ಸೆ.4ರಂದು ತಾಲೂಕು ಮಟ್ಟದ ದಸರಾ ಕ್ರೀಡಾಕೂಟ: ಯರ್ರಿಸ್ವಾಮಿ
ಕಂಪ್ಲಿ 02: ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಪಾಲ್ಗೊಂಡು ಯಶ್ವಸಿಯಾಗಿ ನಡೆಯಬೇಕು ಎಂದರು ಕುರುಗೋಡಿನ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಕೆ.ಯರ್ರಿಸ್ವಾಮಿ ಹೇಳಿದರು.
ಇಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಗುರುವಾರ ಜರುಗಿದ ಪೂರ್ವಭಾವಿಸಭೆಯಲ್ಲಿ ಮಾತನಾಡಿ ಸೆ.4ರಂದು ಬೆಳಿಗ್ಗೆ 9ಗಂಟೆಗೆ ಕಂಪ್ಲಿಯ ಷಾ.ಮಿಯಾಚಂದ್ ಸರ್ಕಾರಿ ಪಿಯು ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಹಮ್ಮಿಕೊಂಡಿದ್ದು, ತಾಲೂಕಿನ ಕ್ರೀಡಾಪಟುಗಳು, ಕ್ರೀಡಾ ಸಂಘಗಳು ಮುಕ್ತವಾಗಿ ಪಾಲ್ಗೊಳ್ಳಬಹುದಾಗಿದೆ. ಗುಂಪು ಆಟಗಳಲ್ಲಿ ಕಬಡ್ಡಿ, ಖೋಖೋ, ವಾಲಿಬಾಲ್, ಥ್ರೋಬಾಲ್, ಫುಟ್‌ಬಾಲ್, ಆಥ್ಲೆಟಿಕ್ಸ್ ವಿಭಾಗದಲ್ಲಿ 100ಮೀ, 200ಮೀ, 400ಮೀ, 800ಮೀ, 1500 ಹಾಗೂ 5000ಮೀ ಓಟ, ಉದ್ದ ಜಿಗಿತ, ಎತ್ತರಜಿಗಿತ, ತ್ರಿವಿಧ ಜಿಗಿತ, ಗುಂಡು ಎಸೆತ, ತಟ್ಟೆ ಎಸೆತ, ಭರ್ಚಿ ಎಸೆತ, ಸರಪಳಿ ಗುಂಡು ಎಸೆತ, 110ಮೀ ಹರ್ಡ್ಸ್, 4*100ಮೀ ರಿಲೇ, 4*400ಮೀ ರಿಲೇ ಸ್ಪರ್ಧೆಗಳಿದ್ದು ಸಾರ್ವಜನಿಕರು ಪಾಲ್ಗೊಳ್ಳಲು ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಿದೆ. ಹೆಸರುಗಳನ್ನು ನೋಂದಾಯಿಸಿಕೊಳ್ಳಲು ಬೀರಲಿಂಗಪ್ಪ 9740110210, ಯು.ಅಶೋಕ್ 9900368090 ರಮೇಶ್ ಎನ್.ಶಿವಪೂರ್ 9740416060 ಸಂಪರ್ಕಿಸುವಂತೆ ತಿಳಿಸಿದರು. ತಹಸೀಲ್ದಾರ್ ಗೌಸಿಯಾಬೇಗಂ ಮಾತನಾಡಿ, ಕ್ರೀಡಾಕೂಟದಲ್ಲಿ ಆವರಣ ಸ್ವಚ್ಚತೆ, ಶುಚಿ ಆಹಾರ, ಶುದ್ಧ ಕುಡಿವ ನೀರು ಸೇರಿ ಅಗತ್ಯ ಮೂಲಸೌಕರ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿದರು. ಶಿರಸ್ತೆದಾರ್ ರಮೇಶ್, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಟಿ.ಎಂ.ಬಸವರಾಜ್, ಕಾರ್ಯದರ್ಶಿ ಚಲವಾದಿ ರಮೇಶ್, ದೈಹಿಕ ಶಿಕ್ಷಕರಾದ ಬೀರಲಿಂಗ, ರಮೇಶ್‌ಎನ್.ಶಿವಪೂರ್, ಅಶೋಕ್ ಸೇರಿ ಇತರರಿದ್ದರು.