ಎ.25ರಂದು ಮುಧೋಳದಲ್ಲಿ ತಾಲ್ಲೂಕಾ ಮಟ್ಟದ ಆರೋಗ್ಯ ಮೇಳ
ಸರ್ಕಾರದ ಆರೋಗ್ಯ ಯೋಜನೆಗಳ ಸದುಪಯೋಗಪಡೆದುಕೊಳ್ಳಿ:ಡಾ.ಬಸವರಾಜ
ಮುಧೋಳ;ಉತ್ತಮ ಆರೋಗ್ಯವಂತ ಸದೃಢ ಸಮಾಜ ನಿರ್ಮಾಣವಾದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ನಗರದಲ್ಲಿ ಎ. 25ರಂದು ಬೆಳಿಗ್ಗೆ 9-00ಕ್ಕೆ ನಗರದ ಬಿಲ್ ಮೆಮೋರಿಯಲ್ ಶಾಲೆಯಲ್ಲಿ ತಾಲ್ಲೂಕಾ ಮಟ್ಟದ ಆರೋಗ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ತಾಲ್ಲೂಕಾ ಅಸ್ಪತ್ರೆಯ ವೈದ್ಯಾಧಿಕಾರಿ ಡಾ.ಬಸವರಾಜ ಪಾಟೀಲ್ ಹೇಳಿದರು.
ಶನಿವಾರ ನಗರದ ಕಾನಿಪ ಕಾರ್ಯಾಲಯದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಪ್ರಚಾರ ಸಾಮಗ್ರಿಯನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು
ಜಿಲ್ಲಾಡಳಿತ , ಜಿಲ್ಲಾ ಪಂಚಾಯಿತಿ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ತಾಲ್ಲೂಕಾ ಅಡಳಿತ ಮತ್ತು ತಾಲ್ಲೂಕಾ ಅರೋಗ್ಯ ಅಧಿಕಾರಿಗಳ ಕಚೇರಿ ತಾಲ್ಲೂಕಾ ಮಟ್ಟದ ವಿವಿದ ಇಲಾಖೆಗಳ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಉಚಿತವಾಗಿ ಆರೋಗ್ಯ ಸೇವೆಯನ್ನು ಈ ಶಿಬಿರದ ಮೂಲಕ ಜನರು ಪಡೆದುಕೊಳ್ಳಬಹುದಾಗಿದೆ.ಮೇಳದಲ್ಲಿ ತಜ್ಞ ವೈದ್ಯರಿಂದ ಉಚಿತ ತಪಾಸಣೆ , ಓಷಧಗಳ ವಿತರಣೆ ಸಹ ಮಾಡಲಾಗುತ್ತಿದೆ . ಅಯುಸ್ಮಾನ ಕಾರ್ಡ್ ನೋಂದಣಿ , ಆರೋಗ್ಯ ಸೇವೆಯ ಮಾಹಿತಿಯುಳ್ಳ ಡಿಜಿಟಲ್ ಕಾರ್ಡ್ ಕೂಡ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಉಚಿತ ಆರೋಗ್ಯ ಸೇವೆ ನೀಡುವ ಎಬಿಆರ್ಕೆ ಕಾರ್ಡ್ಗಳನ್ನು ಪಡೆಯ ಗ್ರಾಮ ಕೇಂದ್ರಗಳಲ್ಲಿ ಸಹನೊಂದಣಿ ಮಾಡಿಕೊಳ್ಳಲಾಗುತ್ತಿದೆ . ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಲಾಭ ಸಿಗುವಂತೆ ಮಾಡುವುದೇ ಈ ಮೇಳದ ಉದ್ದೇಶವಾಗಿದೆ ಒಟ್ಟು ಇಪ್ಪತ್ತೈದು ಮಳಿಗೆಗಳು ಇದ್ದು ಆಯುಷ್ಯಾನ್ಸ್ ಕಾರ್ಡ್ ಪಡೆದುಕೊಂಡರೆ ಸಿಗಬಲ್ಲ ಉಚಿತ ಆರೋಗ್ಯ ಸೇವೆಗಳ ಮಾಹಿತಿ, ಅಂಗವಿಕಲರಿಗೆ ಯುಡಿಐಡಿ ಕಾರ್ಡ್ ಸಹ ನೀಡಲಾಗುತ್ತಿದೆ . ಅಲ್ಲದೇ ಮನೆಯಲ್ಲಿಯೇ ಇದ್ದು ಇ-ಸಂಜೀವಿನಿ ಮೊಬೈಲ್ ???ಪ್ ಮೂಲಕ ಆರೋಗ್ಯದಕುರಿತಾದ ಸಲಹೆಗಳನ್ನು ಪಡೆದುಕೊಳ್ಳುಬಹುದಾಗಿದೆ . ಇದಲ್ಲದೇ ಹಲವು ಉಚಿತ ಆರೋಗ್ಯ ಸೇವೆಗಳನ್ನು ಅವುಗಳ ಸದುಪಯೋಗ ಪಡೆಯಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಗಳ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ.
