ಸೊಮಾಲಿಯಾ ರಾಜಧಾನಿಯಲ್ಲಿ ಭಯೋತ್ಪಾದಕ ಆತ್ಮಾಹುತಿ ದಾಳಿ: ಕನಿಷ್ಠ 6 ಮಂದಿ ಸಾವು
ಮೊಗದಿಶು,
ನವೆಂಬರ್ 28: ಸೊಮಾಲಿಯಾ ರಾಜಧಾನಿಯಾದ ಇಲ್ಲಿನ ವಿಮಾನ ನಿಲ್ದಾಣದ ಬಳಿ ಆತ್ಮಾಹುತಿ ದಾಳಿಕೋರರು
ನಡೆಸಿದ ಪ್ರಬಲ ಸ್ಫೋಟದಿಂದ ಕನಿಷ್ಠ ಆರು ಮಂದಿ ಸಾವನ್ನಪ್ಪಿದ್ದು, ಇತರ 12 ಮಂದಿ ಗಾಯಗೊಂಡಿದ್ದಾರೆ
ಎಂದು ಸೊಮಾಲಿಯಾದ ಮಾಧ್ಯಮವೊಂದು ವರದಿ ಮಾಡಿದೆ.
ಈ ದಾಳಿ ವಿಮಾನ ನಿಲ್ದಾಣದ ತಪಾಸಣಾ ಶಿಬಿರದ ಸಮೀಪ ಜನಸಂದಣಿಯಿಂದ ಕೂಡಿದ್ದ ಐಸ್‌ಕ್ರೀಮ್ ಪಾರ್ಲರ್ ಬಳಿ ನಡೆದಿದೆ. ಉನ್ನತ ಮಟ್ಟದ ಭದ್ರತಾ ಮತ್ತು ಗುಪ್ತಚರ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆದಿದೆ ಎಂದು ಗರೋವ್ ಆನ್‌ಲೈನ್ ರೇಡಿಯೊ ಮಾಧ್ಯಮ ವರದಿ ಮಾಡಿದೆ.
ಭಯೋತ್ಪಾದಕ ದಾಳಿಯಿಂದ ಇಥಿಯೋಪಿಯಾ ರಾಯಭಾರ ಕಚೇರಿಯ ನೌಕರನೂ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.