ಆಗಸ್ಟ್ ೨೫ರಂದು ವಿಶೇಷ ಅನುಭಾವ ಗೋಷ್ಠಿ
ಲೋಕದರ್ಶನ ವರದಿ
ಹುಬ್ಬಳ್ಳಿ ೨೪: ಬಸವ ಕೇಂದ್ರ ವಚನ ಶ್ರಾವಣ ಕಾರ್ಯಕ್ರಮ ಮಂಗಳವಾರ ದಿನಾಂಕ ೨೫-೦೮-೨೦೨೬ ರಂದು ಸಂಜೆ ೬ ಗಂಟೆಗೆ ಕಂಚಗಾರಗಲ್ಲಿ ನಗರೇಶ್ವರ ಗುಡಿ ಹತ್ತಿರ, ಅನಸೂಯಾ ಅರಕೇರಿ ಅವರ ಮನೆಯಲ್ಲಿ ಆಯೋಜಿಸಲಾಗಿದೆ.
ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ ಅವರು ಬಸವಣ್ಣನವರ ಉಳ್ಳವರು ಶಿವಾಲಯ ಮಾಡುವರು ...ಎಂಬ ವಚನ ಕುರಿತು ಅನುಭಾವ ನೀಡಲಿದ್ದಾರೆ ಎಂದು ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ತಿಳಿಸಿದ್ದಾರೆ. ಬಸವಾಭಿಮಾನಿಗಳು ತಿಂಗಳ ಪರ್ಯಂತರ ನಡೆಯುವ ವಚನ ಶ್ರಾವಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಳ್ಳಬೇಕೆಂದು, ಯಶಸ್ವಿಗೊಳಿಸಬೇಕು ಎಂದು ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಅವರು ವಿನಂತಿಸಿದ್ದಾರೆ.