ರಬಾಕಾವಿಬನಹಟ್ಟಿ

ಯುವ ಸಂಸತ್ತು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ಯುವ ಸಂಸತ್ತು ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ರಬಕವಿ-ಬನಹಟ್ಟಿ : ಬಾಗಲಕೋಟೆಯಲ್ಲಿ ನಡೆದ ಯುವ ಸಂಸತ್ತು ಸ್ಪರ್ಧೆಯಲ್ಲಿ  ರಬಕವಿ-ಬನಹಟ್ಟಿ ತಾಲೂಕಿನ ಪದ್ಮಾವತಿ ಅಂತರಾಷ್ಟ್ರೀಯ ಶಾಲೆಯ ಮೂವರು ವಿದ್ಯಾರ್ಥಿಗಳಾದ ಪರಾಗ ಕಾಬರಾ, ಸಿಂಧುಜಾ ಚಿಂಡಕ ಹಾಗೂ ಅಭಿನಯ ಯಲ್ಲಟ್ಟಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಕುಮಾರಿ ಅಭಿನಯ ಯಲ್ಲಟ್ಟಿ ಪ್ರಥಮ ಸ್ಥಾನವನ್ನು ಗಳಿಸಿ ನಮ್ಮ ತಾಲೂಕಿನಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. 

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ನ ಸತೀಶ ವಿ. ಹಜಾರೆ, ಆಡಳಿತಾಧಿಕಾರಿ ಶ್ರೀಮತಿ ಭಾರತಿ ತಾಳಿಕೋಟಿ, ಪ್ರಾಂಶುಪಾಲ ಬಸವರಾಜ ಕಲಾದಗಿ ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.  


ಸುದ್ದಿ ಓದಿ