ಶಿಕ್ಷಕರಿಂದ ಭೂತಮಟ್ಟದ ಅಧಿಕಾರಿಗಳ ಸಭೆ ಭಹಿಷ್ಕಾರ : ತಾಲುಕಾ ಆಡಳಿತ ವಿರುದ್ದ ಆಕ್ರೋಶ
ಸಂಕೇಶ್ವರ : ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಹಾಗೂ ಜಾತಿ ಸಮೀಕ್ಷೆ ಮತ್ತು ಭೂತಮಟ್ಟದ ಅಧಿಕಾರಿಗಳ (ಬಿಎಲ್ಓ) ಸಭೆ ಜೊತೆಗೆ ಶಿಕ್ಷಕರಿಗೆ ಸರ್ಕಾರ ಒತ್ತಡ ಹಾಕುತ್ತಿರುವದನ್ನು ಖಂಡಿಸಿ ಹುಕ್ಕೇರಿ ತಾಲೂಕಿನ ಶಿಕ್ಷಕರು ಬಿಎಲ್ಓ ಸಭೆಯನ್ನು ಬಹಿಷ್ಕಾರ ಮಾಡಿದರು.
ಸಂಕೇಶ್ವರ ಪಟ್ಟಣದ ನೇಸರಿ ಮಂಗಲ ಕಾರ್ಯಾಲಯದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ನಡೆಯಬೇಕಿದ್ದ ಭೂತಮಟ್ಟದ (ಬಿಎಲ್ಓ) ಸಭೆಯಿಂದ ಶಿಕ್ಷಕರು ದೂರ ಉಳಿದರು.
ಬೆಳಿಗ್ಗೆ 10 ಗಂಟೆಗೆ ಸಭೆ ಪ್ರಾರಂಭದ ಮುಂಚೆ ಮಂಗಲ ಕಾರ್ಯಾಲಯದ ಮುಂದೆ ಜಮಾವಣೆಗೊಂಡ ನೂರಾರು ಶಿಕ್ಷಕರು ಸಭೆಗೆ ತೆರಳದೆ ಕಾರ್ಯಾಲಯದ ಮುಂದೆ ಕುಳಿತು ಪ್ರತಿಭಟಿಸಿದರು.
ಇದೇ ವೇಳೆ ಶಿಕ್ಷಕರ ಮೇಲೆ ಒತ್ತಡ ಹಾಕುತ್ತಿರುವ ಸರಕಾರದ ನಿರ್ಧಾರಕ್ಕೆ ಶಿಕ್ಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ ಸಂಘದ ಅಧ್ಯಕ್ಷರು ಶಿಕ್ಷರಿಗೆ ತಿಳಿಹೇಳಿದರು ಒಪ್ಪದ ಶಿಕ್ಷಕರು ಸಭೆ ಬಹಿಷ್ಕಾರ ಮಾಡಿದ್ದಾರೆ.
ಕಂದಾಯ ಅಧಿಕಾರಿಗಳಿಂದ ಶಿಕ್ಷಕರ ಮನವೊಲಿಸುವ ಕಾರ್ಯ ಮಾಡಿದರು. ಆದರೆ ಇದಕ್ಕೆ ಶಿಕ್ಷಕರು ಒಪ್ಪದೆ ಹುಕ್ಕೇರಿಯಲ್ಲಿ ನಡೆಯುತ್ತಿರುವ ಎರಡನೇ ಹಂತದ ತರಬೇತಿ ವೇಳೆ ತಹಶಿಲ್ದಾರ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಮಾಡಲು ನಿರ್ಮಾಣ ಮಾಡಲಾಗಿದೆ.
ಸರಕಾರದ ನಲಿಕಲಿ ಸೇರಿದಂತೆ ಶಿಕ್ಷರ ಕಾರ್ಯ ಒತ್ತಡ ಇದ್ದಾಗ ಮತ್ತೆ ಚುನಾವಣೆ, ಜಾತಿ ಸಮೀಕ್ಷೆ ಕಾರ್ಯದ ಜೊತೆಗೆ ಭೂತಮಟ್ಟದ ಅಧಿಕಾರಿಗಳ (ಬಿಎಲ್ಓ) ಶಿಕ್ಷಕರಿಗೆ ಒತ್ತಡ ಹಾಕಲಾಗುತ್ತಿದೆ. ಸರಕಾರ ಶಿಕ್ಷಕ ವೃಂದದ ಮೇಲೆ ಅನ್ಯಾಯ ಮಾಡುತ್ತಿದೆ ಎನ್ನುವ ಮಾತು ಕೇಳಿಬಂದಿತು.
ಸಭೆಗೆ ಸಹಿ ಮಾಡದೆ ತರಬೇತಿ ತಗೆದುಕೊಂಡು ಹುಕ್ಕೇರಿ ತಹಶಿಲ್ದಾರ ಜೊತೆ ಮಾತುಕತೆ ಮಾಡೊನ ಎಂದು ಅಧಿಕಾರಿಗಳು ತಿಳಿಹೇಳಿದರು.
ಬೇರೆ ಇಲಾಖೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳಲಿ, ಕೇವಲ ಶಿಕ್ಷಕರಿಗೆ ಕೆಲಸದ ಒತ್ತಡ ಹಾಕಲಾಗುತ್ತಿದೆ, ಸರಕಾರ ಕೇವಲ ಶಿಕ್ಷಕರಿಗೆ ಯಾಕೆ ಅನ್ಯಾಯ ಮಾಡುತ್ತಿದೆ ಎಂದು ಪ್ರಶ್ನಿಸಿದರು.