ಮುರಾರ್ಜಿ ವಸತಿ ಶಾಲೆಗೆ ತಹಶೀಲ್ದಾರ್ ಭೇಟಿ
ವಿದ್ಯಾರ್ಥಿಗಳ ಆರೋಗ್ಯದ ಕಡೆ ಗಮನ ನೀಡಲು ಸೂಚನೆ
ಮಹಾಲಿಂಗಪುರ 04: ಒಟ್ಟು 111ವಿದ್ಯಾರ್ಥಿಗಳ ರ್ಯಾಪಿಡ್ ಎಂಟಿಜೆನ್ ಪರೀಕ್ಷೆಯಲ್ಲಿ ಶನಿವಾರ 2ಪೆÇಜಿಟಿವ್ ಮಾತ್ರ ಬಂದಿದ್ದು ಅವರ ಗಂಟಲು ದ್ರವ ಹೆಚ್ಚಿನ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಶುಕ್ರವಾರ ಮಾಡಲಾದ ಪರೀಕ್ಷೆಯಲ್ಲಿ 8ವಿದ್ಯಾರ್ಥಿಗಳಿಗೆ ಕೋರೋನಾ ಸಾಮಾನ್ಯ ಲಕ್ಷಣಗಳಿವೆ. ಇವರನ್ನು ಪ್ರತ್ಯೇಕ ಕೊಠಡಿಯಲ್ಲಿಟ್ಟು ಆರೈಕೆ ಮಾಡಲಾಗುತ್ತಿದೆ ಎಂದು ರಬಕವಿ ಬನಹಟ್ಟಿ ನೂತನ ತಹಶೀಲ್ದಾರ್ ಸಂಜಯ ಇಂಗಳೆ ಹೇಳಿದರು.
ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಸ್ಥಳೀಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ಭೇಟಿ ನೀಡಿ, ಚಿಕಿತ್ಸಾ ಕ್ರಮ ಹಾಗೂ ಮಕ್ಕಳ ಆರೋಗ್ಯ ವಿಚಾರಿಸುವುದರೊಂದಿಗೆ, ಇನ್ನೂ ಹೆಚ್ಚಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಹ ಅಧಿಕಾರಿಗಳಿಗೆ ಸೂಚಿಸಿದರು.
ಮತ್ತೆ ಕೊರೋನಾ ಉಲ್ಬಣಿಸುತ್ತಿರುವ ಕಾರಣದಿಂದ ಸರ್ಕಾರ ಶನಿವಾರದಿಂದ ರಾಜ್ಯಾದ್ಯಂತ 1 ರಿಂದ 9ನೇ ತರಗತಿ ಮಕ್ಕಳಿಗೆ ರಜೆ ಘೋಷಿಸಿದ್ದು ಈ ವಸತಿ ಶಾಲೆಯಲ್ಲಿ ಕೊರೋನಾ ದೃಢಪಟ್ಟ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಉಳಿದ ಮಕ್ಕಳನ್ನು ಮನೆಗೆ ಕಳುಹಿಸುವುದಕ್ಕೆ ಕಡ್ಡಾಯವಾಗಿ ಪಾಲಕರಿಂದ ಜವಾಬ್ದಾರಿ ಪತ್ರವನ್ನು ಬರೆಯಿಸಿ ಕೈಗೊಳ್ಳಬೇಕೆಂದರು.
ಅಲ್ಲದೆ ಅವರ ಊರಲ್ಲಿ ಆರೋಗ್ಯ ಇಲಾಖೆಯ ನಿಯಮಾವಳಿಗಳ ಪ್ರಕಾರ ಕೋರಂಟೈನ್, ಸಾಮಾಜಿಕ ಅಂತರ ಹೊಂದುವುದು, ಕಡ್ಡಾಯವಾಗಿ ಮಾಸ್ಕ್ ಧಾರಣ ಹಾಗೂ ಸ್ಯಾನಿಟೈಸರ್ ಉಪಯೋಗಿಸಿಕೊಂಡು ಕೋವಿಡ್ 19 ಹತ್ತಿಕ್ಕಲು ಇರುವ ಎಲ್ಲ ಸಲಹೆ, ಸೂಚನೆ ಹಾಗೂ ಸರ್ಕಾರದ ಕಡ್ಡಾಯ ಆದೇಶವನ್ನು ಪಾಲಿಸಲು ತಿಳಿಸಲು ಸೂಚನೆ ನೀಡಿದರು.
ಶನಿವಾರ ಶಾಲೆಯ 18ಜನ ಸಿಬ್ಬಂದಿಳೆಲ್ಲರನ್ನು ಆರ್ಟಿಪಿಸಿಆರ್ ಸಂಗ್ರಹಿಸಿ ಕೋವಿಡ್ ಪರೀಕ್ಷೆಗಾಗಿ ಕಳುಹಿಸಲಾಗಿ ಇನ್ನು 3-4 ದಿನಗಳಲ್ಲಿ ಇದರ ವರದಿಯೂ ಕೈಸೇರುತ್ತದೆ ಎಂದರು.
ಬಾಗಲಕೋಟ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ. ಮಹೇಶ್ ಪೆÇೀತದಾರ್ ಶುಕ್ರವಾರ ಸಂಜೆ ಶಾಲೆಗೆ ಭೇಟಿ ನೀಡಿ ವೈದ್ಯಕೀಯ ಹಾಗೂ ನಿಲಯದ ಕುಂದುಕೊರತೆಗಳ ಬಗ್ಗೆ ಸಮಗ್ರ ವರದಿ ಪಡೆದರು.
ತೇರದಾಳ ಉಪತಹಶೀಲ್ದಾರ್ ಮಾಯನ್ನವರ್, ಜಮಖಂಡಿ ತಾಲೂಕು ವೈದ್ಯಾಧಿಕಾರಿ ಡಾ.ಜಿ.ಎನ್.ಗಲಗಲಿ, ವೈದ್ಯಾಧಿಕಾರಿ ಪ್ರಕಾಶ ಹುಗ್ಗಿ, ಕಂದಾಯ ನಿರೀಕ್ಷಕ ಬಸವರಾಜ ತಾಳಿಕೋಟಿ, ಮುಖ್ಯಾಧಿಕಾರಿ ಎಚ್ ಎಸ್ ಚಿತ್ತರಗಿ, ಕಿರಿಯ ಆರೋಗ್ಯ ಸಹಾಯಕ ಎಂ.ಬಿ.ಗೋಣಿ, ಪ್ರಾಂಶುಪಾಲ ಎಸ್.ಬಿ.ನಂದೆಪ್ಪಗೋಳ, ರೂಪಾ ಶೇರಖಾನಿ, ಬಿ.ಎಸ್.ತೇಲಿ, ಪ್ರಮೋದ್ ಬೂಶಿ ಇತರರು ಇದ್ದರು.