ಕಾಗವಾಡ

ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಪಾಟೀಲ, ಉಪಾಧ್ಯಕ್ಷರಾಗಿ ಶಾಂತಿನಾಥ ಪಾಟೀಲ ಆಯ್ಕೆ

ನೂತನ ಅಧ್ಯಕ್ಷರಾಗಿ ಶ್ರೀನಿವಾಸ ಪಾಟೀಲ, ಉಪಾಧ್ಯಕ್ಷರಾಗಿ ಶಾಂತಿನಾಥ ಪಾಟೀಲ ಆಯ್ಕೆ

ಲೋಕದರ್ಶನ ವರದಿ 

ಕಾಗವಾಡ 03 : ತಾಲೂಕಿನ ಶೇಡಬಾಳ ಸ್ಟೇಶನ್ ಗ್ರಾಮದ ಪದ್ಮಾವತಿ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯುವ ಮುಖಂಡ ಶ್ರೀನಿವಾಸ ಪಾಟೀಲ ಮತ್ತು ಉಪಾಧ್ಯಕ್ಷರಾಗಿ ಶಾಂತಿನಾಥ ಪಾಟೀಲ ಅವಿರೋಧವಾಗಿ ಆಯ್ಕೆಗೊಂಡಿದ್ದು, ಅವರನ್ನು ಮಾಜಿ ಸಚಿವ ಶ್ರೀಮಂತ ಪಾಟೀಲ ಅವರು ಕೆಂಪವಾಡದ ಕಾರ್ಯಾಲಯದಲ್ಲಿ ಸೋಮವಾರ ದಿ. 03 ರಂದು ಸನ್ಮಾನಿಸಿ, ನಿಮ್ಮ ಅವಧಿಯಲ್ಲಿ ಸಂಘ ಪ್ರಗತಿಫಥದಲ್ಲಿ ಸಾಗಲಿ ಎಂದು ಶುಭ ಕೋರಿದ್ದಾರೆ.  ಈ ವೇಳೆ ಸಂಘದ ನಿರ್ದೇಶಕರಾದ ಸಂದೀಪ ಸಾಳುಂಕೆ, ಪೋಪಟ ಕವಟಗೆ, ಪ್ರವೀಣ ಪಾಟೀಲ, ಚಂದು ಮಮದಾಪೂರೆ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು. 


ಸುದ್ದಿ ಓದಿ