ಮುಂಡರಗಿ

ಕೆರೆಗಳ ನೀರು ತುಂಬಸುವ ಕಾಮಗಾರಿಗೆ ಚಾಲನೆ

ಕೆರೆಗಳ ನೀರು ತುಂಬಸುವ ಕಾಮಗಾರಿಗೆ ಚಾಲನೆ

ಮುಂಡರಗಿ 30:  ಕೆರೆಗಳಿಗೆ ನೀರು ಭರ್ತಿಯಾಗುವದರಿಂದ ಗ್ರಾಮೀಣ ಪ್ರದೇಶದ ರೈತರ ಜೀವನ ಮಟ್ಟ ಸುಧಾರಣೆ ಆಗಲಿದೆ. ಹೀಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮತದಾರರು ಜನಾದೇಶ ನೀಡಿದ್ದರಿಂದ ಜನರ ಹಿತವನ್ನು ಬಯಸುವ ಆಡಳಿತ ನಡೆಯುತ್ತಿದೆ ಎಂದು ಹಾವೇರಿ ಲೋಕಸಭಾ ಸದಸ್ಯ ಶಿವಕುಮಾರ ಉದಾಸಿ ಹೇಳಿದರು. 

 ತಾಲೂಕಿನ ಮುರಡಿ ಗ್ರಾಮದಲ್ಲಿ ಭಾನುವಾರ ನೀರಾವರಿ ನಿಗಮ ನಿಯಮಿತ, ಸಿಂಗಟಾಲೂರ ಏತನೀರಾವರಿ ಯೋಜನೆ ಅಡಿಯಲ್ಲಿ 197.50ಕೋಟಿ ಮೊತ್ತದ 29 ಕೆರೆಗಳಿಗೆ ಹಮ್ಮಿಗಿ ಬ್ಯಾರೇಜನಿಂದ ತುಂಗಭದ್ರಾ ನದಿಯ ನೀರನ್ನು ತುಂಬಿಸುವ ಜ್ಯಾಲವಾಡಗಿ ಏತನೀರಾವರಿ ಯೋಜನೆ ರೋಣ ಕ್ಷೇತ್ರದಲ್ಲಿ 5, ಶಿರಹಟ್ಟಿ ಕ್ಷೇತ್ರದಲ್ಲಿ 6, ಗದಗ ಮತಕ್ಷೇತ್ರದಲ್ಲಿ 18 ಕೆರೆಗಳಿಗೆ) ನೀರು ತುಂಬಲಿರುವ ಕಾಮಗಾರಿಯ ಶಂಕುಸ್ಥಾಪನೆ ಮಾಡಿ ಮಾತನಾಡಿದ ಅವರು ಒಂದು ಪಕ್ಷಕ್ಕೆ ಜನಾದೇಶ ಸಿಕ್ಕಾಗ ಜನಪ್ರತಿನಿಧಿಗಳು ಸಾರ್ವಜನಿಕರ ಕೆಲಸವನ್ನು ಭದ್ದತೆಯಿಂದ ಮಾಡಬೇಕು.ಆ ದಿಸೆಯಲ್ಲಿ ಈ ಭಾಗದ ಇಬ್ಬರು ಶಾಸಕರು ಈ ಯೋಜನೆ ತರಲು ಸಾಕಷ್ಟು ಶ್ರಮಪಟ್ಟಿದ್ದರಿಂದ ಯೋಜನೆ ಪ್ರಾರಂಭವಾಗಿದ್ದು ನುಡಿದಂತೆ ನಡೆಯುವ ಏಕೈಕ ಪಕ್ಷ ನಮ್ಮದು ಎಂದರು. 

 ರೋಣ ಮತಕ್ಷೇತ್ರದ ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಹಲವು ವರ್ಷಗಳಿಂದ ಈ ಭಾಗದ ರೈತರು ನಮ್ಮ ಗ್ರಾಮದ ಕೆರೆಗೆ ನೀರು ತುಂಬಿಸಬೇಕು ಎಂದು ಒತ್ತಡ ಹಾಕಿದ್ದರು. ನಾನು ಸಹ ಈ ಭಾಗದ ರೈತರಿಗೆ ಜ್ಯಾಲವಾಡಗಿ ಏತನೀರಾವರಿ ಯೋಜನೆ ಪ್ರಾರಂಭ ಮಾಡಿದ ನಂತರವೇ ಚುನಾವಣೆಗೆ ಮತ ಕೇಳಲು ಬರುತ್ತೇನೆ ಎಂದು ಭರವಸೆ ನೀಡಿದ್ದೆ. ಹೇಳಿದಂತೆ ನಡೆದುಕೊಂಡಿದ್ದು ಈ ಯೋಜನೆ ರೈತರಿಗೆ ಕಾಮಧೇನು ಆಗಲಿದ್ದು ಈ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ನೋಡಿ ನನಗೆ ಮತ್ತೊಮ್ಮೆ ಆಶಿರ್ವಾದ ಮಾಡಿದರೆ ನಿಮ್ಮ ಸೇವೆಯನ್ನು ಮಾಡುತ್ತೇನೆ ಎಂದು ಹೇಳಿದರು. 

