ಮಹಲಿಂಗಪುರ

ಸರ್ಕಾರ ನೇಕಾರರ ನೆರವಿಗೆ ನಿಂತಿರುವುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿಗೆ: ಸವದಿ

ಸರ್ಕಾರ ನೇಕಾರರ ನೆರವಿಗೆ ನಿಂತಿರುವುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿಗೆ: ಸವದಿ

ಮಹಾಲಿಂಗಪುರ : ಈ ಹಿಂದೆ ಕಾಂಗ್ರೆಸ್ನ ಸಿದ್ದರಾಮಯ್ಯ ಸಕರ್ಾರ ಲಕ್ಷಾಂತರ ಕೋಟಿ ಸಾಲ ಮಾಡಿಯೂ ನೇಕಾರರಿಗೆ ಯಾವುದೇ ಯೋಜನೆಗಳನ್ನು ಪ್ರಕಟಿಸಲಿಲ್ಲ. ಇಂತಹ ಕೊರೊನಾ ಸಂಕಷ್ಟದಲ್ಲಿಯೂ ಭಾಜಪ ಸಕರ್ಾರ ನೇಕಾರರ ನೆರವಿಗೆ ನಿಂತಿರುವುದು ಕಾಂಗ್ರೆಸ್ಸಿಗರ ಹೊಟ್ಟೆ ಉರಿಗೆ ಕಾರಣವಾಗಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ಖಾರವಾಗಿ ನುಡಿದರು. ನಗರದ ಜಿಎಲ್ ಬಿಸಿ ವಸತಿ ಗೃಹದ ಆವರಣದಲ್ಲಿ ನೇಕಾರರಿಗೆ ಕೊರೋನಾ ವಿಶೇಷ ಪ್ಯಾಕೇಜ್ ಘೋಷಣೆ ಪ್ರಯುಕ್ತ, ನೇಕಾರ ಮುಖಂಡರು ಏರ್ಪಡಿಸಿದ ರಾಜ್ಯ ಸಕರ್ಾರಕ್ಕೆ ಅಭಿನಂದನೆ ಹಾಗೂ ಶಾಸಕರ ಸನ್ಮಾನ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು, ನೇಕಾರರ ಪರವಾಗಿ ನಾನು ಮೊದಲ ಅಧಿವೇಶನದಿಂದಲೇ ಶತಪ್ರಯತ್ನ ಮಾಡುತ್ತ ಬಂದಿದ್ದು, ಈಗ ಫಲ ದೊರಕಿದೆ. ಹಿಂದೆ ಇದೇ ನೇಕಾರ ನಾಯಕಿ ಉಮಾಶ್ರೀ ಪ್ರಭಾವಿ ಖಾತೆಗಳನ್ನು ಹೊಂದಿಯೂ ನೇಕಾರರಿಗೆ ಕವಡೆಕಾಸಿನ ಕೆಲಸ ಮಾಡಲಿಲ್ಲ, ಈಗ ವೃಥಾ ಆರೋಪ ಮಾಡುತ್ತಿರುವ ಅವರಿಗೆ ಅಂದು ನೇಕಾರರ ಬಗ್ಗೆ ಕಾಳಜಿ ಇರಲಿಲ್ಲವೇ ? ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊರೋನಾ ರೋಗ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಮನೆಯಲ್ಲಿದ್ದು ತಮ್ಮ ಬಾದಾಮಿ ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಎಳ್ಳಷ್ಟು ಕಾಳಜಿ ತೋರಿಸಲಿಲ್ಲ, ಪ್ರಾಮಾಣಿಕ ಕೆಲಸ ಮಾಡುತ್ತಿರುವ ಸಕರ್ಾರದ ಮೇಲೆ ವೃಥಾ ಆರೋಪ ಮಾಡುವುದನ್ನು ಬಿಟ್ಟು ಕೊರೋನಾ ಓಡಿಸಲು ಕೈಜೋಡಿಸಿ ಎಂದು ವಿರೋಧ ಪಕ್ಷದ ನಾಯಕರಿಗೆ ಟಾಂಗ್ ಕೊಟ್ಟರು.

ಈಗ ನನಗೆ ಶಾಸಕರ ನಿಧಿಯಲ್ಲಿ 50 ಲಕ್ಷ ರೂಗಳ ಅನುದಾನ ಬಂದಿದ್ದು ಕ್ಷೇತ್ರಾದ್ಯಂತ ಆಸ್ಪತ್ರೆಗಳಲ್ಲಿರುವ ಕೊರತೆಗಳನ್ನು ನೀಗಿಸಲು ಬಳಸಿಕೊಳ್ಳುತ್ತೇನೆ ಎಂದರು.

