28 ರಿಂದ ರಾಜ್ಯಮಟ್ಟದ ಯುವ ಪಂಚಮಸಾಲಿ ಸಮಾಜದ ಶಿಬಿರ
ಲೋಕದರ್ಶನ ವರದಿ
ಕೊಪ್ಪಳ 20: ವೀರಶೈವ ಲಿಂಗಾಯತ್ ಪಂಚಮಸಾಲಿ ಸಂಘ ರಾಜ್ಯ ಯುವ ಘಟಕದ ವತಿಯಿಂದ ಸಮಾಜ ಯುವ ಪಂಚಮಸಾಲಿ ಶಿಬಿರ ಇದೇ ದಿ. 28 ಹಾಗೂ 29ರಂದು ಎರಡು ದಿನಗಳ ಕಾಲ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದಲ್ಲಿ ಜರುಗಲಿದೆ ಎಂದು ರಾಜ್ಯ ಪಂಚಮಸಾಲಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ ನವಲಗುಂದ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ ಜಂಟಿ ಹೇಳಿಕೆ ನೀಡಿದರು.
ಅವರು ಶುಕ್ರವಾರ ನಗರದ ಪತ್ರಿಕಾ ಭವನದಲ್ಲಿ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿ, ಎರಡು ದಿನಗಳ ಕಾಲ ಜರುಗಲಿರುವ ಶಿಬಿರದ ಸಾನಿನಧ್ಯವನ್ನು ಹರಿಹರ ಪೀಠದ ಜಗದ್ಗುರು ಶ್ರೀ ವಚನಾಂದ ಸ್ವಾಮಿಜಿ ವಹಿಸಲಿದ್ದಾರೆ. ಸದರಿ ಶಿಬಿರದಲ್ಲಿ ಸಮಾಜದ ಯುವಕರಲ್ಲಿ ಪರಸ್ಪರ ಪರಿಚಯ ಸಂಘಟನೆ, ಪರಿಣಾಮಕಾರಿ ಭಾಷಣ ಕಲೆ, ಸೃಜನಶೀಲತೆ, ಹೊಸ ವ್ಯಾಪಾರ ಅಭಿವೃದ್ದಿ, ವ್ಯವಸಾಯ ಜೊತೆಗೆ ವ್ಯಾಪಾರ, ಕೃಷಿಯಲ್ಲಿ ಪ್ರಗತಿ, ಆತ್ಮವಿಶ್ವಾಸ, ಮಾನಾವೀಯ ಸಂಬಂದಗಳು. ಪರಿಣಾಮಕಾರಿ ನಿರ್ಧಾರ ಕಲೆ, ಉತ್ತಮ ನಾಯಕತ್ವ, ಗುರಿ ತಲುಪುವದು, ಸ್ವರ್ಧಾತ್ಮಕ ಪರೀಕ್ಷೆ ಪೂರಕ ಜ್ಞಾನ ಕೆಎಎಸ್, ಐಎಎಸ್, ಯೋಗ ಸಂಸ್ಕತಿ ಬಗ್ಗೆ ನಿಗದಿತ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಬೋದನೆ ಕಾರ್ಯ ನಡೆಯಲಿದೆ ಎಂದರು.
ಮುಂದುವರೆದು ಮಾತನಾಡಿ, ರಾಜ್ಯ ಎಲ್ಲಾ ಜೆಲ್ಲೆಗಳಿಂದ ಪಿಯುಸಿ, ಪದವಿಪೂರ್ಣಗೊಳಿಸಿದ ವಿದ್ಯಾರ್ಥಿಗಳು ಭಾಗವಹಿಸಬೇಕು. ಸದರಿ ಪ್ರವೇಶ ಉಚಿತವಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದ ಅವರು, ಸದರಿ ಶಿಬಿರದ ಉದ್ಘಾಟನೆಗೆ ಸಚಿವರಾದ ಮುರಗೇಶ್ ನಿರಾಣಿ, ಸಿಸಿ ಪಾಟೀಲ್, ಶಂಕರ ಪಾಟೀಲ್ ಮುನೆಕೊಪ್ಪ, ಸಂಸದ ಸಂಗಣ್ಣ ಕರಡಿ ಸೇರಿದಂತೆ ಪಂಚಮಸಾಲಿ ಸಮಾಜದ ರಾಜ್ಯಾಧ್ಯಕ್ಷ ನಾಗನಗೌಡರ್, ಬಸವರಾಜು ದಿಂಡೂರು, ಭಾವಿ ಬೆಟ್ಟಪ್ಪ, ಸಿದ್ದೇಶ್ ಹನಸಿ, ಮಲ್ಲಣ್ಣ ಬೊಮ್ಮಸಾಗರ, ಸೊಮನಗೌಡ ಪಾಟೀಲ್ ಸೇರಿ ಸಮಾಜದ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾಗಳಿಂದ ಸುಮಾರು 3000ದಷ್ಷು ಯುವಕರು ಪಾಲ್ಗೊಳ್ಳಲಿದ್ದಾರೆ ಎಂದು ರಾಜ್ಯ ಪಂಚಮಸಾಲಿ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ ನವಲಗುಂದ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಕಿಚಿಡಿ ಕೊಟ್ರೇಶ ಜಂಟಿ ಹೇಳಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಹರಿಹರ ಪೀಠದ ಧರ್ಮದರ್ಶಿ ಕೊಪ್ಪಳದ ಕಳಕನಗೌಡ ಪಾಟೀಲ್ ಕಲ್ಲೂರು, ಸಮಾಜ ಯುವ ಪದಧಾಕಾರಿಗಳಾದ ದೇವರಾಜ ಹಾಲಸಮುದ್ರ, ಮಂಜುನಾಥ ನಾಡಗೌಡ, ಪ್ರಭುಗೌಡ ಪಾಟೀಲ್, ಶಿವಕುಮಾರ್ ಬಳಿಗಾರ, ವೀರಬಸವ, ವಿಶ್ವನಾಥಗೌಡ ಸೇರಿದಂತೆ ಇತರರು ಇದ್ದರು.