ಎಲಬುರ್ಗ

ಸರ್ಕಾರ ರೈತರ ನೆರವಿಗೆ ನಿಲ್ಲುವ ಕೆಲಸವಾಗಲಿ

ಸರ್ಕಾರ ರೈತರ ನೆರವಿಗೆ ನಿಲ್ಲುವ ಕೆಲಸವಾಗಲಿ

ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಅಭಿಮತ: ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮ ಕಾರ್ಯಕ್ರಮ

ಯಲಬುರ್ಗಾ 09: ರೈತ ಇಲ್ಲದಿದ್ದರೆ ಜಗತ್ತೇ ಇಲ್ಲ. ರೈತನ ಕಷ್ಟದ ಪ್ರತಿಫಲದಿಂದಾಗಿ ಇಂದು ಸಮಾಜದ ಜನ ನೆಮ್ಮದಿಯಿಂದ ಬದುಕುತ್ತಿದ್ದಾರೆ. ಆದರೆ ರೈತರು ಇಂದು ಅತೀ ಕಷ್ಟದ ದಿನಗಳನ್ನು ಎದುರಿಸುತ್ತಿದ್ದಾರೆ. ಮಳೆಯ ಪ್ರಭಾವ ಅವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ನೊಂದ ರೈತರ ಪರವಾಗಿ ಸರ್ಕಾರ ಕೈಜೋಡಿಸುವ ಮೂಲಕ ರೈತರ ನೆರವಿಗೆ ನಿಲ್ಲುವ ಕೆಲಸವಾಗಬೇಕು ಎಂದು ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ಕೆ. ರಂಗಣ್ಣವರ ಅವರು ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ ವತಿಯಿಂದ ಪಟ್ಟಣದ ಬಸವಲಿಂಗೇಶ್ವರ ಕಲ್ಯಾಣ ಮಂಟಪ ಆವರಣದಲ್ಲಿ ನಡೆದ ಸುಗ್ಗಿ-ಹುಗ್ಗಿ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಬಸವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. 

ಅಧ್ಯಕ್ಷತೆ ವಹಿಸಿದ ಅಮರೇಶ ಹುಬ್ಬಳ್ಳಿ ಮಾತನಾಡಿ, ಇಂದು ರೈತರಿಂದಲೇ ನಾವು ಬದುಕುತ್ತಿದ್ದೇವೆ. ಆದರೆ ನಮಗೆ ಬದುಕು ನೀಡುತ್ತಿರುವ ರೈತರು ಸರಿಯಾದ ಜೀವನ ಸಾಗಿಸಲು ಆಗುತ್ತಿಲ್ಲ. ಹವಾಮಾನ ವೈಪರೀತ್ಯಗಳಿಂದ ಬೆಳೆ ಸರಿಯಾಗಿ ಬೆಳೆಯುತ್ತಿಲ್ಲ. ಅರೆ ಬರೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತ ನಲುಗಿ ಹೋಗಿದ್ದಾನೆ. ರೈತನಿಗೆ ನೆರವು ನೀಡುವ ಕೆಲಸ ಸರ್ಕಾರದಿಂದ ನಡೆಯಲಿ, ಕೃಷಿ ಇಲಾಖೆ ರೈತರ ಅಭಿವೃದ್ಧಿಗಾಗಿ ಹಲವಾರು ಕಾರ್ಯಗಳನ್ನು ಕೈಗೊಳ್ಳಲಿ ಎಂದರು.

 ಗುಳೇದಗುಡ್ಡ ಒಪ್ಪತ್ತೇಶ್ವರ ಮಠದ ಜಗದ್ಗುರು ಒಪ್ಪತ್ತೇಶ್ವರ ಶ್ರೀಗಳು ಮಾತನಾಡಿ, ನಮ್ಮ ಸಂಸ್ಕೃತಿಯ ಮೂಲ ಜಾನಪದ ಸಾಹಿತ್ಯ, ಇಡೀ ಪ್ರಪಂಚಕ್ಕೆ ಸಾಹಿತ್ಯದ ಮೆರುಗನ್ನು ನೀಡಿದ್ದು ಜಾನಪದ ಕಲೆಗಳು. ಪ್ರಸ್ತುತ ಆಧುನಿಕ ಯುಗದಲ್ಲಿ ಅನೇಕ ವಿದ್ಯಮಾನಗಳ ನಡುವೆ ಜಾನಪದ ಕಲೆಗಳು ಮತ್ತೆ ತನ್ನ ಸ್ಥಾನವನ್ನು ಪಡೆದುಕೊಳ್ಳುತ್ತಿರುವುದು ತುಂಬಾ ವಿವಿಶೇಷ ಎಂದರು.

ಜಾನಪದ ಕಲೆ ಸಂಸ್ಕ್ರತಿಯ ಜೀವಾಳ, ಜಾನಪದ ಉಳಿದರೆ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ. ಜಾನಪದ ಕಲೆಗಳನ್ನು ಉಳಿಸಿಕೊಂಡು ಹೋಗುವ ಕೆಲಸ ಆಗಬೇಕು ಎಂದರು.

ಮುಖಂಡ ಈರಣ್ಣ ಹುಬ್ಬಳ್ಳಿ ಮಾತನಾಡಿದರು. ಜಿಪಂ ಸದಸ್ಯ ನೀಲಮ್ಮ ಭಾವಿಮನಿ, ಪಪಂ ಸದಸ್ಯ ಬಸವಲಿಂಗಪ್ಪ ಕೊತ್ತಲ್, ಅಶೋಕ ಅರಕೇರಿ, ವಸಂತ ಭಾವಿಮನಿ, ಕಳಕಪ್ಪ ತಳವಾರ, ಪಿಎಸ್‍ಐ ಹನುಮಂತ ತಳವಾರ, ಮುಖಂಡ ಶಿವುಕುಮಾರ ಬಿ ಭೂತೆ, ಜಾನಪದ ಕಲಾ ತಂಡದ ಅಧ್ಯಕ್ಷ ಆದಪ್ಪ ಗುಳಗುಳಿ, ಹಿರಿಯ ಕಲಾವಿದ ಶರಣಯ್ಯ ಇಟಗಿ, ಸಾಹಿತಿ ಡಾ.ಫಕೀರಪ್ಪ ವಜ್ರಬಂಡಿ, ಗ್ರಾಮದ ಕಲಾವಿದರು ಈಶಪ್ಪ ಸ್ಟಾಂಪಿನ್, ನಾಗಪ್ಪ ಹಳೆಮನಿ, ಶಿವಪ್ಪ ಕೊತ್ತಲ್, ಉಮೇಶ ಬನ್ನಿಕೊಪ್ಪ, ಮಲ್ಲಪ್ಪ ಬನ್ನಿಕೊಪ್ಪ ಕಳಕಪ್ಪ ಗದ್ಧಿಮ, ಹಾಗೂ ಕಲಾ ತಂಡಗಳು ಸೇರಿ ಮತ್ತಿತರರು ಇದ್ದರು.

ಸುದ್ದಿ ಓದಿ