ಸರಕಾರಿ ವಾಹನ ಮೇಲೆ ಕಲ್ಲು ತೂರಾಟಕ್ಕೆ ಟ್ವಿಸ್ಟ್ : ತನ್ನ ತಪ್ಪು ಮುಚ್ವಿಡಲು ಮರಾಠಿಗರ ಮೇಲೆ ಗೂಬೆ ಕುರ್ರಿಸಿದ್ದ ವಾಹನ ಚಾಲಕ : ಪೊಲೀಸ ತನಿಖೆಯಲ್ಲಿ ಸತ್ಯ ಬಟಾಬಯಲು

ಸರಕಾರಿ ವಾಹನ ಮೇಲೆ ಕಲ್ಲು ತೂರಾಟಕ್ಕೆ ಟ್ವಿಸ್ಟ್ : ತನ್ನ ತಪ್ಪು ಮುಚ್ವಿಡಲು ಮರಾಠಿಗರ ಮೇಲೆ ಗೂಬೆ ಕುರ್ರಿಸಿದ್ದ ವಾಹನ ಚಾಲಕ : ಪೊಲೀಸ ತನಿಖೆಯಲ್ಲಿ ಸತ್ಯ ಬಟಾಬಯಲು

ಬೆಳಗಾವಿ, ಡಿ, 15 : ಸರಕಾರಿ ವಾಹನದ ಚಾಲಕ ಗ್ಲಾಸ್ ಒಡೆಯುವ ಮೂಲಕ ತಾನು ಮಾಡಿದ ತಪ್ಪನ್ನು ಮುಚ್ವಿಡಲು ಮರಾಠಿ ಭಾಷಿಕರು ತನ್ನ ವಾಹನ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎಂದು ಕುಂಟು ನೆಪ ಹೇಳಿ ಮರಾಠಿಗರ ಮೇಲೆ ಗೂಬೆ ಕುರ್ರಿಸಿದ್ದ ಸರಕಾರಿ ವಾಹನ ಚಾಲಕನನ್ನು ಕೊನೆಗೆ ಬೆಳಗಾವಿ ಪೊಲೀಸರು ಬಾಯಿಬಿಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

     

     ದಿ.15ರಂದು ಬೆಂಗಳೂರು ಚಾಮರಾಜಪೇಟೆಯ ಅಗ್ರಿಕಲ್ಟರಲ್ ರೂರಲ್ ಡೆವೆಲೆಪ್‌ಮೆಂಟ್ ಬ್ಯಾಂಕ್‌ ವಾಹನದ ಚಾಲಕನಾದ ಚೇತನ ಎನ್. ವಿ. (88) ಇವನು ದೂರು ನೀಡಿದ್ದು, ತಾನು ದಿ. 14ರಂದು ಬ್ಯಾಂಕ್‌ನ ಬೋಲೇರೊ ವಾಹನ ಸಂಖ್ಯೆ.ಕೆಎ-02/ಎಂಎಂ-5173 ವಾಹನದಲ್ಲಿ ಬೆಂಗಳೂರಿನಿಂದ ಬೆಳಗಾವಿ ಅಧಿವೇಶನದ ಕರ್ತವ್ಯಕ್ಕೆ ಬರುವಾಗ ರಾತ್ರಿ 10.30 ಗಂಟೆಗೆ ಹಲಗಾ, ಸುವರ್ಣ ಸೌದದ ಹತ್ತಿರ ಯಾರೋ ಕೆಲವರು ಬಂದು ತನ್ನ ವಾಹನವನ್ನು ಕೈಮಾಡಿ ತಡೆದು, ವಾಹನದ ಮುಂದಿನ ಗ್ಲಾಸ್ ಒಡೆದಿರುತ್ತಾರೆ ಹಾಗೂ ಮರಾಠಿ ಭಾಷೆಯಲ್ಲಿ ಮಾತನಾಡುತ್ತ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.

