ರಾಣೆಬೆನ್ನೂರ

ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು

ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು

ರಾಣೆಬೆನ್ನೂರ  6: ಜನರಿಗೆ ಸಮರ​‍್ಕವಾಗಿಸರಕಾರದವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲು ತಾಲೂಕು ಮಟ್ಟದ ಸರ್ಕಾರಿ ಅಧಿಕಾರಿಗಳು ಸದಾ ಜಾಗೃತರಾಗಿರಬೇಕು.  ಜೊತೆಗೆ  ಶ್ರೀಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಪ್ರಾಮಾಣಿಕ ಸೇವೆ ಮಾಡಬೇಕು ಎಂದು ಜಿಪಂ ಉಪ ಕಾರ್ಯದರ್ಶಿ ಹಾಗೂ ರಾಣೆಬೆನ್ನೂರ ತಾಪಂ ಆಡಳಿತ ಅಧಿಕಾರಿ ಡಾ. ಪುನೀತ್ ಆರಿ​‍್ಬ ಸೂಚಿಸಿದರು. ಅವರು ಶುಕ್ರವಾರ ಇಲ್ಲಿನ  ತಾಲೂಕು ಪಂಚಾಯತ್ ಸಭಾಭವನದಲ್ಲಿ  ನಡೆದ ತಾಪಂ ಸಾಮಾನ್ಯ ಸಭೆಯಲ್ಲಿ ಸರಕಾರದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಗಳನ್ನು ಪರೀಶೀಲಿಸಿ ಮಾತನಾಡಿದರು.

ಸರ್ಕಾರ ಇರುವುದು ಶ್ರೀಸಾಮಾನ್ಯರ ಸೇವೆಗಾಗಿ, ಅದಕ್ಕಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸರ್ಕಾರದ ಯೋಜನೆಗಳನ್ನು ಕಾಲಕಾಲಕ್ಕೆ ಅವರುಗಳಿಗೆ ತಲುಪಿಸುವುದರ ಮೂಲಕ ಯೋಜನೆಗಳ ಸದುಪಯೋಗ ಆಗಬೇಕು ಎಂದು ಅವರು ಹೇಳಿದರು. ವಿವಿಧ ತಾಲೂಕು ಮಟ್ಟದ ಇಲಾಖೆಯ ಅಧಿಕಾರಿಗಳು, ಜನಸಾಮಾನ್ಯರ ಅಹವಾಲುಗಳಿಗೆ  ಬೇಜವಾಬ್ದಾರಿತನ ಹಾಗೂ ಅಲಕ್ಷ ತೋರುವುದು ಕಂಡುಬಂದಲ್ಲಿ ಅಂತಹವರ ಮೇಲೆ ನೋಟೀಸ್ ಜಾರಿಗೊಳಿಸಿ ಕ್ರಮ ಕೈಗೊಳ್ಳುವುದಾಗಿ ಪುನೀತ್ ರವರು ಎಚ್ಚರಿಸಿದರು. ಮುಂಬರುವ ಮುಂಗಾರು ಮಳೆಯ ಆಗಮನದ ಹಿನ್ನೆಲೆಯಲ್ಲಿ ಎಲ್ಲಾ ಅಧಿಕಾರಿಗಳು ಜಾಗೃತೆ ವಹಿಸಿ ಜನರಿಗಾಗುವ ಅವಘಡ, ಅನಾಹುತಗಳನ್ನು ತಪ್ಪಿಸುವಲ್ಲಿ, ಹಾಗೂ ಅವರುಗಳ ತೊಂದರೆಯನ್ನು ತಪ್ಪಿಸಲು ಸದಾ ಜಾಗೃತರಾಗಿರಬೇಕೆಂದು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಸುದ್ದಿ ಓದಿ