ಕೆಎಲ್‌ಇ ಎಸ್‌ಸಿಪಿ ಮಹಾವಿದ್ಯಾಲಯದಲ್ಲಿ ಟ್ಯಾಲೆಂಟ್ ಟೆಸ್ಟ
Talent Test at KLE SCP College
ಮಹಾಲಿಂಗಪುರ 20: ಸ್ಥಳೀಯ ಕೆಎಲ್‌ಇ ಸೈಸೈಟಿಯ ಎಸ್‌ಸಿಪಿ ಪದವಿ ಮಹಾವಿದ್ಯಾಲದಲ್ಲಿ ರಾಜ್ಯದ ಪದವಿ ಪೂರ್ವ ಮಹಾವಿದ್ಯಾಲಯಗಳಲ್ಲಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಡಿಸೆಂಬರ 24ಬುಧವಾರ ಮುಂಜಾನೆ 9 ಗಂಟೆಗೆ ಕಾಲೇಜ ಅಡಿಟೋರಿಯಮ್ ನಲ್ಲಿ ರಾಜ್ಯಮಟ್ಟದ ಟಾಲೆಂಟ ಫೆಸ್ಟ್ *ವಿಸ್ಟಾ-2ಕೆ25* ಹಮ್ಮಿಕೊಳ್ಳಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಎನ್.ಬಿ.ಪಾಟೀಲ ಹೇಳಿದರು. ಮಹಾವಿದ್ಯಾಲಯದ ಕಚೇರಿಯಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪಿಯು ವಿದ್ಯಾರ್ಥಿಗಳಿಗೆ ಓದುವದನ್ನೇ ಹೆಚ್ಚಾಗಿ ಕಲಿಸಲಾಗುತ್ತದೆ.ಈ ಕಾರಣದಿಂದ ಅವರಿಗೆ ಪುಸ್ತಕ ಓದುವದನ್ನು ಹೊರತುಪಡಿಸಿ ಅವರ ಮುಂದಾಲೋಚನೆ,ವಿಚಾರ,ಕೌಶಲ್ಯಗಳು,ಪ್ರತಿಭೆ ಮತ್ತು ಕಲೆಗೆ ಪ್ರೋತ್ಸಾಹ ನೀಡುವದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
ಪಿಯು ನಲ್ಲಿ ಕಲೆ,ವಾಣಿಜ್ಯ ಮತ್ತು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗುತ್ತಿದ್ದು ಇದರಲ್ಲಿ ಸೈನ್ಸ್ ಎಕ್ಷೊ,ಟಾಲೆಂಟ ಟೆಸ್ಟ,ಕ್ವಿಜ್ವ್ ಮಾಸ್ಟರ್,ಅಡ್-ಮ್ಯಾಡ ಶೋ,ಪೋಸ್ಟರ್ ಪ್ರಜೇಂಟೇಶನ್,ವಿಡಿಯೋಗ್ರಾಫಿ,ಹಾಡು ಸ್ಪರ್ದೆ,ಡ್ಯಾನ್ಸ,ಸ್ಕಿಟ್,ಬೆಂಕಿಯಿಲ್ಲದೆ ಅಡುಗೆ ಮಾಡುವದು ಸೇರಿವೆ. ಈ ಕುರಿತು 45 ಮಹಾವಿದ್ಯಾಲಯಗಳಿಗೆ ಭೇಟಿ ನೀಡಿ ವಿಷಯ ತಿಳಿಸಿದ್ದೇವೆ. ವಿಜಯಪುರ ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಯ ಹಲವು ವಿದ್ಯಾರ್ಥಿಗಳು ತಮ್ಮ ಹೆಸರು ನೊಂದಾಯಿಸಿದ್ದಾರೆ.ಆಸಕ್ತರು ಕೂಡಲೇ ಆನಲೈನ್, ಫೋನ ಮುಖಾಂತರವೂ ನೋಂದಣಿ ಮಾಡಿಸಬಹುದು ಎಂದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಡಾ.ಎಸ್.ಡಿ.ಸೋರಗಾಂವಿ, ಸಿ.ಎಂ.ಐಗಳಿ, ಎಸ್.ಎಸ್.ಮುಗಳ್ಯಾಳ,ಎ.ಎಂ.ಉಗಾರೆ ಮುಂತಾದವರು ಇದ್ದರು. ಹೆಚ್ಚಿನ ಮಾಹಿತಿಗಾಗಿ ಎಸ್.ಎಸ್.ಮುಗಳ್ಯಾಳ 7204913101. ಎ.ಎಂ ಉಗಾರೆ 974335590.ಸಿ.ಎಂ ಅಲಗಲಿ 8050421143 ಈ ಮೋಬೈಲ ನಂಬರಗಳಿಗೆ ಸಂಪರ್ಕಿಸಬಹುದು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 