   ಪೊಲೀಸರ ತನಿಖೆ ವೇಳೆ ಘಟನೆಯ ಕುರಿತು ಕೂಲಂಕುಷ ವಿಚಾರಣೆ ಮಾಡಲಾಗಿದ್ದು, ಸರಕಾರಿ ವಾಹನ ಚಾಲಕ ಬೆಂಗಳೂರಿನಿಂದ ಬೆಳಗ್ಗೆ 7.45 ಗಂಟೆಗೆ ಬಿಟ್ಟು ಬೆಳಗಾವಿ ಕಡೆಗೆ ಬರುವಾಗ ಸಂಜೆ 4.30ಕ್ಕೆ ಶಿಗ್ಗಾಂವ ತಾಲೂಕಿನ ತಡಸ ಗ್ರಾಮದಲ್ಲಿ ರೆಸ್ಟೋರೆಂಟ‌ ಒಂದರಲ್ಲಿ ಮದ್ಯ ಸೇವಿಸಿ ಊಟ ಮಾಡಿದ ನಂತರ ಮತ್ತೆ ಬೆಳಗಾವಿಗೆ ಪ್ರಯಾಣ ಬೆಳೆಸಿರುತ್ತಾನೆ. 

    ಬಳಿಕ ಧಾರವಾಡ ಮಾರ್ಗವಾಗಿ ಹಿರೇಬಾಗೇವಾಡಿ ಟೋಲ್ ನಾಕಾ ಮಧ್ಯದಲ್ಲಿ ಆತನ ಸರಕಾರಿ ಬೊಲೇರೊ ವಾಹನದ ಮುಂದೆ ಸ್ಟೀಲ್ಬ್  ಬಾರಗಳನ್ನು ತುಂಬಿಕೊಂಡ ಹೊರಟಿದ್ದ ಟ್ರಕ್‌ಗೆ ತಾಕಿ ಸರಕಾರಿ ವಾಹನದ ಮುಂದಿನ ಗ್ಲಾಸು ಒಡೆದಿರುತ್ತದೆ. ಗ್ಲಾಸ್ ಒಡೆದ ಬಗ್ಗೆ ಹಿರೇಬಾಗೇವಾಡಿ ಟೋಲ್ ನಾಕಾ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುತ್ತದೆ. ತನ್ನ ತಪ್ಪಿನಿಂದ ಬ್ಯಾಂಕಿನ ವಾಹನದ ಗ್ಲಾಸು ಒಡೆದಿದೆ ಅಂತಾ ಗೊತ್ತಾದರೆ ತನಗೆಮೇಲಾಧಿಕಾರಿಗಳು ಶಿಸ್ತು ಕ್ರಮ ಜರುಗಿಸುವರೆಂದು ಚಾಲಕನು ಈ ಎಲ್ಲ ನೈಜ ಘಟನೆಯನ್ನು ಮುಚ್ಚಿಟ್ಟು ವಿನಾಕಾರಣ ಪೊಲೀಸ್‌ರಿಗೆ ಸುಳ್ಳು ದೂರನ್ನು ನೀಡಿ ಪ್ರಕರಣ ದಾಖಲಿಸಿರುತ್ತಾನೆ.

    ದೂರುದಾರ ಹೇಳಿದ ಹಾಗೆ ಯಾವುದೇ ವ್ಯಕ್ತಿಗಳು ಆತನ ವಾಹನದ ಗ್ಲಾಸ್ ಒಡೆದಿರುವುದಿಲ್ಲ. ಹಾಗೂ ಅಂತಹ ಯಾವುದೆ ಘಟನೆ ನಡೆದಿರುವುದಿಲ್ಲ, ಎಂದು ಪೊಲೀಸರ ತನಿಖೆಯಿಂದ ಕಂಡು ಬಂದಿರುತ್ತದೆ.ಸುಳ್ಳು ದೂರು ನೀಡಿದ ಸರಕಾರಿ ವಾಹನ ಚಾಲಕನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದ್ದು, ಸಾರ್ವಜನಿಕರು ಯಾವುದೇ ಸುಳ್ಳು ಸುದ್ದಿಗೆ ಕಿವಿಗೊಡಬಾರೆಂದು ಬೆಳಗಾವಿ‌ ಪೊಲೀಸರು ವಿನಂತಿ ಸಿಕೊಂಡಿದ್ದಾರೆ.

ಸುದ್ದಿ ಓದಿ