ರಸ್ತೆ ರಿಪೇರಿ ಕಾಮಗಾರಿಗೆ ನಗರಸಭೆಯಿಂದ ಟೆಂಡರ್ ; ಭಿಕ್ಷಾಟಣೆ ಕೈಬಿಟ್ಟ ಯಂಗ್ ಇಂಡಿಯಾ ಪರಿವಾರ

ರಸ್ತೆ ರಿಪೇರಿ ಕಾಮಗಾರಿಗೆ ನಗರಸಭೆಯಿಂದ ಟೆಂಡರ್ ; ಭಿಕ್ಷಾಟಣೆ ಕೈಬಿಟ್ಟ ಯಂಗ್ ಇಂಡಿಯಾ ಪರಿವಾರ


ಲೋಕದರ್ಶನ ವರದಿ 

ಗದಗ 27: ಸತತ 2 ದಿನಗಳ ಕಾಲ ರಸ್ತೆ ರಿಪೇರಿಗೆ ಭಿಕ್ಷೆ ಎಂದು ಯಂಗ್ ಇಂಡಿಯಾ ಪರಿವಾರದ ಕಾರ್ಯಕರ್ತರು ನಗರದ ಹತ್ತಿಕಾಳ್ ಕೂಟ,  ಬ್ಯಾಂಕ್ ರೋಡ್, ಮಾರ್ಕೆಟ್, ಹಳೆ ಬಸ್ ಸ್ಟ್ಯಾಂಡ್ ನಲ್ಲಿ ಸಂಚರಿಸಿ ಭಿಕ್ಷಾಟನೆ ಮಾಡಿ ಮೊದಲನೆಯ ದಿನ  5114 ರೂಪಾಯಿಗಳನ್ನು  ಸಂಗ್ರಹ ಮಾಡಿತ್ತು, ನಿನ್ನೆ ಭೂಮರಡ್ಡಿ ಸರ್ಕಲ್ ನಲ್ಲಿರುವ ಸಿಗ್ನಲ್ನಲ್ಲಿ ಭಿಕ್ಷಾಟನೆ ಮಾಡಿ 3018 ರೂಪಾಯಿಗಳನ್ನು ಭಿಕ್ಷಾಟನೆಯಲ್ಲಿ ಸಂಗ್ರಹ ಮಾಡಿತ್ತು. ಒಟ್ಟು 8132 ಸಂಗ್ರಹ ಮಾಡಲಾಗಿದೆ ಈ ಹಣವನ್ನು ಸೋಮವಾರ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೊಡಲಾಗುವುದು. ನಿನ್ನೆ ನಗರಸಭೆ ಪೌರಾಯುಕ್ತರು ರಸ್ತೆ ರಿಪೇರಿಗೆ ಟೆಂಡರ್ ಕರೆದಿರುವುದಾಗಿ ಪತ್ರಿಕಾ ಪ್ರಕಟಣೆ ನೀಡಿರುವುದರಿಂದ ಭಿಕ್ಷಾಟನೆಯನ್ನು ಹಿಂಪಡೆಯಲಾಗಿದೆ ಎಂದು ಯಂಗ್ ಇಂಡಿಯಾ ಪರಿವಾರದ ಅಧ್ಯಕ್ಷ ಗೋವಿಂದಗೌಡ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. 

ಈ ಹೋರಾಟದ ಯಶಸ್ಸನ್ನು ಆಟೋ ಚಾಲಕರು, ಕಾರ್ಮಿಕರು, ವಿದ್ಯಾರ್ಥಿಗಳು, ರಸ್ತೆಯ  ಪಕ್ಕದಲ್ಲಿ ಹೂ ಹಣ್ಣು, ತರಕಾರಿಗಳನ್ನು ಮಾರಾಟ ಮಾಡಿ ದೇಣಿಗೆ ಸಂಗ್ರಹಕ್ಕೆ  ಕೈಜೋಡಿಸಿ ಅಧಿಕಾರಿಗಳಿಗೆ ಹಿಡಿ ಶಾಪವನ್ನು ಹಾಕಿರುವ ನಗರದ ವ್ಯಾಪಾರಸ್ಥರು, ಬೀದಿ ಬದಿ ವ್ಯಾಪಾರಸ್ಥರು, ವಿದ್ಯಾರ್ಥಿಗಳು, ಪಾಲಕರು, ನೌಕರರು ಈ ಭಿಕ್ಷಾಟನೆಗೆ ಕೈಜೋಡಿಸಿ ಈ ಹೋರಾಟಕ್ಕೆ ಬಲ ತುಂಬಿದರು ಹೀಗಾಗಿ ಈ ಹೋರಾಟ  ಯಶಸ್ವಿಯಾಗಿದೆಈ ಯಶಸ್ಸನ್ನು ಇವರೆಲ್ಲರಿಗೂ ಸಮರ​‍್ಿಸುವುದಾಗಿ ವೆಂಕನಗೌಡ ಗೋವಿಂದಗೌಡ್ರ ತಿಳಿಸಿದ್ದಾರೆ. ಹಾಗೆಯೇ ಟೆಂಡರ್ ಕರೆದು ತ್ವರಿತವಾಗಿ ಕಾಮಗಾರಿಯನ್ನು ನಡೆಸಬೇಕು ಮತ್ತೆ ಕಳಪೆ ಕಾಮಗಾರಿ ಆಗದಂತೆ ಅಧಿಕಾರಿಗಳು ಶಿಸ್ತಿನ ನಿಗಾ ವಹಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಡಿಸೆಂಬರ್ ಕೊನೆ ವಾರದವರೆಗೂ ಕಾದು ನೋಡಿ ಕಾಮಗಾರಿ ತಾತ್ಕಾಲಿಕವಲ್ಲದೆ ಶಾಶ್ವತ ರೋಡ್ ರಿಪೇರಿ ಆಗದಿದ್ದರೆ ಗದಗ ಬಂದ್ ಕರೆ ಕೊಡುವುದಾಗಿ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಟೆಂಡರ್ ಕರೆದು ಕಣ್ಣೊರೆಸುವ ತಂತ್ರ ಇದಾಗಿದ್ದರೆ ನಾವು ಸುಮ್ಮನಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.  

ಈ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಅಂಬರೇಶ ಅಂಗಡಿ, ದ್ಯಾಮನಗೌಡ ಗೌಡರ, ಖಾಜಾಸಾಬ್ ಸೊನ್ನದ, ಮಲಿಕ್ ಮದಲಿವಾಲೆ, ಕುಮಾರ ಇಳಿಗೇರ, ಹನಮಂತ ಸಿಂಗನಳ್ಳಿ, ಸುರೇಶ್ ಕೊರವರ್, ಲಾಲ್ ಸಾಬ್ ಬಾಗಲಿ, ಹನಮಂತ ಗುಳಗಣ್ಣವರ್, ಅವಿನಾಶ್ ಗೋಕಾಕ್, ಮೆಹಬೂಬ್ ಸಿದ್ನೆಕೊಪ್ಪ, ಸುಭಾನ್‌ಸಾಬ್ ಸಂಶಿ,  ರಾಘು ತಟಕೋಟೆ, ಈ ಜಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. 


ಸುದ್ದಿ ಓದಿ