ಶಿಕ್ಷಣದೊಂದಿಗೆ ಸಂಸ್ಕಾರ ಕಲಿತರೆ ವಿದ್ಯಾರ್ಥಿಗಳ ಬದುಕು ಸಾರ್ಥಕ: ಅಡಿವೇಶಶಾಸ್ತ್ರಿ
ಮಹಾಲಿಂಗಪುರ 16: ಸಮೀಪದ ಪ.ಪಂ ಬೆಳಗಲಿಯ ಬೆಳಗಲಿ ವಿದ್ಯಾವರ್ಧಕ ಸಂಘದ ಪ್ರೌಢಶಾಲೆ, ರನ್ನ ಬೆಳಗಲಿ ಆಶ್ರಯದಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ತಾಯಂದಿರ ಸಭೆ ತಾಯಂದಿರ ಪಾದಪೂಜೆ ಹಾಗೂ ಅಮ್ಮಂದಿರ ಕೈ ತುತ್ತು ಕಾರ್ಯಕ್ರಮ ಹಾಗೂ ಸ್ವಾಮಿ ವಿವೇಕಾನಂದರ ಜನ್ಮದಿನದ ನಿಮಿತ್ಯ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದ ಸಾನಿಧ್ಯ ವಹಿಸಿದ ಬಾಗಲಕೋಟೆ ರಾಮಾರೂಢ ಮಠದ ಅಡಿವೇಶ ಶಾಸ್ತ್ರಿಗಳು ಶಿಕ್ಷಣ ಜೊತೆಗೆ ಸಂಸ್ಕಾರ ಕಲಿತರೆ ವಿದ್ಯಾರ್ಥಿಗಳ ಬದಕು ಸಾರ್ಥಕವಾಗುತ್ತದೆ ಎಂದು ಮಾರ್ಮಿಕವಾಗಿ ತಿಳಿಸುವುದರ ಜೊತೆಗೆ ಪ್ರತಿಯೊಬ್ಬರಿಗೆ ಜನ್ಮ ಕೊಟ್ಟು ರಕ್ಷಿಸಿ, ಪೋಷಿಸಿ, ಬೆಳೆಸಿದವಳು ತಾಯಿ. ಇವಳಿಗಿಂತ ಮಿಗಿಲಾದ ಜಗತ್ತಿನ ದೈವ ಮತ್ತೊಂದಿಲ್ಲ. ಈ ಶರೀರ ತಾಯಿಯ ಕೊಡುಗೆ ಆದರೆ ಈ ಶರೀರ ಶೃಂಗಾರವನ್ನು ಹೆಚ್ಚಿಸುವುದು ವಿದ್ಯೆಯಿಂದ ಮಾತ್ರ. ಆದಕಾರಣ ಶರೀರಕ್ಕೆ ವಿದ್ಯೆಯೇ ಭೂಷಣ. ತಂದೆ-ತಾಯಿಗಳು ಇಂದಿನ ಒತ್ತಡ ಜೀವನದಲ್ಲಿ ಶಿಕ್ಷಣಕ್ಕೆ ಮಾತ್ರ ಪ್ರಾಮುಖ್ಯತೆ ಕೊಡುತ್ತಿದ್ದಾರೆ ಹೊರತು ಸಂಸ್ಕಾರಯುತ ಶಿಕ್ಷಣ ಕಲಿಸುವಲ್ಲಿ ಎಡುವುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದ ಅವರು ತಾಯಂದಿರ ಕೈ ತುತ್ತು ಕಾರ್ಯಕ್ರಮ ಅಮೋಘವಾಗಿದೆ ಎಂದು ಹೇಳಿದರು.
ಕಾಡಯ್ಯ ಮಲ್ಲಯ್ಯ ಗಣಾಚಾರಿ, ಕಾರ್ಯದರ್ಶಿ ಪಂಡಿತಪ್ಪ ಪೂಜಾರಿ ಮಾತನಾಡಿದರು. ಶಾಲೆಯ ಮುಖ್ಯೋಪಾಧ್ಯಾಯ ಎಂ.ಎಸ್. ಗಾಣಿಗೇರರವರು ಪ್ರಾಸ್ತಾವಿಕವಾಗಿ ಮಾತನಾಡುವುದರ ಜೊತೆಗೆ ವೇದಿಕೆ ಹಿರಿಯರಿಗೆ ಸ್ವಾಗತಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀಮಂತ ಈಶ್ವರ್ಪ ಒಂಟಗೋಡಿ ವಹಿಸಿದರು.
ನಿರ್ದೇಶಕರಾದ ಪಾಂಡು ಪೆಟ್ಲೂರ, ಚಿಕ್ಕಪ್ಪ ನಾಯಕ, ಶಿಕ್ಷಕರಾದ ಎಸ್. ಬಿ. ರೆಡ್ಡಿರಟ್ಟಿ, ಹಣಮಂತ ಕುಂಬಾರ, ಎನ್ ಬಿ ಸಾಭೋಜಿ, ವಿನಾಯಕ ಬಕರೆ, ಮಲ್ಲಯ್ಯ ಘಂಟಿಮಠ ಹಾಗೂ ಆನಂದ ಪಾಟೀಲ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪಾಲಕ, ಪೋಷಕರು ಉಪಸ್ಥಿತರಿದ್ದರು. ಕೆ .ಎ. ಧಡೂತಿ, ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕ ಕೆ ಬಿ ಕುಂಬಾಳಿ ವಂದಿಸಿದರು. ಹಲವಾರು ವಿದ್ಯಾರ್ಥಿಗಳೂ ಮತ್ತು ಹಿರಿಯರು ಭಾಗಹಿಸಿದ್ದರು.