ವಿದ್ಯಾರ್ಥಿಗಳು ತಾಂತ್ರಿಕ ಅಧ್ಯಯನಕ್ಕೆ ಆದ್ಯತೆ ನೀಡಿ: ಶಾಸಕ ಮಹಾದೇವಪ್ಪ
ರಾಮದುರ್ಗ 25: ತಾಲೂಕಿನಲ್ಲಿ ಪಾಲಿಟೆಕ್ನೀಕ್ ಕಾಲೇಜು ಪ್ರಾರಂಭಿಸಬೇಕು ಎಂಬ ಬಹು ದಿನಗಳ ಬೇಡಿಕೆ ಇಂದು ಈಡೇರಿದೆ, ಸುಸಜ್ಜಿತ ಕಟ್ಟಡ ಹಾಗೂ ಮೂಲಭೂತ ಸೌಲಭ್ಯಗಳನ್ನು ಪೊರೈಸಿ ಜಿಲ್ಲೆಯಲ್ಲಿಯೆ ಉತ್ತಮ ಕಾಲೇಜು ಮಾಡಲು ಶ್ರಮಿಸುತ್ತೆನೆ, ನಮ್ಮ ಭಾಗದ ವಿದ್ಯಾರ್ಥಿಗಳು ತಾಂತ್ರಿಕ ಅಧ್ಯಯನಕ್ಕೆ ಆದ್ಯತೆ ನೀಡಿ ಸ್ವಯಂ ಉದ್ಯೋಗ ಮಾಡಲು ಮುಂದೆ ಬರಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಕರೆ ನೀಡಿದರು.
ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ನೂತನ ಪಾಲಿಟೆಕ್ನಿಕ್ ಕಾಲೇಜು ಕಟ್ಟಡಕ್ಕೆ ರೂ. 8 ಕೋಟಿ ಕಾಮಗಾರಿಗೆ ಅಡಿಗಲ್ಲು ಹಾಗೂ ಕೈಗಾರಿಕಾ ತರಬೇತಿ ಸಂಸ್ಥೆ ಕಂಕಣವಾಡಿಯ ರೂ 2.5 ಕೋಟಿ ವೆಚ್ಚದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿನಲ್ಲಿ ಗುಣಾತ್ಮಕ ಶಿಕ್ಷಣ ದೊರೆಯಲು ಬೇಕಾದ ವ್ಯವಸ್ಥೆಯನ್ನು ಮಾಡಲು ನಾನು ಮೊದಲ ಆದ್ಯತೆಯನ್ನು ನೀಡಿದ್ದೆನೆ, ಅದೇ ರೀತಿ ಕಾಲೇಜಿನ ಶಿಕ್ಷಕ ವೃಂದವು ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿ ಶಿಕ್ಷಣದ ಪ್ರಗತಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಧನಲಕ್ಷೀ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಮಲ್ಲೇಶಿ ಯಾದವಾಡ ಮಾತನಾಡುತ್ತಾ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯಗಳನ್ನು ಸ್ಥಾಪಿಸಿ ಇಂದು ತಾಲೂಕಿಗೆ ತಾಂತ್ರಿಕ ಶಿಕ್ಷಣದ ಸೌಲಭ್ಯವನ್ನು ಸಹ ನೀಡಿದ ಶಾಸಕ ಮಹಾದೇವಪ್ಪ ಯಾದವಾಡ ಶಿಕ್ಷಣ ಪ್ರೇಮವು ಇತರರಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ನಗರದ ಪ್ರದೇಶದ ಶಿಕ್ಷಣದ ಸೌಲಭ್ಯಗಳು ನಮ್ಮ ತಾಲೂಕಿನಲ್ಲಿಯೆ ದೊರೆಯುವದು ಸಂತೋಷದ ಸಂಗತಿ ಶಿಕ್ಷಣ ಕ್ಷೇತ್ರದಲ್ಲಿ ನಮ್ಮ ತಾಲೂಕ ಮುಂಚುನಿಯಲ್ಲಿದೆ ಎಂದು ಹರ್ಷವ್ಯಕ್ತಪಡಿಸಿದರು. ಜಿಲ್ಲಾ ಪಂಚಾಯತ ಸದಸ್ಯ ರಮೇಶ ದೇಶಪಾಂಡೆ, ಶಿವಕ್ಕಾ ಬೆಳವಡಿ, ಮಾರುತಿ ತುಪ್ಪದ, ಕೃಷ್ಣಾ ಲಮಾಣಿ ರೇಣಪ್ಪ ಸೊಮಗೊಂಡ, ಪುರಸಭೆ ಅಧ್ಯಕ್ಷ ಶಂಕರ ಬೆನ್ನೂರ, ಉಪಾಧ್ಯಕ್ಷ ರಾಘು ದೊಡಮನಿ, ತಹಶೀಲ್ದಾರ ಗೀರಶ ಸ್ವಾದಿ, ತಾಪಂ ಇಓ ಮುರಳೀದರ ದೇಶಪಾಂಡೆ, ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಪ್ರಾಚಾರ್ಯ ಆರ್ ಬಿ ಪಾಟೀಲ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.