ಹೂವಿನ ಹಡಗಲಿ

ಐಸ್ ಕ್ರೀಮ್ ತಯಾರಿಸುವ ಘಟಕಕ್ಕೆ ದಿಢೀರ್ ತಹಶಿಲ್ದಾರ ಭೇಟಿ

ಐಸ್ ಕ್ರೀಮ್ ತಯಾರಿಸುವ ಘಟಕಕ್ಕೆ ದಿಢೀರ್ ತಹಶಿಲ್ದಾರ ಭೇಟಿ


ಲೋಕದರ್ಶನ ವರದಿ 

ಹೂವಿನಹಡಗಲಿ  20:  ಪಟ್ಟಣದಲ್ಲಿರುವ ನಾನಾ ಐಸ್ ಕ್ರೀಮ್ ತಯಾರಿಸುವ ಘಟಕಗಳ ಮೇಲೆ ದಿಢೀರ್ ತಹಶಿಲ್ದಾರರ  ಕೆ.ಎಂ.ಗುರುಬಸವರಾಜ ಸೋಮವಾರ ದಿಢೀರ್ ಭೇಟಿ ನೀಡಿ ಪರೀಶೀಲಿಸಿದರು.ಪಟ್ಟಣದ ಕೆಲವು ಘಟಕಗಳಲ್ಲಿ ಐಸ್ ತಯಾರಿಕೆಗೆ ರಾಸಾಯನಿಕ ಬಣ್ಣ, ಕಲಬೆರಕೆಯ ಪದಾರ್ಥಗಳನ್ನು ಬಳಕೆ ಮಾಡಿರುವುದು ದೂರುಗಳು ಬಂದ ಹಿನ್ನೆಲೆಯಲ್ಲಿ ಐಸ್ ಕ್ರೀಂ ಮಾದರಿಗಳನ್ನು ಸಂಗ್ರಹಿಸಿ, ಪ್ರಯೋಗಾಲಯ ಪರೀಕ್ಷೆಗೆ ಕಳಿಸಲು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿರುವ ’ಎ- ಒನ್‌’ ಐಸ್ ತಯಾರಿಕಾ ಘಟಕದಲ್ಲಿ ಸ್ವಚ್ಛತೆ ಇಲ್ಲದೇ ದುರ್ನಾತ ಬೀರುತ್ತಿತ್ತು.  ಪರೀಶೀಲನೆ ವೇಳೆ ಐಸ್ ಕ್ರೀಂ ತಯಾರಿಕೆಗೆ ಅವಧಿ ಮೀರಿದ ರಾಸಾಯನಿಕ ಬಣ್ಣ ಪತ್ತೆಯಾಯಿತು. ಸ್ವಚ್ಚತೆ ಇಲ್ಲದೇ ತುಂಡಾದ ಐಸ್ ಗಳನ್ನು ಮರು ಮಾರಾಟಕ್ಕೆ ಸಿದ್ದತೆ ಮಾಡಿದ್ದನ್ನು ಕಂಡು ತಹಶಿಲ್ದಾರ್ ತರಾಟೆಗೆ ತೆಗೆದುಕೊಂಡರು. ಆದರೆ, ಇಲ್ಲಿನ ಘಟಕಗಳು ಈ ನಿಯಮಗಳನ್ನು ಗಾಳಿಗೆ ತೂರಿ, ಮನಬಂದಂತೆ ಐಸ್ ತಯಾರಿಕೆಯಲ್ಲಿ ತೊಡಗಿದ್ದವು. ಸಾರ್ವಜನಿಕರ ದೂರಿನ ಮೇರೆಗೆ ಘಟಕಗಳಿಗೆ ಭೇಟಿ ನೀಡಿ ಪರೀಶೀಲನೆ ಮಾಡಿದ್ದೇವೆ’ ಎಂದು ತಹಶೀಲ್ದಾರ್ ಗುರುಬಸವರಾಜ ತಿಳಿಸಿದರು.’ಬೇಸಿಗೆಯಲ್ಲಿ ಹೆಚ್ಚು ಜನರು ಐಸ್ ಕ್ರೀಂ ಮೊರೆ ಹೋಗುತ್ತಾರೆ. ಐಸ್ ತಯಾರಿಕಾ ಘಟಕಗಳು ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಿಯಮಗಳನ್ನು ತಪ್ಪದೇ ಪಾಲಿಸಬೇಕು. ಪಟ್ಟಣದ ಎಲ್ಲ ಘಟಕಗಳಲ್ಲಿ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳಿಸಿಕೊಡಲು ತಾಲ್ಲೂಕು ಆರೋಗ್ಯಾಧಿಕಾರಿಗೆ ತಿಳಿಸಿದ್ದೇವೆ. ವರದಿ ಬಂದ ನಂತರ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದರು. ತಾಲ್ಲೂಕು ವೈದ್ಯಾಧಿಕಾರಿ ಡಾ.ಅಶೋಕ, ಪುರಸಭೆ ಆರೋಗ್ಯ ನೀರೀಕ್ಷಕ ಮಾರುತಿ, ಗ್ರಾಮ ಲೆಕ್ಕಾಧಿಕಾರಿ ಜಗದೀಶ ಇದ್ದರು. 


ಸುದ್ದಿ ಓದಿ