ಮಳೆ ಪ್ರವಾಹದಲ್ಲಿ ಕಾಣೆಯಾದವರನ್ನು ಪತ್ತೆ ಹಚ್ಚುವುದಕ್ಕೆ ತಂಡಗಳನ್ನು ಕಳುಹಿಸಲಾಗಿದೆ:ಸಚಿವ ಆರ್.ಅಶೋಕ್
ಬೆಂಗಳೂರು,ಜು.23 ರಾಜ್ಯದಲ್ಲಿ ಮಳೆ ಪ್ರವಾಹ ಹೆಚ್ಚಿದ್ದು, ಮಳೆ ಪ್ರವಾಹದಲ್ಲಿ ಕಾಣೆಯಾದವರನ್ನು ಪತ್ತೆ ಹಚ್ಚುವುದಕ್ಕೆ ತಂಡಗಳನ್ನು ಕಳುಹಿಸಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಶೋಕ್, ವಾಸ್ತವಿಕ ಮಳೆಗಿಂತ 10 ಜಿಲ್ಲೆಗಳಲ್ಲಿ ಹೆಚ್ಚು ಮಳೆ ಆಗಿದೆ.ಇನ್ನೂ ಮೂರು ದಿನಗಳು ಹೆಚ್ಚು ಮಳೆಯಾಗಬಹುದು.ಹೆಚ್ಚುವರಿಯಾಗಿ ಕೃಷ್ಣ ನದಿಯಿಂದ ಮತ್ತಷ್ಟು ನೀರು ಹೊರ ಹರಿವು ಜಾಸ್ತಿ ಆಗುವ ಸಾಧ್ಯತೆ ಇದೆ.ನಾಲ್ಕು ಎನ್ ಡಿ ಆರ್ ಎಫ್ ತಂಡಗಳನ್ನು ನಾಲ್ಕು ವಲಯಗಳಿಗೆ ಕಳಿಸಿದ್ದೇವೆ.ಉತ್ತರ ಕನ್ನಡದಲ್ಲಿ ಇಬ್ಬರು ಕಾಣೆಯಾಗಿದ್ದಾರೆ, ನದಿ ನೀರಲ್ಲಿ ಮುಳುಗಿದ್ದಾರೆ.ಮಳೆಪ್ರವಾಹದಿಂದ 18 ತಾಲೂಕುಗಳಿಗೆ ಪರಿಣಾಮ ಬೀರಿದೆ. ಜಿಲ್ಲಾಧಿಕಾರಿಗಳಿಂದ ಹಾನಿಯಾಗಿರುವ ಮಾಹಿತಿ ಪಡೆದುಕೊಳ್ಳುತ್ತಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳಿಗ ಅಲರ್ಟ್ ಘೋಷಣೆ ಮಾಡಿದ್ದೇವೆ.ಕಾಳಜಿ ಕೇಂದ್ರಗಳಿಗೆ ಸ್ಥಳಾಂತರ ಮಾಡುವ ಕೆಲಸ ಮಾಡಿದ್ದೇವೆ.ಕಾಳಜಿ ಕೇಂದ್ರಗಳನ್ನು ತೆರೆದು ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸಚಿವ ಆರ್ ಅಶೋಕ್ ಸ್ಪಷ್ಟಪಡಿಸಿದರು.