ಎಲಬುರ್ಗ

29ರಂದು ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

29ರಂದು ರಾಜ್ಯ ಮಟ್ಟದ ಕವಿಗೋಷ್ಠಿ ಕಾರ್ಯಕ್ರಮ

ಯಲಬುರ್ಗಾ 27: ಮಾಂತಮ್ಮ ವಿರಾಪೂರ ಟ್ರಸ್ಟ್‌ ಹಾಗೂ ಕರುನಾಡ ಪರಿಸರ ಸಂರಕ್ಷಣೆ ವೇದಿಕೆಯಿಂದ ಪಟ್ಟಣದ ದಿ. 29ರಂದು ಎಸ್‌.ಎ.ನಿಂಗೋಜಿ ಬಿ.ಈಡಿ ಕಾಲೇಜಿನಲ್ಲಿ ಶಾಂತಮ್ಮ ವೀರಾಪೂರ ಅವರ ದ್ವೀತಿಯ ವರ್ಷದ ಪುಣ್ಯಸ್ಮರಣೆ ನಿಮಿತ್ಯ ಆಹ್ಹಾನ ಕುರಿತು ರಾಜ್ಯ ಮಟ್ಟದ ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಕರುನಾಡ ಪರಿಸರ ಸಂರಕ್ಷಣೆ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್‌. ವೀರಾಪೂರ ತಿಳಿಸಿದ್ದಾರೆ.  ಈ ಒಂದು ಕವಿಗೋಷ್ಠಿ ಮುಖಾಂತರ ನಮ್ಮ ಜೀವನದಲ್ಲಿ ಬದಲಾವಣೆಯ ಬೆಳಕು ಹರಿಸುವ ನಮ್ಮೆಲ್ಲರ ಜೀವನದ ಬದುಕನ್ನು ರೂಪಿಸುವ ತಾಯಿಯನ್ನು ಪ್ರತಿಯೊಬ್ಬರು ಸ್ಮರಿಸುವ ಅಗತ್ಯತೆ ಇದ್ದು ಇದಕ್ಕಾಗಿ ನಮ್ಮ ಸಂಘಟನೆಯಿಂದ ಅವ್ವ ರಾಜ್ಯ ಮಟ್ಟದಲ್ಲಿ “ಅವ್ವ” ಕುರಿತು ಕವಿಗೋಷ್ಠಿ ಹಮ್ಮಿಕೊಳ್ಳಲಾಗಿದೆ. ಈ ಒಂದು ಕವಿಗೋಷ್ಠಿಯಲ್ಲಿ ಆಸಕ್ತರು ಕವಿಗಳು ಭಾಗವಹಿಸಿದವರಿಗೆ ರಾಜ್ಯ ಮಟ್ಟದ ಪ್ರಶಸ್ತಿ ನೀಡಲಾಗುವುದು ಎಂದು ಕರುನಾಡ ಪರಿಸರ ಸಂರಕ್ಷಣೆ ವೇದಿಕೆಯ ರಾಜ್ಯಾಧ್ಯಕ್ಷ ಬಿ.ಎಸ್‌. ವೀರಾಪೂರ  ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ. 


ಸುದ್ದಿ ಓದಿ