ಟೆಬಲ್ ಟೆನಿಸ್: ಶರತ್ ಗೆ ಜಯ, ಸುತೀರ್ಥಾಗೆ ನಿರಾಸೆ
ಟೋಕಿಯೊ, ಜು.26- ಅನುಭವಿ ಭಾರತದ ಟೇಬಲ್ ಟೆನಿಸ್ ಆಟಗಾರ ಶರತ್ ಕಮಲ್ ಭರ್ಜರಿ ಪ್ರದರ್ಶನ ನೀಡಿದ್ದು ಮುಂದಿನ ಹಂತಕ್ಕೆ ಪ್ರವೇಶಿಸಿದ್ದಾರೆ.
ಸೋಮವಾರ ಟೋಕಿಯೊ ಮೆಟ್ರೋಪಾಲಿಟನ್ ಜಿಮ್ನಾಷಿಯಂನಲ್ಲಿ ನಡೆದ ಶರತ್ 2-11, 11-8, 11-5, 9-11, 11-6, 11-9 ರಿಂದ ಟಿಯಾಗೊ ಅಪೊಲೊನಿಯಾ ವಿರುದ್ಧ ಜಯ ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ.
ಭಾರತದ ಯುವ ಟೇಬಲ್ ಟೆನಿಸ್ ಆಟಗಾರ್ತಿ ಸುತೀರ್ಥಾ ಮುಖರ್ಜಿ ಎರಡನೇ ಸುತ್ತಿನಲ್ಲಿಯೇ ಸೋತು ಟೊಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಹೊರಬಿದ್ದಿದ್ದಾರೆ.
ಎರಡನೇ ಸುತ್ತಿನ ಪಂದ್ಯದಲ್ಲಿ ಫೋರ್ಚುಗಲ್ ದೇಶದ ಆಟಗಾರ್ತಿ ಫು ಯು, ಸುತೀರ್ಥಾ ಮುಖರ್ಜಿ ಅವನ್ನು ಹೆಚ್ಚಿನ ಪರಿಶ್ರಮವಿಲ್ಲದೇ 4-0 ರಿಂದ ಪರಾಜಯಗೊಳಿಸಿ ಮುನ್ನಡೆ ಸಾಧಿಸಿದರು.