  ಶಿರಹಟ್ಟಿ ಮಿಸಲು ಕ್ಷೇತ್ರದ ರಾಮಣ್ಣ ಲಮಾಣಿ ಮಾತನಾಡಿ ಮಾಜಿ ಶಾಸಕ ರಾಮಕೃಷ್ಠ ದೊಡ್ಡಮನಿ ಕಳೆದ ಚುನಾವಣೆಯ ಪೂರ್ವದಲ್ಲಿ ಅನುದಾನವಿಲ್ಲದೆ ಹಲವು ಕಾಮಗಾರಿಗಳಿಗೆ ಸುಳ್ಳು ಪೂಜೆ ಮಾಡುವದನ್ನು ನೋಡಿ ನಾನು ಚುನಾವಣೆಗೆ ಸ್ಪರ್ಧೆ ಮಾಡುವುದು ಬೇಡ ಎನ್ನುವ ತಿರ್ಮಾನ ಮಾಡಿದ್ದೆ ಆದರೆ ಆತ್ಮವಿಶ್ವಾಸದಿಂದ ಧೈರ್ಯ ಮಾಡಿ ಚುನಾವಣೆಗೆ ಸ್ಪರ್ಧೆ ಮಾಡಿದ್ದರಿಂದ ಕ್ಷೇತ್ರದ ಮತದಾರರು 30ಸಾವಿರ ಮತಗಳ ಅಂತರದಿಂದ ನನ್ನನು ಗೆಲ್ಲಿಸಿದರು. ನಾನು ಸಹ ಕ್ಷೇತ್ರದ ಅಭಿವೃದ್ಧಿ ಆದ್ಯತೆ ನೀಡಿದ್ದೇನೆ.ಇದು ನನ್ನ ಕೊನೆಯ ಚುನಾವಣೆಯಾಗಿದ್ದು ಮತದಾರರು ಮತ್ತೊಮ್ಮೆ ನನಗೆ ಆಶಿರ್ವಾದ ಮಾಡುತ್ತಾರೆ ಎನ್ನುವ ವಿಶ್ವಾಸವಿದೆ ಎಂದರು. 

  ವೀರನಗೌಡ ಜಾಲವಾಡಗಿ,ಪುಟ್ಟನಗೌಡ ಪಾಟೀಲ,ಯುವಮುಖಂಡ ಕುಮಾರಸ್ವಾಮಿ ಹಿರೇಮಠ ಮಾತನಾಡಿದರು. 

   ಕಾರ್ಯಕ್ರಮದಲ್ಲಿ ಮುರಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಹೊನ್ನವ್ವ ಮಲಿಯಪ್ಪನವರ, ಉಪಾಧ್ಯಕ್ಷ ಮಹಾಂತೇಶ ಬೂದಿಹಾಳ, ಭಾಗೇವಾಡಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ ಪಾಟೀಲ, ಮುಂಡರಗಿ ಪುರಸಭೆ ಅಧ್ಯಕ್ಷೆ ಕವಿತಾ ಅಂದಪ್ಪ ಉಳ್ಳಾಗಡ್ಡಿ, ಮುಖಂಡರಾದ ವೀರನಗೌಡ ಪಾಟೀಲ, ಡಂಬಳ ಮಂಡಳ ಅಧ್ಯಕ್ಷ ರವಿ ಕರಿಗಾರ, ಅಂದಪ್ಪ ಹಾರೂಗೇರಿ, ಬಸವರಾಜ ಸಂಗನಾಳ, ನಾಗರಾಜ ಕಾಟ್ರಳ್ಳಿ, ಸಣ್ಣವೀರ​‍್ಪ ಹಳ್ಳೆಪ್ಪನವರ,ಮುದ್ಲಿಂಗಪ್ಪ ಕೊರ್ಲಹಳ್ಳಿ, ಕೃಷ್ಣ ರಾಠೋಡ, ಶಿವಪ್ಪ ಅಂಕದ, ರಾಜೇಶ ಅರಕಲ್ಲ,  ಸಿಂಗಟಾಲೂರ ಏತನೀರಾವರಿ ಸಹಾಯ ಕಾರ್ಯಪಾಲಕ ಇಂಜನೀಯರ ರಮೇಶ ಎಚ್, ಕಾರ್ಯಪಾಲಕ ಇಂಜನೀಯರ ಪ್ರಕಾಶ ಐಗೋಳ ಇಲಾಖೆ ಸಿಬ್ಬಂದಿಗಳು, ಮಲ್ಲನಗೌಡ ಪಾಟೀಲ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. 


ಸುದ್ದಿ ಓದಿ