ರಾಮದುರ್ಗ

ಆತ್ಮಹತ್ಯೆ: ರೈತನ ಕುಟುಂಬಕ್ಕೆ ಚೆಕ್ ವಿತರಣೆ

ಆತ್ಮಹತ್ಯೆ: ರೈತನ ಕುಟುಂಬಕ್ಕೆ ಚೆಕ್ ವಿತರಣೆ

ರಾಮದುರ್ಗ 20: ಸಾಲ ಬಾಧೆಯಿಂದಾ ಆತ್ಮಹತ್ಯೆ ಮಾಡಿಕೊಂಡ ಅವರಾದಿ ಗ್ರಾಮದ ರೈತ ಮುದಕಪ್ಪ ಪ. ಮದಕಟ್ಟ ಕುಟುಂಬಕ್ಕೆ ಶಾಸಕ ಮಹಾದೇವಪ್ಪ ಯಾದವಾಡ ಧನಲಕ್ಷ್ಮೀ ಸಹಕಾರಿ ಸಕ್ಕರೆ ಕಾರ್ಖಾನೆ ವತಿಯಿಂದಾ ತಮ್ಮ ಗೃಹ ಕಛೇರಿಯಲ್ಲಿ ರೂ. 25000 ಚೆಕ್‍ನ್ನು ನೀಡಿ ಸಾಂತ್ವನ ಹೇಳಿದರು. ಸಾಲಕ್ಕೆ ಆತ್ಮಹತ್ಯೆನೇ ಪರಿಹಾರವಲ್ಲ. ಸರಕಾರ ರೈತರ ಪರ ಇದ್ದು ಧೃತಿಗೆಡದೆ ಮುನ್ನುಗ್ಗಿ ಜೀವನ ಎದುರಿಸಬೇಕೆಂದು ರೈತ ಸಮುದಾಯಕ್ಕೆ ಅವರು ಕರೆ ನೀಡಿದರು. ಮಾಜಿ ಜಿಲ್ಲಾ ಪಂಚಾಯತ ಸದಸ್ಯ ಮಾರುತಿ ಕೊಪ್ಪದ, ಮಲ್ಲಪ್ಪ ಮದಕನ್ನವರ, ಬಸವರಾಜ ಕುಲಕರ್ಣಿ ಹಾಗೂ ಅವರಾದಿ ಗ್ರಾಮಸ್ಥರು ಉಪಸ್ಥಿತರಿದ್ದರು.  



ಸುದ್ದಿ ಓದಿ