ಟಿ 20 ವಿಶ್ವಕಪ್; ಅಕ್ಟೋಬರ್ 24 ಭಾರತ, ಪಾಕ್‌ ನಡುವೆ ಪಂದ್ಯ

ಟಿ 20 ವಿಶ್ವಕಪ್; ಅಕ್ಟೋಬರ್ 24   ಭಾರತ, ಪಾಕ್‌  ನಡುವೆ  ಪಂದ್ಯ

ನವದೆಹಲಿ, ಆಗಸ್ಟ್‌  4  ಭಾರತ   ಹಾಗೂ   ಪಾಕಿಸ್ತಾನ   ಕ್ರಿಕೆಟ್‌  ತಂಡಗಳ    ನಡುವಣ   ಪಂದ್ಯವೆಂದರೆ    ಕ್ರಿಕೆಟ್‌   ಪ್ರೇಮಿಗಳಿಗೆ  ರೋಚಕ ಎಂಬುದರಲ್ಲಿ  ಎರಡನೇಯ ಮಾತೇ ಇಲ್ಲ.  ಈ ವರ್ಷ  ನಡೆಯಲಿರುವ ಟಿ- 20 ವಿಶ್ವಕಪ್  ಮೂಲಕ   ಕ್ರಿಕೆಟ್  ಪ್ರೇಮಿಗಳು       ಆ  ರೋಚಕತೆಯನ್ನು   ಸಂಭ್ರಮಿಸಲಿದ್ದಾರೆ.  ವಿಶ್ವಕಪ್ ಗಾಗಿ ಐ ಸಿ ಸಿ ಬಿಡುಗಡೆಗೊಳಿಸಿರುವ  ಪಟ್ಟಿಯಲ್ಲಿ ಪಾಕಿಸ್ತಾನ, ಭಾರತ  ಗುಂಪು -2 ರಲ್ಲಿ  ವಿಶ್ವಕಪ್‌  ಸಮರದಲ್ಲಿ     ಸೆಣಸಾಡಲಿವೆ.  ಸಾಂಪ್ರದಾಯಿಕ  ಎದುರಾಳಿಗಳಾದ   ಎರಡೂ  ದೇಶಗಳ ಕ್ರಿಕೆಟ್‌  ತಂಡಗಳು ಈ ವರ್ಷ ಅಕ್ಟೋಬರ್ 24 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ   ಮುಖಾಮುಖಿಯಾಗಲಿವೆ.    ಇನ್ನೂ   ಅಕ್ಟೋಬರ್ 17 ರಿಂದ ನವೆಂಬರ್ 14 ರವರೆಗೆ   ಟಿ 20 ವಿಶ್ವಕಪ್‌   ನಡೆಯಲಿದೆ  ಎಂದು ತಿಳಿದುಬಂದಿದೆ.

ಸುದ್ದಿ ಓದಿ