ಅಂತರರಾಷ್ಟ್ರೀಯ

ಅಫ್ಗಾನ್‌ನಿಂದ ಸುರಕ್ಷಿತ ಪ್ರಯಾಣಕ್ಕೆ ತಾಲೀಬಾನ್‌ ಅನುಮತಿ: ಭಾರತ ಸೇರಿ 100 ರಾಷ್ಟ್ರಗಳ ಜಂಟಿ ಹೇಳಿಕೆ

ಅಫ್ಗಾನ್‌ನಿಂದ ಸುರಕ್ಷಿತ ಪ್ರಯಾಣಕ್ಕೆ ತಾಲೀಬಾನ್‌ ಅನುಮತಿ: ಭಾರತ ಸೇರಿ 100 ರಾಷ್ಟ್ರಗಳ ಜಂಟಿ ಹೇಳಿಕೆ

ವಾಷಿಂಗ್ಟನ್/ ಕಾಬೂಲ್‌, ಆ 30   ಅಫ್ಗಾನಿಸ್ತಾನದಿಂದ ಜನರನ್ನು ಸ್ಥಳಾಂತರಿಸಲು ನೀಡಲಾಗಿರುವ ಆ 31 ರ ಗಡುವು ಮುಗಿಯಲು ಕೆಲವೇ ಗಂಟೆಗಳು ಇರುವ ಹಿನ್ನೆಲೆಯಲ್ಲಿ, ಸೂಕ್ತ ಪ್ರಯಾಣ ದಾಖಲೆ ಹೊಂದಿರುವ ಜನರು ಸ್ಥಳಾಂತರಗೊಳ್ಳಲು ಅವಕಾಶ ಕಲ್ಪಿಸಲು ತಾಲಿಬಾನ್ ಒಪ್ಪಿಗೆ ಸೂಚಿಸಿದೆ.
ಈ ಕುರಿತು ಭಾರತವು ಸುಮಾರು 100 ಇತರ ದೇಶಗಳೊಂದಿಗಿನ ಜಂಟಿ ಹೇಳಿಕೆ ಬಿಡುಗಡೆಗೊಳಿಸಿದೆ.
ತಾಲಿಬಾನ್ ತಮ್ಮ ದೇಶಗಳ ಎಲ್ಲಾ ಪ್ರಜೆಗಳು ಮತ್ತು ಕಾಬೂಲ್‌ನಿಂದ ಹೊರಹೋಗಲು ಬಯಸುವ ಸರಿಯಾದ ಪ್ರಯಾಣ ದಾಖಲೆಗಳನ್ನು ಹೊಂದಿರುವ ಅಫ್ಘಾನ್ ನಾಗರಿಕರಿಗೆ ಅವಕಾಶ ನೀಡಿದೆ.ಅದಕ್ಕಾಗಿ ಸುರಕ್ಷಿತ ಮಾರ್ಗವನ್ನು ಅನುಮತಿಸಲಾಗಿದೆ ಎಂದು ಅಧಿಕಾರಿಗಳು ಸೋಮವಾರ ಇಲ್ಲಿ ಹೇಳಿದರು.
ಅಮೆರಿಕದ ವಿದೇಶಾಂಗ ಇಲಾಖೆ ಭಾನುವಾರ ಹೊರಡಿಸಿದ 'ಅಫ್ಘಾನಿಸ್ತಾನ ಸ್ಥಳಾಂತರಿಸುವಿಕೆ ಪ್ರಯಾಣದ ಭರವಸೆಗಳ ಜಂಟಿ ಹೇಳಿಕೆ' ಎಂಬ ಶೀರ್ಷಿಕೆಯ ವರದಿಯಲ್ಲಿ, ಜನರು ತಮ್ಮ ದೇಶಗಳಿಗೆ ಪ್ರಯಾಣ ಬೆಳೆಸಬಹುದು ಎಂಬುದರ ಕುರಿತು ತಾಲೀಬಾನ್‌ ಸ್ಪಷ್ಟ ಸಂದೇಶ ನೀಡಿದೆ ಎಂದಿದ್ದಾರೆ.
ಈ ಕುರಿತು ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಟ್ವೀಟ್ ಮಾಡಿದ್ದು, ಸುಮಾರು 100 ದೇಶಗಳು ತಾಲಿಬಾನ್ ನೀಡಿದ ಆಶ್ವಾಸನೆಗಳ ಮೇಲೆ ಜಂಟಿ ಹೇಳಿಕೆಯನ್ನು ನೀಡಿವೆ. ಎಲ್ಲಾ ವಿದೇಶಿ ಪ್ರಜೆಗಳು ಮತ್ತು ಪ್ರಯಾಣದ ಅನುಮತಿಯನ್ನು ಹೊಂದಿರುವ ಯಾವುದೇ ಅಫ್ಗಾನ್ ನಾಗರಿಕರಿಗೆ ಅಫ್ಗಾನಿಸ್ತಾನದಿಂದ ಸುರಕ್ಷಿತವಾಗಿ ಪ್ರಯಾಣಿಸಲು ಅವಕಾಶ ನೀಡಲಾಗುವುದು ಎಂದಿದ್ದಾರೆ.
ಭಾನುವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯು ಹೀಗಿದೆ: "ನಮ್ಮ ಪ್ರಜೆಗಳು, ನಿವಾಸಿಗಳು, ಉದ್ಯೋಗಿಗಳು, ನಮ್ಮೊಂದಿಗೆ ಕೆಲಸ ಮಾಡಿದ ಅಫ್ಗಾನ್‌ಗಳೂ ಅಪಾಯದಲ್ಲಿರುವವರಿಗೆ ಅಫ್ಘಾನಿಸ್ತಾನದ ಹೊರಗಿನ ಸ್ಥಳಗಳಿಗೆ ಮುಕ್ತವಾಗಿ ಪ್ರಯಾಣಿಸುವುದನ್ನು ಖಚಿತಪಡಿಸಿಕೊಳ್ಳಲು ನಾವೆಲ್ಲರೂ ಬದ್ಧರಾಗಿದ್ದೇವೆ".
ಆಗಸ್ಟ್ 31ರ ಮಂಗಳವಾರದಂದು ಅಮೆರಿಕ ತನ್ನ ಪಡೆಗಳು ಮತ್ತು ಸಿಬ್ಬಂದಿಯನ್ನು ಹಿಂತೆಗೆದುಕೊಳ್ಳುವುದನ್ನು ಪೂರ್ಣಗೊಳಿಸಲಿದೆ, ಆದರೆ ಕೆಲವು ಅಮೆರಿಕನ್ ನಾಗರಿಕರು ಉಳಿದುಕೊಂಡರೆ ತಾಲಿಬಾನ್ ಅವರಿಗೆ ಸುರಕ್ಷಿತ ಮಾರ್ಗವನ್ನು ಅನುಮತಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ಅದು ಹೇಳಿದೆ.

ಸುದ್ದಿ ಓದಿ