ಏಡ್ಸ್, ಕ್ಯಾನ್ಸರ್, ಕುರಿತು ಮಾಹಿತಿ ಮುನ್ನೆಚ್ಚರಿಕೆ ಕ್ರಮಗಳ ಮಾಹಿತಿ,ನೀಡಲಾಗುವದು.ತಾಲ್ಲೂಕಿನ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಯ,ತಾಲ್ಲೂಕಾ ಆಸ್ಪತ್ರೆ, ತಾಲ್ಲೂಕಾ ಅರೋಗ್ಯ ಅಧಕಾರಿಗಳ ಜೊತೆಗೆ ತಜ್ಣ ವೈದ್ಯರು ಇಲ್ಲಿ ಸೇವೆ ಒದಗಿಸುವರು ಸುಮಾರು ಹತ್ತು ಸಾವಿರ ಜನರು ಸೇರುವ ನೀರೀಕ್ಷೆ ಇದ್ದು 25ಕೌಂಟರ್ ಮಾಡಲಾಗಿದೆ ಅಂದು ಸೋಮವಾರ ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಜರುಗಲಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ,ಸಂಸದ ಪಿ.ಸಿ.ಗದ್ದಿಗೌಡರ ಕಾರ್ಯಕ್ರಮ ಉದ್ಘಾಟಿಸಲಿದ್ದು ಕೈಗಾರಿಕಾ ಸಚಿವ ಮುರುಗೇಶ ನಿರಾಣಿ,ಶಾಸಕರಾದ ಸಿದ್ದು ಸವದಿ,ಆರ್.ಬಿ.ತಿಮ್ಮಾಪೂರ,ಹನಮಂತ ನಿರಾಣಿ,ಅರುಣ ಶಹಾಪೂರ,ಪಿ.ಎಚ್.ಪೂಜಾರಿ,ಸುನೀಲಗೌಡ ಪಾಟೀಲ,ನಗರಸಭೆ ಅಧ್ಯಕ್ಷ ಗುರುಪಾದಪ್ಪ ಕುಳಲಿ,ಉಪಾಧ್ಯಕ್ಷೆ ಸ್ವಾತಿ ಕುಲಕರ್ಣಿ,ಜಿಲ್ಲಾಧಿಕಾರಿ ಕ್ಯಾ.ಕೆ.ರಾಜೇಂದ್ರ, ಜಿ.ಪಂ ಸಿಇಓ ಟಿ.ಬೂಬಾಲನ್, ಎಸ್.ಪಿ. ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ಡಾ.ಸಿದ್ದು ಹುಳ್ಳೋಳ್ಳಿ, ತಾ.ಪಂ ಇಓ ಕಿರಣ ಘೋರೆ್ಡ, ತಹಸೀಲ್ದಾರ ಮಹೇಶ ಪಾಂಡವ ಅಲ್ಲದೆ ತಜ್ಞ ವೈದ್ಯರಾದ ಡಾ.ಜಯಶ್ರೀ ಎಮ್ಮಿ, ಡಾ.ಡಿ.ಡಿ.ಪಟ್ಟಣಶೆಟ್ಟಿ, ಡಾ.ಬಿ.ಜಿ.ಹುಬ್ಬಳ್ಳಿ, ಡಾ.ವಿಜಯ ಕಂಠಿ, ಡಾ.ಎಸ್.ಜಿ.ಪಾಟೀಲ, ಡಾ.ಅಕ್ಕಮಹಾದೇವಿ ಗಾಣಗೇರ, ಡಾ.ಪಿ.ಎ.ಹಿಟ್ನಳ್ಳಿ, ಡಾ.ಸಂಜೀವಕುಮಾರ ತೇಲಿ, ಡಾ.ಬಸವರಾಜ ಪಾಟೀಲ, ತಾಲ್ಲೂಕಾ ಆರೋಗ್ಯ ಅಧಿಕಾರಿ ,ಡಾ.ವಿ.ಎಲ್.ಮಲಘಾಣ ಉಪಸ್ಥಿತಿರುವರು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಮಂಜುನಾಥ ಡಾಲಿ,ಡಾ.ಸಚಿನ ಶ್ಯಾಮಸುಂದರ,ರವಿ ಹೊಸಗೌಡರ ಇದ್ದರು