಭ್ಯಾಸಕ್ಕಾಗಿ ಶಿಕ್ಷಣ ಹಾಗೂ ವಸತಿಗೆ 37 ಸಾವಿರ ರೂ. ವಯಕ್ತಿಕವಾಗಿ ನೀಡಿರುವೆ ಎಂದರು. ಈ  ಸಂದರ್ಭದಲ್ಲಿ ಯಮನೂರ​‍್ಪ ಬಂಗ್ಲೇರ್, ಯಮನೂರ​‍್ಪ ಮಂಡಲಮರಿ, ಹನುಮೇಶ ಮೇಟಿ ಮತ್ತಿತರರಿದ್ದರು. 


ಸುದ್ದಿ ಓದಿ