ಸ್ಕೇಟಿಂಗ್ ನಲ್ಲಿ ವಿದ್ಯಾರ್ಥಿ ಸಾಧನೆ

ಸ್ಕೇಟಿಂಗ್ ನಲ್ಲಿ ವಿದ್ಯಾರ್ಥಿ ಸಾಧನೆ


ಕೊಲ್ಹಾರ 28: ಪಟ್ಟಣದ ವಿಜಯಕುಮಾರ್ ಕೊಟ್ಟಗಿ ಇವರ ಸುಪುತ್ರ ಹೇಮಂತ್ ಕೊಟ್ಟಗಿ ಕೆ ಜಿ ಎಸ್ ಸರ್ಕಾರಿ ಶಾಲೆಯ ಪುಟ್ಟ ಬಾಲಕ ಸೋಮವಾರ ಕೊಲ್ಹಾರದಿಂದ ಉಪ್ಪಲದಿನ್ನಿ ಗ್ರಾಮದ ಶ್ರೀ ಸಂಗಮನಾಥ ದೇವಾಲಯದ ವರೆಗೆ ಗ್ರಾಮೀಣ ರಸ್ತೆಯಲ್ಲಿ 12 ಕಿ ಮೀ ದೂರದವರೆಗೆ 60 ನಿಮಿಷದಲ್ಲಿ ತಲುಪಿ ಸ್ಕೇಟಿಂಗ್ ನಲ್ಲಿ ಸಾಧನೆ ಮಾಡಿದ್ದಾನೆ.  

ಹೇಮಂತ್ ಸಾಧನೆ ಹಿಂದೆ ತಾಯಿ ಜ್ಯೋತಿ ಕೊಟ್ಟಗಿ ರವರ ಪರಿಶ್ರಮ ಮತ್ತು ಪ್ರೇರಣೆ ಬಹಳ ದೊಡ್ಡದು ಏಕೆಂದರೆ ಮಗನ ಸಾಧನೆಯಲ್ಲಿ ತಮ್ಮ ಸಾಧನೆ ಕಂಡುಕೊಂಡ ಮಹಾನ್ ತಾಯಿ, ಹೇಮಂತ್ ಸರ್ಕಾರಿ ಶಾಲೆಯ 7ನೇ ತರಗತಿಯ ವಿದ್ಯಾರ್ಥಿ ಪಾಠದಲ್ಲು ಕ್ರೀಡೆಯಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಹೀಗೆ ಪಠ್ಯ ಮತ್ತು ಪಠ್ಯೇತರ ರಂಗದಲ್ಲಿ ಮೇಲುಗೈ ಸಾಧಿಸಿದ ಈ ಬಾಲಕ ಶಾಲೆಗೆ ಹಾಗೂ ಪಟ್ಟಣ ಹೆಮ್ಮೆಯ ಪ್ರತೀಕವಾಗಿದ್ದಾನೆ. ಸ್ಕೇಟಿಂಗ್ ದಲ್ಲಿ ಧಾರವಾಡ ಹುಬ್ಬಳ್ಳಿ ವಿಜಯಪುರದಲ್ಲಿ ನಡೆದ ಸ್ಪರ್ಧೆಯಲ್ಲಿ ವಿಜಯ ತನ್ನದಾಗಿಸಿಕೊಂಡಿದ್ದಾನೆ. ಹೇಮಂತ್ ನೃತ್ಯದಲ್ಲಿ ತನ್ನ ಛಾಪು ಮೂಡಿಸಿ ಧಾರವಾಡದ ರಂಗಾಯಣದಲ್ಲಿ ನೃತ್ಯ ಮಾಡಿ ಪ್ರಶಸ್ತಿ ವಿಜೇತನಾಗಿದ್ದಾನೆ. ಎಲ್ಲಾ ರಂಗಗಳಲ್ಲೂ ತನ್ನ ಸಾಧನೆ ಮಾಡುತ್ತಾ ಚಿತ್ರ ರಂಗದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾನೆ.  

ನನಗೆ ಒಂದು ಆಸೆಯಿತ್ತು ಇಂದು ಗಣರಾಜ್ಯೋತ್ಸವ ಮತ್ತು ನನ್ನ ತಂದೆತಾಯಿ ವಿವಾಹ ವಾರ್ಷಿಕೋತ್ಸವ ದಂದು ಉಪ್ಪಲದಿನ್ನಿ ಶ್ರೀ ಸಂಗಮನಾಥ ದೇವಸ್ಥಾನಕ್ಕೆ ಬಂದು ಹರಕೆ ತೀರಿಸಲು ಸಂಕಲ್ಪ ಮಾಡಿದ್ದೆ ಅದು ಇಂದು ನೇರವೇರಿತು ಎಂದು ಉತ್ಸಾಹದಿಂದ ಹೇಮಂತ್ ಹೇಳಿದನು.ಕೋಟ:"ನನ್ನ ಈ ಸಾಧನೆಗೆ ತಂದೆ ತಾಯಿ ಹಾಗೂ ಶಿಕ್ಷಕರ ಪ್ರೋತ್ಸಾಹವೇ ಕಾರಣ"-ಹೇಮಂತ್ ವಿಜಯಕುಮಾರ್ ಕೊಟ್ಟಗಿ ವಿದ್ಯಾರ್ಥಿ. ಕೆ ಜಿ ಎಸ್ ಕೊಲ್ಹಾರ.ಕೋಟ: "ಈ ಪುಟ್ಟ ಬಾಲಕನ ಸಾಹಸ ಕಂಡು ನಾನು ಆತನ ಫ್ಯಾನ್ (ಅಭಿಮಾನಿ)ಆದೆ ಆತನ ಸಾಧನೆಗೆ ನನ್ನ ಸಹಕಾರ ಯಾವಾಗಲೂ ಇರುತ್ತದೆ" 



ಸುದ್ದಿ ಓದಿ