ಅದ್ದೂರಿ ಮೆರವಣಿಗೆ ಮೂಲಕ ಎಂಎಸ್ ಸೋಮಲಿಂಗಪ್ಪ ನಾಮಪತ್ರ ಸಲ್ಲಿಕೆ
ಲೋಕದರ್ಶನ ವರದಿ
ಸಿರುಗುಪ್ಪ 18: ಬಿಜೆಪಿ ಭರ್ಜರಿ ಅದ್ದೂರಿಯ ಭವ್ಯ ಮೆರವಣಿಗೆ ಮೂಲಕ ಬಿಜೆಪಿ ಅಭ್ಯರ್ಥಿ ಎಂ ಎಸ್ ಸೋಮಲಿಂಗಪ್ಪ ನಾಮಪತ್ರ ಸಲ್ಲಿಕೆ, ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಭಾರತೀಯ ರಾಷ್ಟ್ರೀಯ ಜನತಾ ಪಕ್ಷ ಬಿಜೆಪಿ ಅಧಿಕೃತ ಅಭ್ಯರ್ಥಿ ಎಂ ಎಸ್ ಸೋಮಲಿಂಗಪ್ಪ ಅವರು ತಾಲೂಕು ಕ್ರೀಡಾ ಮೈದಾನದಿಂದ ಮುಖ್ಯ ರಸ್ತೆ ಮೂಲಕ ಬಿಜೆಪಿಯ ಭರ್ಜರಿ ಅದ್ದೂರಿ ಭವ್ಯ ಮೆರವಣಿಗೆಯಲ್ಲಿ ಅವರು ಸಾವಿರಾರು ಬಿಜೆಪಿ ಕಾರ್ಯಕರ್ತರೊಂದಿಗೆ ಆಗಮಿಸಿದ ತಾಲೂಕು ತಹಶೀಲ್ದಾರ್ ಚುನಾವಣಾಧಿಕಾರಿ ಕಚೇರಿಗೆ ತೆರಳಿ ಚುನಾವಣಾ ಅಧಿಕಾರಿ ಕೆ ಎಚ್ ಸತೀಶ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಜೊತೆಗೆ ತಮ್ಮ ಆಸ್ತಿ ವಿವರವಾದ ಘೋಷಣ ಪ್ರಮಾಣ ಪತ್ರವನ್ನು ಸಲ್ಲಿಸಿದರು. ತಹಸಿಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ, ಬಿಜೆಪಿ ಮುಖಂಡರು ಇದ್ದರು.