ಬಂಡವಾಳ ಶಾಹಿಗಳ ಸೊತ್ತಾಗುತ್ತಿರುವ ಶಿಕ್ಷಣ ವ್ಯವಸ್ಥೆ: ಬೊಮ್ಮನಾಳ ವಿಷಾದ
ಯಲಬುರ್ಗಾ 05: ಶಿಕ್ಷಣ ಇಂದು ಬಂಡವಾಳ ಶಾಹಿಗಳ ಸೊತ್ತು ಆಗುತ್ತಿದೆ ಎಂದು ಯುವ ಮುಖಂಡ ಬಸವರಾಜ ಬೊಮ್ಮನಾಳ ಹೇಳಿದರು.
ತಾಲೂಕಿನ ಸಮೀಪದ ಕುಡಗುಂಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಾತನಾಡಿದ ಅವರು ಸಶಕ್ತ ಪ್ರಜೆಗಳನ್ನು ದೇಶಕ್ಕೆ ನೀಡಬೇಕಾದರೆ ಶಿಕ್ಷಕರು ಇಂದು ಅಧುನಿಕ ಸೌಲಭ್ಯ ವಿದ್ಯಾಮಾನಗಳನ್ನು ಅಳವಡಿಸಿ ಕೊಂಡು ವಿದ್ಯಾರ್ಥಿಗಳ ಬದುಕಿಗೆ ಗಟ್ಟಿಯಾದ ಅಡಿಪಾಯ ಹಾಕಬೇಕಿದೆ. ಶಿಕ್ಷಕರು ತಮ್ಮ ಶಾಲೆ ಸುಂದರವಾಗಿರಿಸುವದರ ಮೂಲಕ ಸಮಾಜ ಪರಿವರ್ತನೆಗೆ ಕಾರಣರಾಗಬೇಕು ಎಂದರು.
ಶಿಕ್ಷಕರು ಎಲ್ಲಿಯು ರಾಜಿ ಮಾಡಿ ಕೊಳ್ಳದೆ ಕರ್ತವ್ಯ ದಕ್ಷತೆ ನಿಷ್ಠೆ ಪ್ರಾಮಾಣಿಕತೆ ವತ್ತಿಯಲ್ಲಿ ಪರಿಪಾಲನೆ ಮಾಡಿಕೊಂಡು ಬರಬೇಕಿದೆ. ಶಿಕ್ಷಣ ಜವಾಬ್ದಾರಿ ಶಿಕ್ಷಕರ ಮೇಲೆ ಮಾತ್ರ ಎಂದು ಪಾಲಕರು ತಮ್ಮ ಜವಾಬ್ದಾರಿ ಮರೆಯಬಾರದು. ಇಂದು ಪ್ರಶಸ್ತಿ ಬಿಕರಿಗಳಾಗುತ್ತಿದ್ದು ಸನ್ಮಾನಗಳಿಗೆ ಲಾಭಿ ಮಾಡದೆ ಶಿಕ್ಷಕರು ಜಾಣ್ಮೆ ಸಮಯ ಪ್ರಜ್ಞೆಯಿಂದ ಹೆಸರು ಗಳಿಸಿ ಕೊಳ್ಳಬೇಕು. ಕವಿ ದ.ರಾ.ಬೇಂದ್ರೆ ಜ್ಞಾನಪೀಠ ಸಿಕ್ಕಾಗ ಅದು ನನಗೆ ದಕ್ಕಿದ್ದಲ್ಲ. ನನ್ನೊಳಗಿನ ಅಂಬಿಕಾತನಯದತ್ತನಿಗೆ ಸೇರಿದ್ದು ಎಂದು ಹೇಳಿದ್ದನ್ನು ಸ್ಮರಿಸಿದರು. ನಿಜವಾದ ಶಿಕ್ಷಕ ಒಳಗೆ ನಿರಂತರ ನಿಜವಾದ ಶಿಕ್ಷಕನಾಗಿರುತ್ತಾನೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಗುರುಗಳಾದ ನಿಂಗಪ್ಪ ನಡುಲಮನಿ, ಸಹ ಶಿಕ್ಷಕರಾದ ಗುಂಡಪ್ಪ ಅಸೂಟಿ, ಮಹಾಲಿಂಗಪ್ಪ ಉಳ್ಳಾಗಡ್ಡಿ, ಎಸ್ ಆರ್ ಬಗಲಿ, ಶರಣಪ್ಪ ಇಟಗಿ, ಸಕ್ರಪ್ಪ ಕುಂಟ್ರು ಸೇರಿದಂತೆ ಗ್ರಾಮದ ಹಿರಿಯರು ಯುವಕರು ಭಾಗಿಯಾಗಿದ್ದರು.