ತಾಲೂಕ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ
Taluk level science material exhibition
ರಾಣೆಬೆನ್ನೂರ 21 : ಸ್ಥಳೀಯ ನಾಗಶಾಂತಿ ಉನ್ನತಿ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಕ್ಷೇತ್ರ ಸಂಪನ್ಮೂಲ ಕೇಂದ್ರ ವಿಜ್ಞಾನ ಮತ್ತು ಗಣಿತ ವಿಷಯವೇದಿಕೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಜರುಗಿತು. ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿಜ್ಞಾನ ಮತ್ತು ಗಣಿತ ವಿಷಯಗಳು ಕ್ಲಿಷ್ಟವಾದರೂ ಸಹ ಅವು ಬಹಳಷ್ಟು ಸರಳವಾಗಿವೆ ಎಂದರು. ಜಿಲ್ಲಾ ಡಯಟ್ (ಅಭಿವೃದ್ದಿ) ಉಪ ನಿರ್ದೇಶಕ ಜಡ್. ಎಂ. ಖಾಜಿ ಮಾತನಾಡಿ ಸಂಖ್ಯೆಗಳ ಅಧ್ಯಯನವು ಅಂಕಗಣಿತದ ಕೇಂದ್ರ ಭಾಗವಾಗಿದೆ.ಇದು ಕೇವಲ ಲೆಕ್ಕಾಚಾರಗಳಲ್ಲದೆ, ಸಂಖ್ಯೆಗಳ ನಡುವಿನ ಸಂಬಂಧಗಳು ಮತ್ತು ಗುಣಲಕ್ಷಣಗಳನ್ನು ಒಳಗೊಂಡಿರುತ್ತದೆ.
ಜೊತೆಗೆ ವಿಜ್ಞಾನವು ಸರಳವಾಗಿದೆ ಎಂದರು.ದೈಹಿಕ ಶಿಕ್ಷಣಾಧಿಕಾರಿ ಪ್ರಭಾಕರ್ ಚಿಂದಿ, ಬಿ ಆರ್ ಪಿಗಳಾದ ಬನ್ನಿಕೋಡ, ನಾಗರಾಜ್ ಪಿ. ಎಂ.ಮತ್ತೂರ, ಜಿಲ್ಲಾ ಉಪಾಧ್ಯಕ್ಷ, ಸಹ ಶಿಕ್ಷಕರ ಸಂಘ, ಮತ್ತು ಆರ್.ವ್ಹಿ. ಸೂರಗೊಂಡ, ಗಣಿತ ವಿಷಯ ವೇದಿಕೆ ಅಧ್ಯಕ್ಷ ಪ್ರಭು ಎರೇಸೀಮಿ, ವಿಜ್ಞಾನ ವಿಷಯ ವೇದಿಕೆ ಅಧ್ಯಕ್ಷ ಟಿ. ಮಂಜಪ್ಪ, ಪಿ. ಎಂ. ತುವಾರ, ವಾಗೀಶ್ ನೀರಲಗಿಮಠ, ಕಾಲೇಜಿನ ಪ್ರಾಂಶುಪಾಲ ಗಣೇಶ್ ಪಂಡಿತ್, ಎಂ.ಪಿ ಅಂಗಡಿ, ಬಿಸಲಳ್ಳಿ,ಕಾಲೇಜಿನ ಉಪನ್ಯಾಸಕ, ಶಿಕ್ಷಕ ಮತ್ತು ಶಿಕ್ಷಕಿಯರು ಇದ್ದರು. ವಸ್ತು ಪ್ರದರ್ಶನಗಳಲ್ಲಿ 60 ಕ್ಕೂ ಹೆಚ್ಚು ಮಾದರಿಗಳುಪ್ರದರ್ಶಿತಗೊಂಡವು . ಅದರಲ್ಲಿ ಜಿಲ್ಲಾ ಹಂತಕ್ಕೆ ಗುಂಪು ಸ್ಪರ್ಧೆಯಲ್ಲಿ ಎರಡು ಶಾಲೆಗಳು ಮತ್ತು ವೈಯಕ್ತಿಕ ಸ್ಪರ್ಧೆಯಲ್ಲಿ ಎರಡು ಆಯ್ಕೆಯಾದರು.
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ 