ಅಂತರರಾಷ್ಟ್ರೀಯ

ಕಾಬೂಲ್‌ ಮೇಲೆ ಅಮೆರಿಕದ ಡ್ರೋನ್‌ ದಾಳಿಗೆ ತಾಲಿಬಾನ್ ಖಂಡನೆ

ಕಾಬೂಲ್‌ ಮೇಲೆ ಅಮೆರಿಕದ ಡ್ರೋನ್‌ ದಾಳಿಗೆ ತಾಲಿಬಾನ್ ಖಂಡನೆ

ಮಾಸ್ಕೋ, ಆ 30: ಅಪ್ಗಾನಿಸ್ತಾನದ ಕಾಬೂಲ್‌ ಉಗ್ರ ನೆಲೆಯ ಮೇಲೆ ಅಮೆರಿಕ ನಡೆಸಿದ ವೈಮಾನಿಕ ದಾಳಿಯನ್ನು ತಾಲಿಬಾನ್ ಖಂಡಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್,  ಇತರ ದೇಶಗಳಲ್ಲಿ ಅನಿಯಂತ್ರಿತ ದಾಳಿಗಳು ಕಾನೂನುಬಾಹಿರ ಎಂದಿದ್ದಾರೆ.

ಭಾನುವಾರ ಅಮೆರಿಕ, ಒಂದು ಕಾರಿನ ಮೇಲೆ ಡ್ರೋನ್ ದಾಳಿ ನಡೆಸಿತ್ತು. ಅದು ಸ್ಫೋಟಕಗಳನ್ನು ಹೊತ್ತುಕೊಂಡು ಕಾಬೂಲ್ ವಿಮಾನ ನಿಲ್ದಾಣ ಸಮೀಪಿಸುತ್ತಿತ್ತು. ಈ ದಾಳಿಯಲ್ಲಿ ಒಂಬತ್ತು ನಾಗರಿಕರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸುದ್ದಿ ಓದಿ