ಸಕರ್ಾರಕ್ಕೆ ಶಾಸಕರಿಂದ ಮತ್ತಷ್ಟು ಆಗ್ರಹ : ನೇಕಾರ ಮುಖಂಡರ ಆಗ್ರಹದಂತೆ ನೇಯ್ಗೆ ಪೂರ್ವ ಚಟುವಟಿಕೆಗಳಿಗೆ ನಬಾಡರ್್ ರೀಎಂಬೂಸರ್ೇಮೆಂಟ್ ಅಡಿಯಲ್ಲಿ ನೇಕಾರರಿಗೆ 25 ಸಾವಿರ ರೂಗಳ ಕನಿಷ್ಠ ಸಾಲ, ರೈತರಿಗೆ ಇರುವ ಸೌಲಭ್ಯಗಳಂತೆ ದುಡಿಯುವ ಬಂಡವಾಳ ದ್ವಿಗುಣಗೊಳಿಸಲು 6 ರಿಂದ 8ಲಕ್ಷ ರೂಗಳಿಗೆ ಸಾಲ ಹೆಚ್ಚಿಸುವಿಕೆ, ನೇಕಾರರಿಗೆ ಪ್ರತಿಶತ 90 ರಷ್ಟು ಸಬ್ಸಿಡಿ ದರದಲ್ಲಿ 2 ಪವರ್ ಲೂಮ್ ಗಳ ಒದಗಿಸುವಿಕೆ, ಪ್ರತಿವರ್ಷ ನೇಕಾರ ಸಮ್ಮಾನ್ ಯೋಜನೆಯ ಮೊತ್ತವನ್ನು 5 ಸಾವಿರ ರೂಗಳಿಗೆ ಹೆಚ್ಚಿಸಲು, ವಿದ್ಯಾ ವಿಕಾಸ ಅಡಿಯಲ್ಲಿ ನೇಕಾರರ ಬಟ್ಟೆಗೆ ಹೆಚ್ಚಿನ ದರ ನಿಗದಿಸಿ ನಿಗಮಕ್ಕೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಿ ನೇಕಾರಿಕೆಗೆ ಪುನಜರ್ೀವನ ನೀಡುವುದು ಅಲ್ಲದೇ ಇನ್ನೂ ಹಲವಾರು ವಿಷಯಗಳ ಬಗ್ಗೆ ಕ್ರಮಕೈಗೊಳ್ಳಲು ಸಕರ್ಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ಕೊರೊನಾ ಲಸಿಕೆ, ಮೂರನೇ ಅಲೆ ಹಾಗೂ ಬ್ಲ್ಯಾಕ್ ಫಂಗಸ್ : ಕೊರೋನಾದ ಮೂರನೇ ಅಲೆ ಎದುರಿಸಲಿಕ್ಕೆ ರಾಜ್ಯದಲ್ಲಿ 31 ಕಡೆ ಆಮ್ಲಜನಕ ತಯಾರಿ ಘಟಕಗಳನ್ನು ನಿಮರ್ಿಸಲಾಗುತ್ತಿದೆ ಮತ್ತು ಚಿಕ್ಕ ಮಕ್ಕಳ ಆರೋಗ್ಯ ಸುರಕ್ಷತೆಗಾಗಿ ಕ್ಷೇತ್ರದಲ್ಲಿ ಮಕ್ಕಳ ಆಸ್ಪತ್ರೆ ನಿಮರ್ಾಣ ಮಾಡಲಾಗುವುದು. ಬ್ಲ್ಯಾಕ್ ಫಂಗಸ್ ರೋಗಕ್ಕೆ ಧಾರಾಳವಾಗಿ ಔಷಧಿ ಲಭ್ಯವಿದ್ದು ಜಿಲ್ಲಾಸ್ಪತ್ರೆಯಲ್ಲಿ ಉಚಿತವಾಗಿ ನುರಿತ ವೈದ್ಯರಿಂದ ಆಪರೇಷನ್ ಕೂಡ ನಡೆಸಲಾಗುತ್ತಿದೆ. ನೇಕಾರರ ಸೊಸೈಟಿಗಳಲ್ಲಿ ಸಟರ್ಿಫಿಕೇಟ್ ಪಡೆದು 18 ವರ್ಷ ಮೇಲ್ಪಟ್ಟವರು ನೇರವಾಗಿ ಲಸಿಕೆ ಪಡೆಯಬಹುದು. ಕಾಂಗ್ರೆಸ್ಸಿನ ಅಪಪ್ರಚಾರಕ್ಕೆ ಲಸಿಕೆ ಪಡೆಯುವುದನ್ನು ನಿಲ್ಲಿಸಬೇಡಿ ಸಾಕಷ್ಟು ಲಸಿಕೆ ಸಂಗ್ರಹವಿದ್ದು ಪಡೆದು ಆರೋಗ್ಯವಂತರಾಗಿರಿ ಎಂದರು.

