ಹುಲಿಕಟ್ಟಿ ಶಾಲೆಯಲ್ಲಿ ವಿದ್ಯಾರ್ಥಿಗಳ ಬಿಳ್ಕೊಡುಗೆ ಸಮಾರಂಭ
ರಾಣೇಬೆನ್ನೂರು 22: ಶಿಕ್ಷಣ ಪ್ರತಿಯೊಬ್ಬರ ಹಕ್ಕು, ಶಿಕ್ಷಣ ಪಡೆಯಲು ಮುಂದಾದಾಗ ಮಾತ್ರ ವಿದ್ಯಾರ್ಥಿಗಳ ಮತ್ತು ಅವರ ಪಾಲಕರ ಭವಿಷ್ಯ ಉಜ್ವಲವಾಗಲು ಸಾಧ್ಯವಾಗುವುದು ಎಂದು ಎಸ್ಡಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನಯ್ಯ ಹನುಗೋಡಿಮಠ ಹೇಳಿದರು.
ಅವರು ತಾಲೂಕಿನ ಹುಲಿಕಟ್ಟಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿಗಳ ಬಿಳ್ಕೊಡುಗೆ ಸರಸ್ವತಿ ಪೂಜಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಒಂದು ಕಾಲದಲ್ಲಿ ಶಿಕ್ಷಣ ಕಲಿಯುವುದೇ ಬಹಳ ಕಷ್ಟದಾಯಕ ಸಂಗತಿಯಾಗಿತ್ತು. ಕಾಲ ಬದಲಾದಂತೆ ಪಾಲಕರು ತಮ್ಮ ಮಕ್ಕಳು ಶೀಕ್ಷಣವಂತರಾದಾಗ ಮಾತ್ರ ಸಮಾಜದಲ್ಲಿ ಗೌರವ, ಅಭಿಮಾನ ಮತ್ತು ಸಮಾನ ಅವಕಾಶ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದಾರೆ, ಪರಿಣಾಮ ಇಂದು ಎಲ್ಲರಿಗೂ ಶಿಕ್ಷಣ ಸಿಗುತ್ತಲ್ಲಿದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಭೀಮಪ್ಪ ಕುಡುಪಲಿ, ಸ್ವಾಕರವೇ ಅಧ್ಯಕ್ಷ ಚಂದ್ರ್ಪ, ಎಸ್. ಡಿ. ಎಂ. ಸಿ. ಉಪಾಧ್ಯಕ್ಷ ರೇಣುಕಾ ಇಟಗಿ, ಹಾಲ ಸಿದ್ದಪ್ಪ ಕುಡುಪಲಿ, ಗಣೇಶ್ ಮುರುಡಪ್ಪನವರ, ರೇವಣಸಿದ್ದಪ್ಪ ಮುದುಕನಗೌಡ್ರು, ಸಾಕಮ್ಮ ಕೇರಕರ, ಕುಮಾರ್ ಗಡ್ಡದವರ, ಬಸವರಾಜ ಅಣ್ಣೇರ, ರತ್ನಮ್ಮ ಹೊಸಳ್ಳಿ, ನಿಂಗಮ್ಮ ದೊಡ್ಡ ಸಿದ್ದಪ್ಪನವರ, ಕರಿಯಪ್ಪ ಹೊಸಳ್ಳಿ, ನೇತ್ರಾ ಕಜ್ಜರಿ, ಸೇರಿದಂತೆ ಮತ್ತಿತರರು ಮಾತನಾಡಿದರು . ಇದೇ ಸಂದರ್ಭದಲ್ಲಿ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಹಾಗೂ ಸ್ಪರ್ಧಾತ್ಮಕ ಚಟುವಟಿಕೆಯಲ್ಲಿ ಪಾಲ್ಗೊಂಡು ಸಾಧನೆ ಮೆರೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಿ ಶುಭ ಹಾರೈಸಲಾಯಿತು. ಶಾಲಾ ಮುಖ್ಯೋಪಾಧ್ಯಾಯ ಕಾಳಿಂಗಪ್ಪ ಆಲದಗೇರಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.