ಕೆಆರ್‌ಎಸ್ ಅಕ್ರಮಗಣಿಗಾರಿಕೆ ಬಗ್ಗೆ ರಾಜ್ಯಪಾಲರಿಗೆ ದೂರಿದ ಸಂಸದೆ ಸುಮಲತಾ
ಬೆಂಗಳೂರು,ಜು.17
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ರಾಜ್ಯಪಾಲರನ್ನು ಭೇಟಿಯಾಗಿ ಶುಭಾಶಯ ಕೋರಿದ್ದೇನೆ.ರಾಜ್ಯಪಾಲರ ಬಳಿ ಅಕ್ರಮ ಗಣಿಗಾರಿಕೆ ಬಗ್ಗೆ ಮನವಿ ಮಾಡಿದ್ದೇನೆ. ಕೆಲವು ಸಲಹೆಗಳನ್ನು ರಾಜ್ಯಪಾಲರು ಕೊಟ್ಟಿದ್ದಾರೆ.
ಅಕ್ರಮ ಗಣಿಗಾರಿಕೆಯ ಪರಿಣಾಮಗಳ ಬಗ್ಗೆ ತಿಳಿಸಿದ್ದೇನೆ.ಮೆಮೋರಾಂಡಮ್ ಕೊಟ್ಟಿದ್ದೇನೆ.ಸರ್ಕಾರಕ್ಕೆ ಮಾಹಿತಿ ತಿಳಿಸೋದಾಗಿ ರಾಜ್ಯಪಾಲರು ಭರವಸೆ ಕೊಟ್ಟಿದ್ದಾರೆ ಎಂದರು.
ನಟ ದರ್ಶನ್-ಉಮಾಪತಿ ನಡುವೆ ಆಸ್ತಿ ಜಟಾಪಟಿ ವಿಚಾರವಾಗಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ,ಪ್ರಕರಣದ ಬಗ್ಗೆ ನಾನು ಮಾತಾಡಲು ಇಷ್ಟ ಪಡುವುದಿಲ್ಲ.ನಾನು ಅನಾವಶ್ಯಕ ಹೇಳಿಕೆ ಕೊಡುವುದು ಸರಿಯಲ್ಲ.ಹೊಟೇಲ್ ನಲ್ಲಿ ನಡೆದ ಹಲ್ಲೆ ಬಗ್ಗೆ ತನಿಖೆ ನಡೆಯುತ್ತಿದ್ದು,ಅದರ ಸತ್ಯಾಂಶ ಹೊರಗೆ ಬರಲಿ.ಹಲ್ಲೆ ಪ್ರಕರಣ ಬಗ್ಗೆ ಗೊತ್ತಿಲ್ಲ.ನಾನು ನನ್ನ ಕೆಲಸದ ಕಡೆ ಗಮನ ಕೊಟ್ಟಿದ್ದೇನೆ ಎಂದು ಸುಮಲತಾ ಸ್ಪಷ್ಟಪಡಿಸಿದರು.