ನೇಕಾರ ನೇತಾರರಾದ ಜಿ.ಎಸ್ ಗೊಂಬಿ ಹಾಗೂ ಮನೋಹರ ಶಿರೋಳ ಸಕರ್ಾರದಿಂದ ವಿಶೇಷ ಪ್ಯಾಕೇಜ್ ತರುವಲ್ಲಿ ಅವಿರತ ಶ್ರಮ ವಹಿಸಿದ ಶಾಸಕ ಸಿದ್ದು ಸವದಿ ಕಾರ್ಯವೈಖರಿಯನ್ನು ಶ್ಲಾಘಿಸಿ ನೇಕಾರರ ಪರವಾಗಿ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ಸಮಯದಲ್ಲಿ ಬಿಡಿಸಿ ಸಿ ಬ್ಯಾಂಕ್ ನಿದರ್ೇಶಕ ಹಾಗೂ ಪಿಕೆಪಿಎಸ್ ಅಧ್ಯಕ್ಷ ಬಸನಗೌಡ ಪಾಟೀಲ, ಜಿಪಂ ಮಾಜಿ ಸದಸ್ಯ ಮಹಾಂತೇಶ ಹಿಟ್ಟಿನಮಠ, ಭಾಜಪ ಗ್ರಾಮೀಣ ಘಟಕದ ಪ್ರಧಾನ ಕಾರ್ಯದಶರ್ಿ ಮಹಾಲಿಂಗಪ್ಪ ಕುಳ್ಳೊಳ್ಳಿ, ಅರ್ಬನ್ ಬ್ಯಾಂಕ್ ಅಧ್ಯಕ್ಷ ಮಹಾಲಿಂಗಪ್ಪ ಕೋಳಿಗುಡ್ಡ, ಶಂಕರಗೌಡ ಪಾಟೀಲ್, ತಿಮ್ಮಾಪುರ ಶುಗಸರ್್ ಉಪಾಧ್ಯಕ್ಷ ಅಶೋಕಗೌಡ ಪಾಟೀಲ್, ಈರಪ್ಪ ದಿನ್ನಿಮನಿ ಪುರಸಭಾ ಸದಸ್ಯರಾದ ಶೇಖರ್ ಅಂಗಡಿ ರವಿ ಜವಳಗಿ ಬಸವರಾಜ ಹಿಟ್ಟಿನಮಠ ರಾಜು ಚಮಕೇರಿ ಪ್ರಹ್ಲಾದ ಸಣ್ಣಕ್ಕಿ ಚನ್ನಬಸು ಯರಗಟ್ಟಿ, ಶಿವಾನಂದ ಅಂಗಡಿ, ಚನ್ನಪ್ಪ ರಾಮೋಜಿ ಹಾಗೂ ನೇಕಾರ ಮುಖಂಡರಾದ ಲಕ್ಕಪ್ಪ ಚಮಕೇರಿ, ಜೈವಂತ ಕಾಗಿ, ಪ್ರಕಾಶ್ ಜೀರಗಾಳ, ಗುರುಪಾದ ಅಂಬಿ, ಮಹಾಲಿಂಗಪ್ಪ ಮುದ್ದಾಪುರ್, ಶಂಕರ ಮುರಗೋಡ, ಶಿವಾನಂದ ಹುಣಶ್ಯಾಳ, ಪ್ರಕಾಶ ಮರೆಗುದ್ದಿ, ವಿಕ್ರಂ ಕುಳ್ಳೂರ್, ಸುಧೀರ್ ಸುಣದೋಳಿ, ಬಸು ಚಮಕೇರಿ, ಸದಾಶಿವ್ ಜಿಡ್ಡಿಮನಿ, ರಾಘು ಗರಗಟ್ಟಿ ಇನ್ನು ಮುಂತಾದವರಿದ್ದರು.


ಸುದ್ದಿ ಓದಿ