ಮಹಲಿಂಗಪುರ

ಸಾಧನೆ ಸದಾ ಬಡವರ ಸೊತ್ತು : ಶಾಸಕ ಸಿದ್ದು ಸವದಿ

ಸಾಧನೆ ಸದಾ ಬಡವರ ಸೊತ್ತು : ಶಾಸಕ ಸಿದ್ದು ಸವದಿ

ಮಹಾಲಿಂಗಪುರ: ಸಾಧನೆ ಮಾಡಿದರೆ ಮಾತ್ರ ಸಮಾಜ ಮತ್ತು ಸರ್ಕಾರ ಗುರುತಿಸುತ್ತವೆ. ಸಾಧನೆ ಸದಾ ಬಡವರ ಸೊತ್ತು, ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಛಲದಿಂದ ಸಾಧನೆ ಸಾಧ್ಯ ಎಂದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಸಿದ್ದು ಸವದಿ ಹೇಳಿದರು. 

ಸ್ಥಳೀಯ ಬನಶಂಕರಿ ದೇವಿ ಸಾಂಸ್ಕೃತಿಕ ಭವನದಲ್ಲಿ  ಬಾಗಲಕೋಟೆ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಲಯನ್ಸ್‌ ಕ್ಲಬ್ ಮಹಾಲಿಂಗಪುರ ಗ್ರೀನ್ ಬೇಸಿನ್ ಹಾಗೂ ಜ್ಞಾನ ಗುರುಕುಲ ಶಿಕ್ಷಣ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಪರೀಕ್ಷೆ ಒಂದು ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಸಾಧನೆಯಿಂದ ತಂದೆ-ತಾಯಿ, ಸಮಾಜ, ಗುರುಗಳ ಋಣ ತೀರಿಸಬೇಕು. ಅದಕ್ಕಾಗಿ ಮೊಬೈಲ್ ಗೀಳಿನಿಂದ ದೂರವಿರಬೇಕು ಎಂದರು.  

ಅಂತರಾಷ್ಟ್ರೀಯ ತರಬೇತುದಾರ ಡಾ. ಆರ್‌.ಎ.ಚೇತನ್ ರಾಮ್ ಮಕ್ಕಳಿಗೆ ತರಬೇತಿ ನೀಡಿ,  ಜಗತ್ತಿನ ಪ್ರತಿ ಮಗುವೂ ಜ್ಞಾನಕ್ಕಾಗಿ ಓದಬೇಕು. ಪಠ್ಯಪುಸ್ತಕ ಎಲ್ಲಾ ಪುಸ್ತಕಗಳ ತಾಯಿ ಇದ್ದಂತೆ, ಅದರ ಪ್ರತಿ ಪದ ಸಹಿತ ಏಕಾಗ್ರತೆಯಿಂದ ಓದಿ ಎಂದರು.  

ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌ಎಂ  ಮುಲ್ಲಾ ಮಾತನಾಡಿ ನಿರಂತರ ಪ್ರಯತ್ನವೇ ಯಶಸ್ಸಿನ ಗುಟ್ಟು ಎಂದರು.ವಿವಿಧ ಪ್ರೌಢ ಶಾಲೆಗಳ 10 ನೇ ತರಗತಿ ವಿದ್ಯಾರ್ಥಿಗಳು ಮತ್ತು ಸಾಹಿತಿ ಶಿವಪ್ಪ, ಎಸ್‌.ಎಂ.ಕುರಣಿ, ಮಹಾಂತೇಶ ಹಿಟ್ಟಿನಮಠ,ಅಶೋಕ ಅಂಗಡಿ, ಲಯನ್ಸ್‌ ಕ್ಲಬ್ ಅಧ್ಯಕ್ಷ ಸಾಗರ ಅವರಾದಿ, ಕಾರ್ಯದರ್ಶಿ ಸಚಿನ ಗುಂಡಾ, ಸಂಗಮೇಶ ನೀಲಗುಂದ ಲಕ್ಕಪ್ಪ ಚಮಕೇರಿ, ರಾಜು ಬಾರಕೋಲ, ಸಿ ಆರ್ ಪಿ ಎಸ್‌. ಎನ್‌.ಬ್ಯಾಳಿ, ಎಂ. ಎಸ್, ತೆಗ್ಗಿನಮಠ, ಬಸವರಾಜ ನಾಗನೂರ, ಡಾ. ವಿಶ್ವನಾಥ ಗುಂಡಾ ಇತರರಿದ್ದರು. 


ಸುದ್ದಿ ಓದಿ