ಸಿರುಗುಪ್ಪ

ವಿಶೇಷ ಬೃಹತ್ ಲಸಿಕಾ ಅಭಿಯಾನ

ವಿಶೇಷ ಬೃಹತ್ ಲಸಿಕಾ ಅಭಿಯಾನ

ಸಿರುಗುಪ್ಪ 23: ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರಗಳು ದೇಶದಲ್ಲಿ ಕೊರೊನಾ ವೈರಸ್ ನಿಯಂತ್ರಿಸುವ ಉದ್ದೇಶದಿಂದ ವಿಶೇಷವಾಗಿ ಬೃಹತ್ ಲಸಿಕಾ ಅಭಿಯಾನವನ್ನು ಹಮ್ಮಿಕೊಂಡಿದೆ ಇದಕ್ಕೆ ಜನರು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಬಳ್ಳಾರಿ ಉಪ ವಿಭಾಗದ ಅಸಿಸ್ಟೆಂಟ್ ಕಮಿಷನರ್ ಡಾ. ಆಕಾಶ್ ಹೇಳಿದರು.  

ಬುಧುವಾರ ಸಿರುಗುಪ್ಪ ನಗರದ 1, 2ಮತ್ತು ವಿವಿಧ ವಾರ್ಡುಗಳಲ್ಲಿ ಅವರು ಜನರ ಮನೆಗಳಿಗೆ ತೆರಳಿ ಅವರ ಮನವೊಲಿಸಿ ಕೊರೊನಾ ಸೋಂಕನ್ನು ತಡೆಯಲು ಸಹಕರಿಸಬೇಕು ಎಂದು ಮನವಿ ಮಾಡಿ ಕೋವಿಡ್ -19ಲಸಿಕೆಯನ್ನು ಹಾಕಿಸುವಲ್ಲಿ ಡಾ. ಆಕಾಶ್ ಯಶಸ್ವಿ ಯಾದರು ಮತ್ತು ಕೊರೊನಾ ವೈರಸ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.   

ನಗರಸಭೆ ಪೌರಾಯುಕ್ತ ಕೆ. ಎಚ್‌. ರಾಘವೇಂದ್ರ ಗುರು ಸಹಾಯಕ ಕಾರ್ಯ ಪಾಲಕ  ಅಭಿಯಂತರರು ಎಂ. ಗಂಗಾಧರ ಗೌಡ ನಗರಸಭೆ ಅಧ್ಯಕ್ಷ ಡಿ. ನಾಗರಾಜ್ ಸದಸ್ಯರಾದ ಮಲ್ಲಿಕಾರ್ಜುನ, ನಾಗೇಂದ್ರ​‍್ಪ, ಲೋಕ ಶಿಕ್ಷಣ ನಿರ್ದೇಶನಾಲಯ ಸಾಕ್ಷರತಾ ಮಿಷನ್ ಪ್ರಾಧಿಕಾರ ಸದಸ್ಯ ಜನಾಭಿಪ್ರಾಯ ಮುಖಂಡ ಅಬ್ದುಲ್ ನಬಿ, ಅಂಗನವಾಡಿ ಕಾರ್ಯಕರ್ತೆ ಕೆ. ದುರ್ಗಾಭವಾನಿ, ಆಶಾ, ಕಾರ್ಯಕರ್ತೆ ಸಲೋಮಿ ಸ್ಟಾಫ್ ನರ್ಸ ಸ್ ಎಸ್‌. ಶ್ವೇತಾ, ಪ್ರೌಢಶಾಲೆ ಪಿಟಿ ಶಿಕ್ಷಕ ಕೆ. ವಿ. ದಾನಪ್ಪ, ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ನೌಷಾದ್ ಅಲಿ ಲಸಿಕಾ ತಂಡ ಸಿಬ್ಬಂದಿ ಇತರರಿದ್ದರು. 


ಸುದ್ದಿ ಓದಿ