ರಾಮದುರ್ಗ

ಕೋವಿಡ್ ನಿಯಂತ್ರಿಸಲು ತಾಲೂಕ ಆಡಳಿತ ಸನ್ನದ್ಧರಾಗಬೇಕು: ಯಾದವಾಡ

ಕೋವಿಡ್ ನಿಯಂತ್ರಿಸಲು ತಾಲೂಕ ಆಡಳಿತ ಸನ್ನದ್ಧರಾಗಬೇಕು: ಯಾದವಾಡ
ಪಟ್ಟಣದ ಮಿನಿ ವಿಧಾನ ಸಭಾದಲ್ಲಿ ಕೊವಿಡ್ ರೋಗ ನಿಯಂತ್ರಣದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿರುವ ಶಾಸಕ ಮಹಾದೇವಪ್ಪ ಯ

ರಾಮದುರ್ಗ 21: ಕೊರೋನಾ ಎರಡೆನೇ ಅಲೆ ವೇಗವಾಗಿ ಹರಡುತ್ತಿದ್ದು ಸಮರ್ಥವಾಗಿ ನಿಯಂತ್ರಿಸಲು ಬೇಕಾದ ಕ್ರಮಗಳನ್ನು ಕೈಕೊಂಡು ಜಾರಿಗೊಳಿಸಲು ಯುದ್ಧೂಪಾದಿಯಲ್ಲಿ ತಾಲೂಕ ಆಡಳಿತ ಸನ್ನದ್ಧರಾಗಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು. 

ಪಟ್ಟಣದ ಮಿನಿ ವಿಧಾನಸೌಧ ಸಭಾ ಭವನದಲ್ಲಿ ಏರ್ಪಡಿಸಿದ ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಿಣದ ಮುಂಜಾಗ್ರತ ಕ್ರಮಗಳ ಕೈಕೊಳ್ಳುವ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ದೇಶವೇ ಕೊರೋನಾ ರೋಗದಿಂದಾ ಬಳಲುತ್ತಿರುವಾಗ ಅಧಿಕಾರಿಗಳು ರಜೆ ತಗೆದುಕೊಳ್ಳದೆ ಮುಂಜಾಗ್ರತ ಕ್ರಮಗಳನ್ನು ಜಾರಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಹಾಗೆ ಎಲ್ಲ ಅಧಿಕಾರಿಗಳ ಆರೋಗ್ಯವು ಬಹು ಮುಖ್ಯವಾಗಿರುವದರಿಂದಾ ಕೋವಿಡ್ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಕೊಳ್ಳಬೇಕು ಹಾಗೂ ಕೋವಿಡ್ ಜಾಗೃತಿ ಮೂಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ನುಡಿದರು. 

ಆರ್ ಸಿ ಎಚ್ ಓ ಈಶ್ವರ ಗಡಾದ ಮಾತನಾಡಿ ತಾಲೂಕಿನಲ್ಲಿ ಇಲ್ಲಿಯವರೆಗೆ 3278 ಜನರ ಸ್ವಾಬ ಪರೀಕ್ಷಿಸಲಾಗಿದೆ. ಯಾವದೇ ವ್ಯಕ್ತಿ ಕೋವಿಡ್ ರೋಗ ದೃಢ ಪಟ್ಟಾಗ ಸುಮಾರು 20 ಜನರ ಸಂಪರ್ಕಿತರನ್ನು ಹೋಮ್ ಕ್ವಾರಂಟೈನ್ ಮಾಡಲಾಗುವುದು ಎಂದು ತಿಳಿಸಿದರು. ತರಕಾರಿ, ಹೂ, ಹಣ್ಣು ಮತ್ತು ಇತರೆ ಬೀದಿ ವ್ಯಾಪಾರಸ್ಥರು ಕಡ್ಡಾಯವಾಗಿ ಮಾಸ್ಕ್ ಮತ್ತು ಸ್ಯಾನಿಟೈಜರ ಬಳಕೆ ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಸಲಹೆ ನೀಡಿದರು ಇಷ್ಟು ಕ್ರಮಕೈಕೊಂಡರೆ ಕೊರೋನಾ ತಡೆಯಲು ಸಹಾಯಕವಾಗಲಿದೆ ಎಂದು ಭರವಸೆ  ವ್ಯಕ್ತಪಡಿಸಿದರು. 

ತಾಲೂಕಿನಲ್ಲಿ 43 ಕೋವಿಡ್ ಕೇಸ್‍ಗಳು ಪತ್ತೆಯಾಗಿದ್ದು ಸಾರ್ವಜನಿಕರು ಕಡ್ಡಾಯವಾಗಿ ಕೋವಿಡ್ ಲಸಿಕೆ ಹಾಕಿಕೊಳ್ಳಬೇಕು ಇದರಿಂದಾ ಸಾವಿನ ಪ್ರಮಾಣವನ್ನು ಕಡಿಮೆ ಮಾಡಲು ಸಾಧ್ಯವಿದೆ ಹಾಗೂ ಪ್ರತಿ ಪಂಚಾಯತ ಮಟ್ಟದಲ್ಲಿಯು ಕೊರೋನಾ ಜಾಗೃತಿ ಕಾರ್ಯ ನಡೆಸಲು ಇಲಾಖೆ ಅಧಿಕಾರಿಗಳು ಶ್ರಮಿಸಲಿ ಎಂದು ನುಡಿದರು. ಉಪವಿಭಾಗಾಧಿಕಾರಿ ಶಶಿಧರ ಭಗಲಿ, ತಹಶೀಲ್ದಾರ ಎ.ಡಿ ಅಮರವಾಡಿ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಮುರಳೀಧರ ದೇಶಪಾಂಡೆ ಹಾಗೂ ತಾಲೂಕ ಮಟ್ಟದ ಅಧಿಕಾರಿಗಳು ಉಪಸ್ಥತರಿದ್ದರು. 



ಸುದ್ದಿ ಓದಿ