ಕಾಗವಾಡ

ಮಾಜಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಸಕ್ಕರೆ ಉದ್ಯೋಗ ಪ್ರಶಸ್ತಿ ಘೋಷಣೆ

ಮಾಜಿ ಸಚಿವ ಶ್ರೀಮಂತ ಪಾಟೀಲ ಅವರಿಗೆ ಸಕ್ಕರೆ ಉದ್ಯೋಗ ಪ್ರಶಸ್ತಿ ಘೋಷಣೆ

ಲೋಕದರ್ಶನ ವರದಿ 

ಕಾಗವಾಡ 05 : ಪೂನಾ ಮೂಲದ ಡೆಕ್ಕನ ಶುಗರ್ ಟೆಕ್ನಾಲಾಜಿ ಅಸೊಶಿಯೆಷಿನ್ ಇವರು ಕೊಡಮಾಡುವ ಪ್ರತಿಷ್ಠಿತ ‘ಸಕ್ಕರೆ ಉದ್ಯೋಗ ಪ್ರಶಸ್ತಿ’ಗೆ ಅಥಣಿ ಶುಗರ​‍್ಸ‌ ಉದ್ಯೋಗ ಸಮೂಹದ ಸಂಸ್ಥಾಪಕರು, ಮಾಜಿ ಸಚಿವ ಶ್ರೀಮಂತ ಪಾಟೀಲ ಅವರನ್ನು ಆಯ್ಕೆ ಮಾಡಿದ್ದು, ಪೂನಾದಲ್ಲಿ ಆಗಸ್ಟ್‌ 8 ಮತ್ತು 9 ರಂದು ನಡೆಯಲಿರುವ ಸಂಸ್ಥೆಯ 71ನೇ ವಾರ್ಷಿಕ ಅಧಿವೇಶನದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದೆ. ಸಕ್ಕರೆ ಉದ್ಯಮದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ, ಡೆಕ್ಕನ ಶುಗರ್ ಟೆಕ್ನಾಲಾಜಿ ಅಸೊಶಿಯೆಷಿನ್ ಪ್ರತಿವರ್ಷ ವಿವಿಧ ಪ್ರಶಸ್ತಿಗಳನ್ನು ನೀಡುತ್ತದೆ.  

ಅಥಣಿ ಶುಗರ​‍್ಸ‌ ಉದ್ಯೋಗ ಸಮೂಹದ ಸಂಸ್ಥಾಪಕ ಅಧ್ಯಕ್ಷರು, ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ಸಕ್ಕರೆ ಉದ್ಯಮದ ಅಭಿವೃದ್ಧಿಗಾಗಿ ನೀಡಿರುವ ಕೊಡುಗೆ, ದೂರದೃಷ್ಟಿ, ಕೌಶಲ್ಯಪೂರ್ಣ ಮಾರ್ಗದರ್ಶನ, ಉದ್ಯಮದ ಆಧುನೀಕರಣ, ದಕ್ಷ ನಿರ್ವಹಣೆ ಹಾಗೂ ಅಭಿವೃದ್ಧಿ ಕ್ರಮಗಳಿಂದಾಗಿ ಸಕ್ಕರೆ ಉದ್ಯಮ ವಲಯದಲ್ಲಿ ವಿಶಿಷ್ಟ ಗುರುತನ್ನು ಸೃಷ್ಟಿಸಿದ್ದು, ಕಬ್ಬು ಬೆಳೆಗಾರ ರೈತರು ಮತ್ತು ಕಾರ್ಮಿಕರ ಜೀವನದಲ್ಲಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗೆ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಅವರ ಈ ಸಾಧನೆಯನ್ನು ಗುರಿತಿಸಿ, ಈ ಪ್ರಶಸ್ತಿ ನೀಡಲಾಗುತ್ತಿದೆ. 


ಸುದ್ದಿ ಓದಿ