ಮಹಲಿಂಗಪುರ

ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗೆ ಒತ್ತುಕೊಡಬೇಕು: ಸಿದ್ದು

ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗೆ ಒತ್ತುಕೊಡಬೇಕು: ಸಿದ್ದು

ಮಹಾಲಿಂಗಪುರ 16: ಜೀವನದುದ್ದಕ್ಕೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಕ್ರೀಡೆಗೆ ಒತ್ತುಕೊಡಬೇಕು ಎಂದು  ರಾಜ್ಯ ಕಿಸಾನ್ ಕಾಂಗ್ರೆಸ್ ಘಟಕದ ಸಂಚಾಲಕ ಸಿದ್ದು ಕೊಣ್ಣೂರ್ ಹೇಳಿದರು.

ಪ.ಪೂ. ಶಿಕ್ಷಣ ಇಲಾಖೆ ಬಾಗಲಕೋಟ ಹಾಗೂ ಸರಕಾರಿ ಪ. ಪೂ. ಮಹಾವಿದ್ಯಾಲಯ ಕೆಸರಗೊಪ್ಪ ಇವರ ಸಂಯುಕ್ತ ಆಶ್ರಯದ ಮೈದಾನದಲ್ಲಿ 2020-21 ನೇ ಸಾಲಿನ ಮಾ. 15ರಂದು ಮುಧೋಳ ತಾಲೂಕು ಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಕ್ರೀಡಾಪಟುಗಳು ಸೋಲು-ಗೆಲುವಿಗೆ ಪ್ರಾಧ್ಯಾನ್ಯತೆ ನೀಡದೆ ನಿಷ್ಪಕ್ಷಪಾತ ಆಟವಾಡಿ ಸ್ಪೂರ್ತಿ ಮೆರೆಯಬೇಕು ಅಲ್ಲದೆ ಇವರಿಗೆ ನಿರ್ಣಾಯಕರೂ ಸಹ ಪ್ರೋತ್ಸಾಹಿಸಬೇಕು ಎಂದರು.

ಶಾಸಕರ ಅನುಪಸ್ಥಿತಿಯಲ್ಲಿ ಸುಪುತ್ರ ವಿದ್ಯಾಧರ ಸಿದ್ದು ಸವದಿ ಕ್ರೀಡಾಕೂಟಕ್ಕೆ ಜ್ಯೋತಿ ಬೆಳಗಿಸುವ ಮುಖಾಂತರ ಚಾಲನೆ ನೀಡಿ ಮಾತನಾಡಿದರು. ಗ್ರಾಮೀಣ ಮಟ್ಟದಲ್ಲಿ ಪ್ರತಿಭೆ ಒರೆಗೆ ಹಚ್ಚಿದ ಸಾಧನೆ ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆಯುತ್ತದೆ. ಗ್ರಾಮಸ್ಥರು ಕೂಡ ಇಂತಹ ಕ್ರೀಡಾಪಟುಗಳಿಗೆ ಪ್ರೋತ್ಸಾಹಿಸಬೇಕು ಎಂದರು.

ಮುಧೋಳ ಸರ್ಕಾರಿ ಕಾಲೇಜ್ ಹಿರಿಯ ಪ್ರಾಚಾರ್ಯ ಪಿ.ಆಯ್ ಬಂಡಾರಿ ಅಧ್ಯಕ್ಷೀಯ ಭಾಷಣ ಮಾಡಿ ವಿದ್ಯಾರ್ಥಿಗಳು ಭವಿಷ್ಯದ ಸಾಧಕರಾಗಲು ಇಂತಹ ಕ್ರೀಡಾಕೂಟಗಳನ್ನು ಚಾಲೆಂಜ್ ಆಗಿ ತೆಗೆದುಕೊಳ್ಳಬೇಕು ಮತ್ತು ಇದರಿಂದ ಶಾರೀರಿಕ ಹಾಗೂ ಮಾನಸಿಕ ಸದೃಢತೆಯೂ ದೊರೆಯುತ್ತದೆ ಎಂದರು.

ಈ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ 18 ಕಾಲೇಜುಗಳು ಭಾಗವಹಿಸಿದ್ದವು. ವಿದ್ಯಾರ್ಥಿಗಳು ಕ್ರೀಡಾಜ್ಯೋತಿ ಹೊತ್ತು ತರುವುದು, ಶಿಕ್ಷಣ ಇಲಾಖೆ ಹಾಗೂ ಗಣ್ಯರು ಧ್ವಜಾರೋಹಣ ನೆರವೇರಿಸಿ,  ಜ್ಯೋತಿ ಬೆಳಗಿಸುವುದು ಕ್ರೀಡಾಕೂಟಕ್ಕೆ ಮೆರಗು ತಂದಿತು ಅಲ್ಲದೆ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸುವುದು ವಿಶೇಷವಾಗಿತ್ತು. ಈ ಸುಸಂದರ್ಭದಲ್ಲಿ ಘಟಪ್ರಭಾ ಸಿಪಿಐ, ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾದ ಶ್ರೀಶೈಲ ಬ್ಯಾಕೋಡವರನ್ನು ಹಾಗೂ ಅನೇಕ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಯಿತು.

ಪಿಎಸ್‍ಐ  ಜಿಎಸ್ ಉಪ್ಪಾರ್, ಮುಧೋಳ ತಾ. ಪಂ. ಅಧ್ಯಕ್ಷ ತಿಮ್ಮಣ್ಣ ಬಟಕುರ್ಕಿ, ರ.ಬ.ತಾ. ಪಂ. ಅಧ್ಯಕ್ಷರು  ಶಿವಾನಂದ ಮಂಟೂರ್,ಕೆಸರಗೊಪ್ಪ ಗ್ರಾ.ಪಂ. ಅಧ್ಯಕ್ಷೆ ರಾಜೇಶ್ವರಿ ಢವಳೇಶ್ವರ, ಜಿಪಂ ಸುಜಾತ ಸಿಂಗಾಡಿ, ತಾ ಪಂ ಸದಸ್ಯೆ ವೀಣಾ ದೇಸಾಯಿ,ಕೆ.ಗೋ ಪಿಕೆಪಿಎಸ್ ಅಧ್ಯಕ್ಷ ಈರಪ್ಪ ಭದ್ರ ಶೆಟ್ಟಿ, ಕೆ.ಗೋ ಗ್ರಾ.ಪಂ ಉಪಾಧ್ಯಕ್ಷ ಹನುಮಂತ ಮೋಪಗಾರ, ಪರಪ್ಪ ಬ್ಯಾಕೋಡ, ಮಾರುತಿ ಕರೋಶಿ, ಭೀಮಪ್ಪ ಸಂಶಿ, ಮಾರುತಿ ಬ್ಯಾಕೋಡ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಸಂಗಪ್ಪ ಹಲ್ಲಿ, ಮಾರುತಿ ತೇಜಪ್ಪಗೋಳ, ಪಿಡಿಓ ವಿದ್ಯಾ ಕುಳ್ಳೋಳಿ, 

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿದ್ದು ಸತ್ತಿಗೇರಿ ವಹಿಸಿ, ಉಪನ್ಯಾಸಕರಾದ ಬಿ.ಆರ್ ಶೇಗುಣಸಿ ನಿರೂಪಿಸಿ, ವಂದಿಸಿದರು.

ಸುದ್ದಿ ಓದಿ