ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿ; ಗ್ರಾಪಂ ಸದಸ್ಯೆ ಬಸಮ್ಮ
ಯಲಬುರ್ಗಾ 18: ಪ್ರತಿಯೊಬ್ಬರೂ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವಂತಹ ಕೆಲಸವಾಗಬೇಕು. ತಾಲೂಕಿನ ಕಟ್ಟೆ ಕಡೆಯ ಹಳ್ಳಿಗಳು ಶಾಲೆಗಳು ಬಹಳ ಸುಧಾರಣೆಯಾಗಲು ಎಲ್ಲರ ಪ್ರಾತ ಬಹುಮುಖ್ಯ. ನಾಗರಿಕರೂ ತಮ್ಮ ಮಕ್ಕಳಿಗೆ ಗುಣಾತ್ಮಕ ಶಿಕ್ಷಣಕ್ಕೆ ನೀಡುವ ಮೂಲಕ ವಿದ್ಯಾವಂತರನ್ನಾಗಿ ಮಾಡಲು ಪಣ ತೊಡಗಬೇಕು. ಶಿಕ್ಷಕರು ಹಾಗೂ ಎಸ್ಡಿಎಂಸಿ ಪದಾಧಿಕಾರಿಗಳು ಶಾಲೆಗಳು ಪ್ರಗತಿಯತ್ತಾ ಸಾಗಲು ಕೈ ಜೋಡಿಸಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯೆ ಬಸಮ್ಮ ಫರಂಗಿ ತಿಳಿಸಿದರು.
ತಾಲೂಕಿನ ವನಜಬಾವಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ಆಯ್ಕೆಯಾದ ಎಸ್ಡಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ, ಸದಸ್ಯರಿಗೆ ಒಂದು ದಿನದ ತರಬೇತಿ ಕಾರ್ಯಾಗಾರಕ್ಕೆ ಗ್ರಾಮ ಪಂಚಾಯಿತಿ ಸದಸ್ಯೆ ಬಸಮ್ಮ ಫರಂಗಿ ಗುರುವಾರ ಚಾಲನೆ ನೀಡಿದರು.
ಶಾಲಾ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ದೇವಿಂದ್ರಪ್ಪ ಗೊಂದಿ ಅಧ್ಯಕ್ಷತೆ ವಹಿಸಿದ್ದರು.
ತಾಳಕೇರಿಯ ವಲಯ ಸಂಪನ್ಮೂಲ ವ್ಯಕ್ತಿ ಚಿದಾನಂದಪ್ಪ ಗಂಜಿಹಾಳ, ಮುಖ್ಯ ಶಿಕ್ಷಕ ಮಹೇಂದ್ರ ಬಿ.ಸಿ., ಶಿಕ್ಷಕರಾದ ನಾಗರಾಜ್ ಪಟಗಾರ್,ವಿನಾಯಕ್ ನಾಯ್ಕ್,ಬಸವರಾಜ ವಡ್ಡರ್,ಎಸ್ಡಿಎಂಸಿ ಸದಸ್ಯರಾದ ರೇಣುಕಾ ಪರಂಗಿ,ರೇಣುಕಾ ಮೇಟಿ,ಗೀತಾ ಗೌಡ್ರ,ಅನ್ನಪೂರ್ಣಮ್ಮ ಪೋಲಿಸ್ ಪಾಟೀಲ್,ಸುಮಾಂಗಲಾ ನವ್ಲೇರಿ,ಕಂದಕೂರಪ್ಪ ಆಡೂರು,ಗುರುರಾಜ ಮೇಟಿ,ನಾಗರಾಜ ಕುಂಬಾರ,ಹುಚ್ಚಪ್ಪ ಪರಂಗಿ,ಅಶೋಕ ಮೇಟಿ,ಪಂಪನಗೌಡ ಪಾಟೀಲ್ ಸೇರಿದಂತೆ ಮತ್ತಿತರರು ಇದ್ದರು.