ಸಿರುಗುಪ್ಪ

ಲೋಕ ಕಲ್ಯಾಣಕ್ಕಾಗಿ ಜನಿಸಿದ ಕೃಷ್ಣನ ಕೊಡುಗೆ ಅಪಾರ: ಅಬ್ದುಲ್ ನಬಿ

ಲೋಕ ಕಲ್ಯಾಣಕ್ಕಾಗಿ ಜನಿಸಿದ ಕೃಷ್ಣನ ಕೊಡುಗೆ ಅಪಾರ: ಅಬ್ದುಲ್ ನಬಿ

ಸಿರುಗುಪ್ಪ 01: ಅವತಾರಪುರುಷ ಶ್ರೀಕೃಷ್ಣ ತನ್ನ ಬಾಲ್ಯ ವ್ಯವಸ್ಥೆಯಿಂದ ಲೋಕ ಕಲ್ಯಾಣಕ್ಕಾಗಿ ಜನಿಸಿದ ಕೃಷ್ಣನ ಕೊಡುಗೆ ಅಪಾರ ಸನ್ಮಾರ್ಗದಲ್ಲಿ ನಡೆ ಇರಿ  ಜಯ ಖಚಿತ ಎಂದು ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ನಬಿ ಅಭಿಪ್ರಾಯಪಟ್ಟರು.

ಇಬ್ರಾಹಿಮ್ ಮಂಜಿಲ್‍ನಲ್ಲಿ ಶ್ರೀಕೃಷ್ಣ ಜನ್ಮ ದಿನ ನೆನಪಿಸಿ ಸ್ಮರಿಸಿ ಕರ್ನಾಟಕ ಸರ್ಕಾರ ಜಿಲ್ಲಾ ಪಂಚಾಯತ್ ತಾಲ್ಲೂಕು ಆಡಳಿತ ಹಿಂದುಳಿದ ವರ್ಗ ಗಳ ಕಲ್ಯಾಣ ಅಭಿವೃದ್ಧಿ ಇಲಾಖೆ ತಾಲ್ಲೂಕು ಪಂಚಾಯತ್ ಸಭಾ ಭವನದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಶಾಸಕ ಎಂ ಎಸ್ ಸೋಮಲಿಂಗಪ್ಪ ಕೃಷ್ಣ ಭಾವಚಿತ್ರಕ್ಕೆ ಪುಷ್ಪ ಮಾಲೆ ಅರ್ಪಿಸಿ ಚಾಲನೆ ನೀಡಿ ಸ್ಮರಿಸಿ ಮಾತನಾಡಿದರು. 

ತಹಸೀಲ್ದಾರ್ ಎನ್ ಆರ್ ಮಂಜುನಾಥ ಸ್ವಾಮಿ ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಾಹಕ ಅಧಿಕಾರಿ  ಕೆವಿ ನಿರ್ಮಲಾ ಡಾ ಮಧುಸೂದನ್ ಶಿಕ್ಷಕ ಕಲಾವಿದ ಜೆ ನರಸಿಂಹಮೂರ್ತಿ ಸಾಕ್ಷರತಾ ಕಾರ್ಯಕರ್ತ ಅಬ್ದುಲ್ ನಬಿ, ಬಿ.ಸಿ.ಎಂ ಅಧಿಕಾರಿ ಎ. ಗಾದಿಲಿಂಗಪ್ಪ ಪೌರಾಯುಕ್ತ ಎಚ್ ಕೆ ರಾಘವೇಂದ್ರ ಗುರು ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ, ಎಂ ಸಿದ್ದಯ್ಯ ತೋಟಗಾರಿಕೆ, ಸಹಾಯಕ ಹಿರಿಯ ನಿರ್ದೇಶಕ ವಿಶ್ವನಾಥ ಗೌಡ ಕೃಷಿ, ಸಹಾಯಕ ನಿರ್ದೇಶಕ ನಜೀರ್ ಅಹ್ಮದ್  ಯಾದವ ಸಮಾಜದವರು ಮೊದಲಾದ ಗಣ್ಯರು ಇದ್ದರು.

ಸುದ್ದಿ ಓದಿ