ಸಿರುಗುಪ್ಪ

ಸಿರಗುಪ್ಪ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ: ಟೀಕೆಟಗಾಗಿ ಪೈಪೋಟಿ

ಸಿರಗುಪ್ಪ ವಿಧಾನಸಭಾ ಕ್ಷೇತ್ರದ ಕಣದಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ: ಟೀಕೆಟಗಾಗಿ ಪೈಪೋಟಿ

ಲೋಕದರ್ಶನ ವರದಿ 

ಸಿರುಗುಪ್ಪ 29: ವಿಧಾನಸಭಾ 92- ಮೀಸಲು ಎಸ್ ಟಿ ಕ್ಷೇತ್ರ ಕಾಂಗ್ರೆಸ್ ಮತ್ತು ಬಿಜೆಪಿ ಸಮಬಲ ಎ.ಅಬ್ದುಲ್ ನಬಿ ಸಿರುಗುಪ್ಪ ವಿಧಾನಸಭಾ ಮೀಸಲು ಎಸ್ ಟಿ ಕ್ಷೇತ್ರದಲ್ಲಿ ಒಟ್ಟು 2,10,817 ಮತದಾರರು, ಇದರಲ್ಲಿ ಮಹಿಳೆಯರು 1,06,869, ಪುರುಷರು 1,03880, ಇತರೆ 68 ಮತದಾರರು ಇದ್ದಾರೆ.  2023 ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಆಯ್ಕೆ ಪ್ರಕ್ರಿಯೆ ಚುರುಕು ಈ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಕೆಆರ್‌ಪಿಪಿ, ಆಮ್‌ಆದ್ಮಿ, ಬಿಎಸ್‌ಪಿ ಮತ್ತಿತರ ಪಕ್ಷಗಳ ಅಭ್ಯರ್ಥಿಗಳನ್ನು ಕಣಕ್ಕೆ  ಇಳಿಸಲು ತಯಾರಿ ನಡೆಸಿವೆ ಹಾಲಿ ಶಾಸಕ ಸೋಮಲಿಂಗಪ್ಪ  ಬಿಜೆಪಿಯು ಮತ್ತೆ ಟಿಕೆಟ್ ನೀಡಲು ಫಿಕ್ಸ್‌ ಆಗಿದೆ. ಅಕಸ್ಮಾತ್ ಬೇರೆಯವರಿಗೆ ಅಂದರೆ ಶಾಸಕರ ಪುತ್ರ ಎಂಎಸ್ ಸಿದ್ದಪ್ಪ ನಾಯಕರಿಗೆ ಸಿಗುವ ಪ್ರಕ್ರಿಯೆ ನಡೆದಿದೆ ಬಿಜೆಪಿಯ ಮೂಲ ಸಂಘ ಪರಿವಾರದ, ಎಬಿವಿಪಿ ನಲ್ಲಿ ಸೇವೆ ಮಾಡುತ್ತಾ ಪದವಿ ಕಾಲೇಜಿನ ಪ್ರಿನ್ಸಿಪಲ್ ನಿವೃತ್ತಿ ಹೊಂದಿದ ಬಿ ಬಸವರಾಜ್ ಅವರು ಸಹ ಬಿಜೆಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದಾರೆ. 

       ಕಾಂಗ್ರೆಸ್ಸಿನಲ್ಲಿ ತೆಕ್ಕಲಕೋಟೆ ಪಟ್ಟಣದ ಎಸ್ ನರೇಂದ್ರ ಸಿಂಹ, ಸಿರುಗುಪ್ಪ ನಗರಸಭಾ ಮಾಜಿ ಅಧ್ಯಕ್ಷ ಬಿ ಈರಣ್ಣ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಡಿ ಕಗ್ಗಲ್ ವೀರೇಶಪ್ಪ, ಹೊಸಬರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಕಾಂಗ್ರೆಸ್ ಟಿಕೆಟಿನ ಅಂತಿಮ ಹೋರಾಟದ ಕಣದಲ್ಲಿರುವ ಮಾಜಿ ಶಾಸಕ ಬಿ ಎಂ ನಾಗರಾಜ್, ಪರಾಭವಗೊಂಡಿದ್ದ ಬಿ.ಮುರಳಿಕೃಷ್ಣ  ಸಿರುಗುಪ್ಪ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದಲ್ಲಿ ಪ್ರಮುಖ ಮುಖಂಡ ಇರಬೇಕಿರುವ ಅಭ್ಯರ್ಥಿ, ಪರಮೇಶ್ವರ ನಾಯಕ ಮತ್ತೊಬ್ಬರು ಎಂದು ಹೇಳಲಾಗುತ್ತಿದೆ. ಟಿಕೆಟ್ ಘೋಷಣೆ ಆಗಿರುವುದಿಲ್ಲ ಬಿಎಸ್‌ಪಿ ಹಳ್ಳಿಮರದ ವೀರೇಶ್ ನಾಯಕ ಅಭ್ಯರ್ಥಿ ಎಂದು ಘೋಷಣೆ ಬಾಕಿ ಇದೆ. ಆಮ್ ಆದ್ಮಿ ಪಕ್ಷದಲ್ಲಿ ಗೊತ್ತುಪಡಿಸಿಲ್ಲ, ಕೆಆರ್‌ಪಿಪಿ  ಅಧಿಕೃತ ಅಭ್ಯರ್ಥಿ ಧರ​‍್ಪನಾಯಕ ಎಂದು ಘೋಷಿಸಲಾಗಿದೆ. ಮಾಜಿ ಶಾಸಕ ಬಿ ಎಂ ನಾಗರಾಜ್ ಈಗಾಗಲೇ ಒಮ್ಮೆ ಗೆಲವು ದಾಖಲಿಸಿದ ಮತ್ತೊಂದು ಅವಕಾಶ ಬೇಕೆಂದು ಕಾಂಗ್ರೆಸ್‌ನ ನಾಯಕರ ಮೊರೆ ಹೋಗಿದ್ದಾರೆ. ಬಿ.ಮುರಳಿಕೃಷ್ಣ ಕಳೆದ ಚುನಾವಣೆಯಲ್ಲಿ ಸೋಲುಂಡಿದ್ದ ಇನ್ನೊಂದು ಸಲ ಅವಕಾಶ ಕಲ್ಪಿಸಿಕೊಡಿ ಎಂದು ಕಾಂಗ್ರೇಸನ ನಾಯಕರ ದುಂಬಾಲು ಬಿದ್ದಿದ್ದಾರೆ . 

