ಲೋಂಡಾದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ
ಕಕ್ಕೇರಿ 10: ಖಾನಾಪೂರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನವು ಶುಕ್ರವಾರ ದಿ. 12ರಂದು ಮುಂಜಾನೆ 8ಗೆಂಟೆಗೆ ಮೆಡಲಿನ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಆವರಣ, ವ್ಯಾಘ್ರೇಶ್ವರ ಮಹಾದ್ವಾರ ಲೋಂಡಾ ಗ್ರಾಮದಲ್ಲಿ ನಡೆಯಲಿದೆ.
ಸಮ್ಮೇಳನದಲ್ಲಿ ಮುಂಜಾನೆ 8:30ಕ್ಕೆ ಲೋಂಡಾ ವಲಯ ಅರಣ್ಯಾಧಿಕಾರಿ ಪ್ರಶಾಂತ ಗೌರಾಣಿ ಅವರು ಭುವನೇಶ್ವರಿ ದೇವಿ ಭಾವಚಿತ್ರದ ಪೂಜೆ ನೆರವೇರಿಸುವರು. ಖ್ಯಾತ ಸಂಶೋಧಕರು ಮತ್ತು ಸಾಹಿತಿಗಳಾದ ಮಂಜುನಾಥ ಸುಲ್ಲೊಳ್ಳಿ ಅವರು ಸಮ್ಮೇಳನ ಉದ್ಘಾಟನೆಯನ್ನು ಮಾಡಲಿದ್ದಾರೆ. ಖ್ಯಾತ ಸಾಹಿತಿ ಡಾ.ಹೇಮಾವತಿ ಸೊನೊಳ್ಳಿ ಅವರು ಸಮ್ಮೇಳನಾಧ್ಯಕ್ಷತೆಯನ್ನು ವಹಿಸಲಿದ್ದು, ಖ್ಯಾತ ಸಾಹಿತಿಗಳಾದ ಸತೀಶ ಕುಲಕರ್ಣಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಅವರು ಆಶಯ ನುಡಿ ಮಂಡಿಸುವರು. ರಮೇಶ ಜಾರಕಿಹೊಳಿ, ಅನಂತಕುಮಾರ ಹೆಗಡೆ, ಸತೀಶ ಜಾರಕಿಹೊಳಿ, ಡಾ.ಅಂಜಲಿತಾಯಿ ನಿಂಬಾಳಕರ, ಕ್ಷ್ಮೀ ಹೆಬ್ಬಾಳಕರ, ಮಹಾಂತೇಶ ಕವಟಗಿಮಠ, ವಿವೇಕರಾವ್ ಪಾಟೀಲ, ಹನುಮಂತ ನಿರಾಣಿ, ಮುಖ್ಯ ಅತಿಥಿಗಳಾಗಿ ಆಗಮಿಸುವರು. ಮಾಜಿ ಶಾಸಕ ಅರವಿಂದ ಚಂ ಪಾಟೀಲ, ಅಂಜನಾ ಬಾಬುರಾವ್ ದೇಸಾಯಿ, ಜಿತೇಂದ್ರ ಮಾದಾರ, ನಂದಾ ಕೊಡಚವಾಡಕರ, ಶ್ವೇತಾ ಪ್ರಕಾಶ ಮಜಗಾವಿ, ಬಾಬುರಾವ್ ದೇಸಾಯಿ, ಮುಗುಟಸಾಬ್ ಧಾರವಾಡ, ಸುಭಾಷ ಗುಳಶೆಟ್ಟಿ, ವಿಠ್ಠಲ ಹಲಗೇಕರ, ಪ್ರಮೋದ ಕೊಚೇರಿ, ಬಾಬಣ್ಣ ಪಾಟೀಲ, ರಾಜೇಂದ್ರ ದೇಸಾಯಿ, ಅಶೋಕ ಯಮಕನಮರ್ಡಿ ರಾಜು ಖಾತೇದಾರ, ಯಶವಂತ ಕೊಡೊಳ್ಳಿ, ಮಹಾದೇವ ತಳವಾರ, ಆರೋಗ್ಯಪ್ಪ ಪಾದನಕಟ್ಟೆ, ಮಹಾದೇವ ಕೋಳಿ, ಮಜಹರ್ ಖಾನಾಪುರಿ, ಸುರೇಶ ದೇಸಾಯಿ, ಕೃಷ್ಣಾ ದುಗ್ಗಾಣಿ, ಸಂದೀಪ ರಾಣೆ, ಮಹಾಂತೇಶ ಸಂಬರಗಿ ಅತಿಥಿಗಳಾಗಿ ಆಗಮಿಸುವರು.
ಸಮ್ಮೇಳನದಲ್ಲಿ ಗ್ರಂಥ ಲೋಕಾರ್ಪಣೆ, ಚಿಂತನ ಗೋಷ್ಠಿ, ಕವಿಗೋಷ್ಠಿ, ಸಂಸ್ಕೃತಿ ಸೌರಭ, ಸಮಾರೋಪ ಸಮಾರಂಭ ನಡೆಯಲಿದ್ದು, ಕ.ಸಾ.ಪ ಎಲ್ಲ ತಾಲೂಕಾ ಅಧ್ಯಕ್ಷರುಗಳು ಉಪಸ್ಥಿತರಿರುವರು.
ಕಾರ್ಯಕ್ರಮಕ್ಕೆ ಸಮಸ್ತ ಕನ್ನಡಾಭಿಮಾನಿಗಳು ಆಗಮಿಸಬೇಕೆಂದು, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮತ್ತು ಖಾನಾಪೂರ ತಾಲೂಕಾ ಅಧ್ಯಕ್ಷ ವಿಜಯ ವೀ ಬಡಿಗೇರ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.