ಅಂತರರಾಷ್ಟ್ರೀಯ

ಸರ್ಹಾರಿ ವಾಹನ, ಸ್ವತ್ತುಗಳನ್ನು ಹಿಂದಿರುಗಿಸಿ: ಅಫ್ಲಾನಿಗರಿಗೆ ತಾಲೀಬಾನ್‌ ಸೂಚನೆ

ಸರ್ಹಾರಿ ವಾಹನ, ಸ್ವತ್ತುಗಳನ್ನು ಹಿಂದಿರುಗಿಸಿ: ಅಫ್ಲಾನಿಗರಿಗೆ ತಾಲೀಬಾನ್‌ ಸೂಚನೆ

 ಕಾಬೂಲ್, ಆ 28 ಅಫ್ಗಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲೀಬಾನಿಗರು, ದೇಶದ ನಿವಾಸಿಗಳಿಗೆ ಎಲ್ಲಾ ಸರ್ಕಾರಿ ವಾಹನಗಳು, ಶಸ್ತ್ರಾಸ್ತ್ರಗಳು ಹಾಗೂ ಇತರ ಸ್ವತ್ತುಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಿದೆ.
ತಾಲೀಬಾನ್‌ ವಕ್ತಾರ ಜಬೀಉಲ್ಲಾ ಮುಜಾಹಿದ್ ಟ್ವಿಟರ್ ಮೂಲಕ ಮಾಹಿತಿ ನೀಡಿದ್ದು, ‘ಅಫ್ಗಾನಿಸ್ತಾನದ ಜನರಿಗೆ ಎಲ್ಲಾ ಸರ್ಕಾರಿ ಸ್ವತ್ತುಗಳು, ವಾಹನಗಳು ಹಾಗೂ ಶಸ್ತ್ರಾಸ್ತಗಳನ್ನು ಹಿಂದಿರುಗಿಸುವಂತೆ ಸೂಚನೆ ನೀಡಲಾಗಿದೆ’ ಎಂದಿದ್ದಾರೆ.
ಇದಕ್ಕೆ ಬೆಂಬಲವಾಗಿ, ಧಾರ್ಮಿಕ ಮುಖಂಡರು ಸರ್ಕಾರಿ ಆಸ್ತಿಗಳನ್ನು ಹಿಂದಿರುಗಿಸುವಂತೆ ಜನರಿಗೆ ಮನವಿ ಮಾಡಿದ್ದಾರೆ.
ಜೊತೆಗೆ,ಸರ್ಕಾರಿ ನೌಕರರು ತಮ್ಮ ಕಚೇರಿಗಳಿಗೆ ಮರಳಿ ಎಂದಿನಂತೆ ಕೆಲಸ ನಿರ್ವಹಿಸುವಂತೆ ಕೂಡ ಅವರು ಮನವಿ ಮಾಡಿದ್ದಾರೆ.

ಸುದ್ದಿ ಓದಿ