      ಸಿರುಗುಪ್ಪ ತಾಲೂಕಿನಲ್ಲಿ ಹೇರಳವಾಗಿ ಜಿಪ್ಸಂ ಖನಿಜ ದೊರೆಯುತ್ತದೆ ಮನೆ ಕಟ್ಟಲು ಉಪಯುಕ್ತವಾದ    ಗ್ರಾನೈಟ್ಟ್‌ ಕಲ್ಲಿನ ಕ್ವಾರಿಗಳಿಗೆ ಸಿರುಗುಪ್ಪ ಪ್ರಸಿದ್ಧಿಯಾಗಿದೆ 80 ಪ್ರತಿಶತ ನೀರಾವರಿ ಇರುವುದರಿಂದ ಭತ್ತ ಪ್ರಮುಖ ಬೆಳೆಯಾಗಿದೆ ಇಲ್ಲಿನ ಜಮೀನು ಫಲವತ್ತಾಗಿದ್ದು ಜೋಳ, ಭತ್ತ, ಕಬ್ಬು, ಹತ್ತಿ, ಶೇಂಗಾ, ನೆಲಗಡಲೆ, ನವಣೆ, ಅಲಸಂದಿ, ಹೆಸರು, ಗೋಧಿ, ಮೆಣಸಿನ ಕಾಯಿಗಳನ್ನು ಬೆಳೆಯುತ್ತಾರೆ ತುಂಗಭದ್ರಾ ನದಿಗೆ ಅಲ್ಲಲ್ಲಿ ಚೆಕ್ ಡ್ಯಾಮ್ ನಿರ್ಮಿಸಲಾಗಿದೆ ಅವೆಲ್ಲವೂ ವಿಜಯನಗರದ ಕಾಲದಿಂದಲೂ ಬಳಕೆಯಲ್ಲಿವೆ ತುಂಗಭದ್ರಾ ನಾಲೆ ಕಾಲುವೆ ತಾಲೂಕಿನಾದ್ಯಂತ ಬಹುತೇಕ ಜಮೀನಿಗೆ ನೀರು ಒದಗಿಸಿದೆ ನೀರಾವರಿ ಆಧಾರಿತ ಕೈಗಾರಿಕಾ ಕ್ಷೇತ್ರವಾಗಿದೆ ನೂರಕ್ಕೂ ಹೆಚ್ಚು ಅಕ್ಕಿ ಗಿರಣಿಗಳು ಇಲ್ಲಿವೆ ಹತ್ತಿ ಸಂಸ್ಕರಿಸುವ ಕಾರ್ಖಾನೆಗಳಿವೆ ಎಣ್ಣೆ ತಯಾರಿಕಾ ಘಟಕಗಳಿವೆ ಸಿರುಗುಪ್ಪ ಸಂಪತ್ ಭರಿತ ಕ್ಷೇತ್ರವಾಗಿದೆ ವಿಜಯನಗರದ ಅರಸರು ಕಟ್ಟಿಸಿದ ಆಗಿನ ಕಾಲದ ತುಂಗಭದ್ರಾ ನದಿ ಮೊದಲ ಆಣೆಕಟ್ಟು ಗಳಿವೆ ಧಾರ್ಮಿಕವಾಗಿ ದೇವಾಲಯಗಳು, ಮಸೀದಿಗಳು,  ದರ್ಗಾಗಳು ಇವೆ.  ಸಿರುಗುಪ್ಪ ವಿಧಾನಸಭಾ ಕ್ಷೇತ್ರದ ಮತದಾರರ ನಾಡಿ ಮಿಡಿತ ಏನೇ ಇದ್ದರೂ ವಿಧಾನಸಭಾ ಚುನಾವಣೆಯಲ್ಲಿ ಯಾರನ್ನು ಆಯ್ಕೆ ಮಾಡುತ್ತಾರೆ ಅನ್ನೋದು ತೀವ್ರ ಕುತೂಹಲ ಕೆರಳಿಸಿದೆ. 


ಸುದ್ದಿ ಓದಿ